Mangalore and Udupi news
Blog

ಪುತ್ತೂರು : ಯುವತಿಗೆ ವಂಚನೆ ಪ್ರಕರಣ : ಆರೋಪಿ ಕೃಷ್ಣ ಜೆ ರಾವ್‌ಗೆ ಹೈಕೋರ್ಟ್ ಜಾಮೀನು…!!

ಪುತ್ತೂರು : ಮದುವೆಯಾಗುವುದಾಗಿ ನಂಬಿಸಿ, ದೈಹಿಕವಾಗಿ ಬಳಸಿಕೊಂಡ ಪ್ರಕರಣದಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಬಿಜೆಪಿ ಮುಖಂಡ ಪಿ.ಜಿ.ಜಗನ್ನಿವಾಸ್ ರಾವ್ ಪುತ್ರ ಶ್ರೀಕೃಷ್ಣ ಜೆ.ರಾವ್ ಇದೀಗ ಜೈಲಿನಿಂದ ಬಿಡುಗಡೆಗೊಂಡಿದ್ದಾನೆ.

ಆರೋಪಿಗೆ ಕರ್ನಾಟಕ ಹೈಕೋರ್ಟ್ ಸೆ.3ರಂದು ಜಾಮೀನು ಮಂಜೂರು ಮಾಡಿತ್ತು. ಬಳಿಕ ಪುತ್ತೂರು ನ್ಯಾಯಾಲಯದಲ್ಲಿ ಜಾಮೀನಿಗೆ ಸಂಬ0ಧಿಸಿದ ಭದ್ರತೆ ಮತ್ತಿತರ ಪ್ರಕ್ರಿಯೆಗಳನ್ನು ಸೆ.4ರಂದು ಮುಗಿಸಿ ಆರೋಪಿಯನ್ನು ಮಂಗಳೂರು ಜೈಲಿನಿಂದ ಬಿಡುಗಡೆಗೊಳಿಸಿ ಕರೆತರಲಾಗಿದೆ.

ಆರೋಪಿ ಪರ ಹೈಕೋರ್ಟ್ನಲ್ಲಿ ಖ್ಯಾತ ನ್ಯಾಯವಾದಿ ಪಿ.ಪಿ.ಹೆಗ್ಡೆ ವಾದಿಸಿದ್ದರು. ಪುತ್ತೂರು ನ್ಯಾಯಾಲಯದಲ್ಲಿ ಸುರೇಶ್ ರೈ ಪಡ್ಡಂಬೈಲು, ರಾಘವ ಪಿ ಮತ್ತು ದೀಪಕ್ ರೈ ವಾದಿಸಿದ್ದರು.

Related posts

Leave a Comment