ಮೂಡುಬಿದಿರೆ: ಸುಮಾರು ಹತ್ತುವರ್ಷಗಳ ಹಿಂದಿನ ಅಪಘಾತ ಪ್ರಕರಣಕ್ಕೆ ಸಂಬಂದಿಸಿದಂತೆ ಸಿ.ಜೆ. ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ ಆರೋಪಿ ವಿರುದ್ಧ ಆರೋಪವು ರುಜುವಾಗಿದ್ದು, ಶಿಕ್ಷೆ ಪ್ರಕಟಿಸಿದೆ.
2015ರ ಪ್ರಕರಣ:
2015ರ ಡಿಸೆಂಬರ್ 30ರಂದು ಆರೋಪಿ ಶ್ರೀನಿವಾಸ ಆರ್.ಎಂ ಎಂಬಾತ ನಿಡ್ಡೋಡಿ ಗ್ರಾಮದ ಕಲ್ಲಕುಮೇರು ಎಂಬಲ್ಲಿಯ ತಿರುವಿನ ಬಳಿ ಡಾಮಾರು ರಸ್ತೆಯಲ್ಲಿ ನಿಡ್ಡೋಡಿ ಕಡೆಯಿಂದ ಕಟೀಲು ಕಡೆಗೆ ಬಸ್ಸನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಕಟೀಲು ಕಡೆಯಿಂದ ನಿಡ್ಡೋಡಿ ಕಡೆಗೆ ಬರುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮುರಳೀಧರ ಬೆಳೆರಾಯ ಗಂಭೀರವಾಗಿ ಗಾಯಗೊಂಡು, ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಸಹ ಸವಾರ ಲಕ್ಷ್ಮಿ ನಾರಾಯಣ ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು.
ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿ ಸರ್ಕಾರಿ ಅಭಿಯೋಜಕಿ ಶೋಭಾ ಎಸ್. ವಾದ ಮಂಡಿಸಿದ್ದರು. ಮೂಡುಬಿದಿರೆ ಠಾಣೆಯ ಅಂದಿನ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ಕಾವೇರಮ್ಮ ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಆರೋಪಿಗೆ ನ್ಯಾಯಾಲಯ ಸೆ.3ರಂದು ನಾಲ್ಕು ವರ್ಷಗಳ ಜೈಲು ವಾಸ ಹಾಗೂ 6 ಸಾವಿರ ದಂಡವನ್ನು ವಿಧಿಸಿದೆ.