ರಿಯಾಸಿ: ಕಳೆದ ನಾಲ್ಕೈದು ದಿನಗಳಿಂದ ಜಮ್ಮು ಕಾಶ್ಮೀರದಲ್ಲಿ ಭಾರಿ ಮಳೆಯಾಗುತ್ತಿದೆ. ಮೇಘಸ್ಫೋಟ ಸಂಭವಿಸಿದ್ದು, ಎಲ್ಲೆಡೆ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ರಿಯಾಸಿಯಲ್ಲಿ ಮೇಘಸ್ಫೋಟದ ಬಳಿಕ ಎಲ್ಲೆಡೆ ಭೂಕುಸಿತ ಸಂಭವಿಸಿ ಇಡೀ ಮನೆಯೇ ಕುಸಿದು ಬಿದ್ದು ಒಂದೇ ಮನೆಯ 7 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ವರದಿಯಾಗಿದೆ.
ಭೂಕುಸಿತ ಸಂಭವಿಸಿದಾಗ ಕುಟುಂಬವು ನಿದ್ರಿಸುತ್ತಿತ್ತು ಎಂದು ಮಹೋರ್ ಶಾಸಕ ಮೊಹಮ್ಮದ್ ಖುರ್ಷಿದ್ ಹೇಳಿದ್ದಾರೆ. ಇದರಿಂದಾಗಿ ಇಡೀ ಮನೆ ಕುಸಿದು ನಿವಾಸಿಗಳು ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದಾರೆ.ಗ್ರಾಮಸ್ಥರು ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ ಏಳು ಶವಗಳನ್ನು ಹೊರತೆಗೆದಿದ್ದಾರೆ.
