Mangalore and Udupi news
Blog

ಕಾಸರಗೋಡು: 14 ಮಂದಿ ಪುರುಷರಿಂದ 16 ರ ಅಪ್ರಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ, ಪ್ರಕರಣ ದಾಖಲು.

ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ ಎಸಗಿದ ನಾಚಿಕೆಗೇಡಿನ ಘಟನೆ ಕಾಸರಗೋಡು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಎರಡು ವರ್ಷಗಳಲ್ಲಿ 16 ವರ್ಷದ ಬಾಲಕನ ಮೇಲೆ 14 ಮಂದಿ ಪುರುಷರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಸಹಾಯಕ ಶಿಕ್ಷಣ ಅಧಿಕಾರಿ, ರೈಲ್ವೆ ಪೊಲೀಸ್ ಪಡೆಯ ಸದಸ್ಯ ಸೇರಿದಂತೆ ಈ ಪ್ರಕರಣದಲ್ಲಿ ಪೊಲೀಸರು ಒಂಬತ್ತು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಲಿಪಶು ಬಾಲಕನ ತಾಯಿ ತನ್ನ ಮಗನ ಚಟುವಟಿಕೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನಂತರ ತಾಯಿ ಚೈಲ್ಡ್ ಲೈನ್ ಸಂಸ್ಥೆಗೆ ಮಾಹಿತಿ ನೀಡಿ, ಆ ನಂತರ ಸಂಸ್ಥೆಯವರು ಪೊಲೀಸರನ್ನು ಸಂಪರ್ಕಿಸಿದರು. ಪೊಲೀಸರು ಬಲಿಪಶು ಬಾಲಕನ ಹೇಳಿಕೆಯನ್ನು ದಾಖಲಿಸಿ, ಅದರ ಆಧಾರದ ಮೇಲೆ ಪೋಕ್ಸ್‌ ಕಾಯ್ದೆಯ ಅಡಿಯಲ್ಲಿ 14 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.

ಕಾಸರಗೋಡು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿ, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಒಂಬತ್ತು ಆರೋಪಿಗಳನ್ನು ಬಂಧಿಸಲಾಗಿದೆ. ಈ ಘಟನೆಯಲ್ಲಿ ಮುಸ್ಲಿಂ ಲೀಗ್, ಯೂತ್ ಲೀಗ್ ಕಾರ್ಯಕರ್ತನೂ ಭಾಗಿಯಾಗಿದ್ದು ಆತ ತಲೆಮರೆಸಿಕೊಂಡಿರುತ್ತಾನೆ.

ಆರೋಪಿಗಳು 25 ರಿಂದ 51 ವರ್ಷ ವಯಸ್ಸಿನ ಪ್ರಾಯದವರಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಇಡೀ ಪ್ರಕರಣವು ಮೊಬೈಲ್ ಡೇಟಿಂಗ್ ಅಪ್ಲಿಕೇಶನೊಂದಿಗೆ ಪ್ರಾರಂಭವಾಗಿ ಅದರ ಮೂಲಕ 14 ವಿಭಿನ್ನ ಜನರೊಂದಿಗೆ ಸಂಪರ್ಕಕ್ಕೆ ಬಲಿಪಶು ಬಂದಿದ್ದರು ಎನ್ನಲಾಗಿದೆ. ನಂತರ ಆರೋಪಿಗಳು ಕಾಸರಗೋಡು, ಕಣ್ಣೂರು, ಎರ್ನಾಕುಲಂ ಮತ್ತು ಕೋಝಿಕ್ಕೋಡ್ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಬಲಿಪಶು ಹುಡುಗನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ.

Related posts

Leave a Comment