Mangalore and Udupi news
Blog

ಹಲವು ವಾಹನಗಳಿಗೆ ಟ್ರಕ್ ಡಿಕ್ಕಿ: ಕನಿಷ್ಠ 8 ಮಂದಿ ಮೃತ್ಯು, 20ಮಂದಿಗೆ ಗಾಯ

ಮುಂಬೈ: ವೇಗವಾಗಿ ಬಂದ ಟ್ರಕ್‌ವೊಂದು ನಿಯಂತ್ರಣ ತಪ್ಪಿ ಹಲವು ವಾಹನಗಳಿಗೆ ಡಿಕ್ಕಿಯಾಗಿ ಕನಿಷ್ಠ 8 ಮಂದಿ ಮೃತಪಟ್ಟಿದ್ದು, 20ಮಂದಿ ಗಾಯಗೊಂಡಿರುವ ಘಟನೆ ಪುಣೆಯ ನವಲೆ ಸೇತುವೆಯ ಸಮೀಪ ಗುರುವಾರ ವರದಿಯಾಗಿದೆ.

ಈ ಘಟನೆ ಸಿನ್ನಗಡ ಪೊಲೀಸ್ ಠಾಣಾ ವ್ಯಾಪ್ತಿಯ ಹೆದ್ದಾರಿಯಲ್ಲಿರುವ ಸೆಲ್ಸಿ ಪಾಯಿಂಟ್ ಸಮೀಪ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದಲ್ಲಿ ಟ್ರಕ್ 8 ವಾಹನಗಳಿಗೆ ಡಿಕ್ಕಿಯಾಗಿ 2 ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪುಣೆ ನಗರ ಪೊಲೀಸರು ತಿಳಿಸಿದ್ದಾರೆ.“ಅಪಘಾತದಲ್ಲಿ ಕನಿಷ್ಠ8 ಮಂದಿ ಮೃತಪಟ್ಟಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ” ಎಂದು ಉಪ ಪೊಲೀಸ್‌ ಆಯುಕ್ತ ಸಂಭಾಜಿ ಕದಮ್ ದ.ಡಪಡಿಸಿದಾರೆ ಎಂದು ವರದಿ ತಿಳಿಸಿದೆ.

Related posts

Leave a Comment