ಮಾಣಿಲ ಶ್ರೀಧಾಮ ಶ್ರೀಕ್ಷೇತ್ರ ಮಹಾಲಕ್ಷ್ಮಿ ದೇವಸ್ಥಾನದ ಶ್ರೀ ಶ್ರೀ ಶ್ರೀ ಯೋಗಿ ಕೌಸ್ತುಭ ಪರಪೂಜ್ಯರಾದ ಮೋಹನದಾಸ ಪರಮಹಂಸ ಸ್ವಾಮೀಜಿಗಳು ಈ ಶಕ್ತಿ ಸಂಚಯನ ಅಭಿಯಾನಕ್ಕೆ ಚಾಲನೆ ನೀಡಿ ಶುಭಾರ್ಶಿವಾದಗೈದರು. ಕಾರ್ಯಕ್ರಮವು ಭಜನೆಯೊಂದಿಗೆ ಪ್ರಾರಂಭಗೊಂಡು ಆ ಬಳಿಕ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು ಆಶೀರ್ವಚನಗೈದರು. ನಮ್ಮೊಳಗೆ ಜಾತಿ ಪದ್ಧತಿ ದೂರವಾಗಬೇಕು. ಎಲ್ಲರೂ ಹಿಂದೂ ಎಂದು ಒಗ್ಗಾಟ್ಟಾಗಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಪ್ರತಿಯೊಬ್ಬರು ಮಂತ್ರಾಕ್ಷತೆಯನ್ನು ಸ್ವೀಕರಿಸಿ 12 ದಿನ ವ್ರತ ಮಾಡಿ, ಪ್ರತಿಯೊಬ್ಬರು ಪೂಜಾ ಫಲವನ್ನು ಸ್ವೀಕರಿಸಬೇಕು. ಈ ಮಹಾ ಚಂಡಿಕಾ ಹೋಮದಿಂದ ಊರಿನ ಏಳಿಗೆ ಸಾಧ್ಯ ಎಂದರು.
ಆ ಬಳಿಕ ಮಹಾಪೂಜೆ ನಡೆಯಿತು. ಐದು ವಿವಿಧ ದೇವಿ ಆಲಯಗಳ ಮಂತ್ರಾಕ್ಷತೆಗೆ ಪೂಜೆ ಹಾಗೂ ಆಮಂತ್ರಣ ಪತ್ರಿಕೆಗೆ ಪೂಜೆ ನಡೆದು ಭಜನೆಯ ಮೂಲಕ ಪರಿಸರದ ಮನೆಗಳಿಗೆ ತೆರಳಿದ ಸ್ವಾಮೀಜಿಗಳು ಹಾಗೂ ಸೇರಿದ ಗಣ್ಯರು, ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮತ್ತು ಪವಿತ್ರ ಮಂತ್ರಾಕ್ಷತೆಯನ್ನು ವಿತರಿಸಿ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಹಿಂದೂ ಅನುದಾನಿತ ಪ್ರಾಥಮಿಕ ಶಾಲೆ ಪೆರ್ಮುದೆ ಇದರ ಸಂಚಾಲಕರಾದ ರಮೇಶ್ ರಾವ್, ಮಹಾ ಚಂಡಿಕಾ ಹೋಮ ಸಮಿತಿಯ ಗೌರವ ಅಧ್ಯಕ್ಷರಾದ ಭಾಗ್ಯಚಂದ್ರ ರಾವ್, ತೋಕೂರು ಕೊರಗಜ್ಜ ಸನ್ನಿಧಿಯ ಮೊಕ್ತೇಸರರಾದ ಮಾಧವ ಸುವರ್ಣ, ಗೆಳೆಯರ ಬಳಗ ಸುರತ್ಕಲ್ ಇದರ ಸ್ಥಾಪಕಾಧ್ಯಕ್ಷರಾದ ನಾಗೇಶ್ ಪೂಜಾರಿ, ಮಂಜಣ್ಣ ಸೇವಾ ಬ್ರಿಗೇಡ್‌ನ ಅಧ್ಯಕ್ಷರಾದ ರಂಜಿತ್ ಶೆಟ್ಟಿ, ಮಹಾ ಚಂಡಿಕಾ ಹೋಮ ಸಮಿತಿಯ ಪ್ರಧಾನ ಕಾರ್ಯದರ್ಶಿಳಾದ ವಿಜಯ ಅಮೀನ್ ಶಿವಾಜಿನಗರ, ಶಾರದಾ ಮಾತೃಮಂಡಳಿ ಶಿವಾಜಿನಗರದ ಅಧ್ಯಕ್ಷರಾದ ಶ್ರೀಮತಿ ಮಾಲಾತಿ ಶಿವಾಜಿನಗರ ಸೇರಿದಂತೆ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ಮತ್ತು ಹಲವು ಸಂಘ ಸಂಸ್ಥೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.