ಬ್ರಹ್ಮಾವರ : ರಸ್ತೆಗೆ ಅಡ್ಡ ಬಂದ ಚಿರತೆಗೆ ವೇಗವಾಗಿ ಚಲಿಸುತ್ತಿದ್ದ ಬೈಕ್ ಡಿಕ್ಕಿಯಾಗಿ ಚಿರತೆ ಸಾವನ್ನಪ್ಪಿ, ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಬ್ರಹ್ಮಾವರದ ನಾಲ್ಕೂರು ಪಂಚಾಯತ್ ವ್ಯಾಪ್ತಿಯ ನಂಚಾರಿನಲ್ಲಿ ನಡೆದಿದೆ.

ನಂಚಾರಿನ ಭಾಸ್ಕರ್ ಶೆಟ್ಟಿ ಗಾಯಗೊಂಡ ಬೈಕ್ ಸವಾರ. ತಡ ರಾತ್ರಿ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ನಂಚಾರು ಸಮೀಪ ಏಕಾಏಕಿ ಚಿರತೆ ರಸ್ತೆಗೆ ಅಡ್ಡ ಬಂದಿದೆ. ನಿಯಂತ್ರಣ ಕಳೆದುಕೊಂಡ ಬೈಕ್ ಚಿರತೆಗೆ ಡಿಕ್ಕಿಯಾಗಿದೆ.
ರಸ್ತೆ ಗೆ ಬಿದ್ದ ಬೈಕ್ ಸವಾರ ಭಾಸ್ಕರ್ ಗಂಭೀರ ಗಾಯಗೊಂಡಿದ್ದು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿರತೆ ಸ್ಥಳದಲ್ಲೇ ಸಾವನ್ನಪ್ಪಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.


