ಗುರುಪುರ ಶ್ರೀ ವಜ್ರದೇಹಿ ಮಠದಲ್ಲಿ ವಿನೂತನ ಸೇವಾ ಸಂಸ್ಥೆಯಾಗಿರುವ ಕಲ್ಪತರು ಫೌಂಡೇಶನ್ ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕಲ್ಪತರು ಫೌಂಡೇಶನ್ ಮೂಲಕ ಅಶಕ್ತರಿಗೆ ಆಸರೆಯಾಗಲು ಪ್ರಾರಂಭಗೊಂಡ ಕಲ್ಪತರು ಫೌಂಡೇಶನ್ ಸಹಾಯದ ಅಗತ್ಯವುಳ್ಳರ ಪಾಲಿನ ವರವಾಗಿದೆ. ಸರಕಾರದಿಂದ ನೀಡಲಾಗುವ ಸೌಲಭ್ಯಗಳನ್ನು ಜನಸಾಮಾನ್ಯರ ಬಳಿ ತಲುಪಿಸುವ ಸದುದ್ದೇಶದಿಂದ ಪ್ರಾರಂಭಗೊಂಡಿರುವ ಸಂಸ್ಥೆಗೆ ಶುಭವಾಗಲಿ ಎಂದು ಹಾರೈಸಿದರು.

ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಶ್ರೀಗಳು ಮಾತನಾಡಿ, ಹಿಂದೂ ಸಮಾಜದ ಏಳಿಗೆಗಾಗಿ ಕಲ್ಪತರು ಫೌಂಡೇಶನ್ ಶ್ರಮಿಸುವುದು ಉತ್ತಮ ವಿಚಾರವಾಗಿದೆ. ಅಶಕ್ತರಿಗಾಗಿ ಸ್ಥಾಪನೆಗೊಂಡ ಫೌಂಡೇಶನ್ ಸಮಾಜದ ಬಡ ಬಗ್ಗರ ಪಾಲಿನ ಕಲ್ಪತರು ಆಗಲಿ ಎಂದರು.

ಮಂಗಳೂರು ಉತ್ತರ ಶಾಸಕರಾದ ಡಾ. ವೈ ಭರತ್ ಶೆಟ್ಟಿ ಮಾತನಾಡಿ, ಸರಕಾರದ ಯೋಜನೆಗಳು ಜನಸಾಮಾನ್ಯರಿಗೆ ಸಿಕ್ಕಾಗ ಯೋಜನೆಯ ಉದ್ಧೇಶ ಪೂರ್ಣಗೊಳ್ಳುತ್ತದೆ. ಯೋಜನೆಯ ಫಲಾನುಭವಿಗಳಿಗೆ ಸಹಾಯವಾಗುವ ದೃಷ್ಟಿಯಿಂದ ಕಲ್ಪತರು ಫೌಂಡೇಶನ್ ಕಾರ್ಯ ನಿರ್ವಹಿಸುವ ಮೂಲಕ ಇತರರಿಗೂ ಮಾದರಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ವಿ.ಎಹ್.ಪಿ ಮುಖಂಡರಾದ ಭುಜಂಗ ಕುಲಾಲ್ ಅದ್ಯಪಾಡಿ, ನವೀನ್ ಮೂಡುಶೆಡ್ಡೆ, ವಿ.ಜೆ ಮಧುರಾಜ್, ಸುಜಿತ್, ಉಪಸ್ಥಿತರಿದ್ದರು. ಬಿಜೆಪಿ ಮುಖಂಡರು ಹಾಗೂ ಕಲ್ಪತರು ಫೌಂಡೇಶನ್ ಸ್ಥಾಪಕರಾದ ಸಾಕ್ಷಾತ್ ಶೆಟ್ಟಿ ಕಾವೂರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಧನುಷ್ ರಾಜ್ ಪಚ್ಚನಾಡಿ ಸ್ವಾಗತಿಸಿ, ಪೃಥ್ವಿರಾಜ್ ಶೆಟ್ಟಿ ವಂದಿಸಿದರು. ವಿಶ್ವ ಕಜೆ ಕಾರ್ಯಕ್ರಮ ನಿರೂಪಿಸಿದರು.

