ಒಲ್ಲದ ಮನಸ್ಸಿನಿಂದ ಬೀಳ್ಕೊಡಲು ಬಂದ ಜನಸಾಗರ | ಲಕ್ಷಾಂತರ ಜನಗಳಿಗೆ ಮಾಧುರಿ ಆನೆಯನ್ನು ಕಳಿಸಿಕೊಡಲು ಮನಸ್ಸೆ ಇರಲಿಲ್ಲ. ಊರು ತುಂಬಾ ಮನೆ ಮಗಳಂತೆ ಖುಷಿ ಖುಷಿಯಾಗಿ ಓಡಾಡಿಕೊಂಡು ಇರುತ್ತಿದ್ದ ಮಾಧುರಿ ಮೇಲೆ ಯಾರ ಕೆಟ್ಟ ಕಣ್ಣ ಬಿತ್ತೋ ಗೊತ್ತಿಲ್ಲ.
ಮಹಾರಾಷ್ಟ್ರ: ಮಹಾರಾಷ್ಟ್ರದ ಕೊಲ್ಲಾಪುರ
ಜಿಲ್ಲೆಯ ಶಿರೂರು ತಾಲೂಕಿನ ನಾಂದಿನಿ ಗ್ರಾಮದಲ್ಲಿ ಜೈನ ಮಠದ ಆಶ್ರಮದಲ್ಲಿ ಕಳೆದ ಸುಮಾರು 36 ವರ್ಷಗಳಿಂದ ವಾಸಿಸುತ್ತಿದ್ದ ಮಾಧುರಿ ಎಂಬ ಹೆಣ್ಣು ಆನೆ ವಿದಾಯ ಹೇಳಿದೆ. ಮಠದ ಪೂಜಾ ಕಾರ್ಯಗಳಿಗೆ ಬಳಕೆಯಾಗುತ್ತಿದ್ದ ಈ ಅನೆಯು ಇಡೀ ಊರಿಗೆ ಮತ್ತು ಸುತ್ತಮುತ್ತದ ಊರುಗಳಿಗೆ ಮನೆ ಮಗಳಾಗಿ ಆಶೀರ್ವದಿಸುತ್ತಿದ್ದಳು. ಕೇಲವು ದಿನಗಳ ಹಿಂದೆ ಸರ್ಕಾರದಿಂದ ಆನೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ఎంబ ನೋಟೀಸು ಬಂತು. ಬಲ್ಲ ಮೂಲಗಳಿಂದ ಬಂದ ವರದಿಯ ಪ್ರಕಾರ ಪೇಟಾದವರು ಬಂದು ಒಂದು ವಾರಗಳ ಕಾಲ ಇಲ್ಲಿ ಉಳಿದುಕೊಂಡು ಮಾಧುರಿಯ
ಕುರಿತು ತಪಾಸಣೆ ಮತ್ತು ಅವಳ ನಿರ್ವಹಣೆಯ ಬಗ್ಗೆ ಸರಿಯಾಗಿ ಗಮನಿಸಿ ಮಾಧುರಿಯನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ ಎಂದು ವರದಿಯನ್ನು ರಚಿಸಿ ಸರಕಾರಕ್ಕೆ ವರದಿಯನ್ನು ನೀಡುವಾಗ ಅವಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಸುಳ್ಳು ವರದಿ ನೀಡಿದ್ದಾರೆ ಎಂಬ ಆರೋಪಗಳು ಅಂಬಾನಿಯವರ ಕೇಳಿಬರುತ್ತಿದೆ. ಪ್ರಸ್ತುತ ಸರ್ಕಾರವು ಮಾಧುರಿಯನ್ನು
ವಂಟಾರ ವನ್ಯ ಕೇಂದ್ರದಲ್ಲಿ ಬಿಡಲು ಸರಕಾರ ಆದೇಶ ಹೊರಡಿಸಿದೆ. ಮಹಾದೇವಿ ಎಂದೂ ಕರೆಯಲ್ಪಡುವ ಮಾಧುರಿ ಸ್ಥಳೀಯ ಸಮುದಾಯದ ಹೃದಯವಾಗಿದ್ದಳು. ಮಕ್ಕಳು ಅವಳನ್ನು ನೋಡುತ್ತಾ ಬೆಳೆದರು. ಹಿರಿಯರು ಅವಳ ಉಪ್ಪತಿಯನ್ನು ಆಶೀರ್ವದಿಸಿದರು ಮತ್ತು ಪ್ರತಿ ಹಬ್ಬವೂ ಭಾಸವಾಯಿತು. ಅವಳ ನಿರ್ಗಮನವು ಅವಳೊಂದಿಗೆ ಪೂರ್ಣಗೊಂಡಂತ
ವಿದಾಯ ಕಣ್ಣೀರು : ಹೊಸ ಮನೆಗೆ ಮಹಾದೇವಿಯ ಹೃದಯಪೂರ್ವಕ ಪಯಣ
ಮಾಧುರಿ ಎಂದೂ ಕರೆಯಲ್ಪಡುವ 36 ವರ್ಷದ ಆನೆ, ಕೊಲ್ಲಾಪುರ ಮಠದಲ್ಲಿ 33 ವರ್ಷಗಳನ್ನು ಕಳೆದಿದ್ದು, ಗುಜರಾತ್ ನ ಜಾಮ್ ನಗರದಲ್ಲಿರುವ ಅಂಬಾನಿ ಕುಟುಂಬದ ಖಾಸಗಿ ಮೃಗಾಲಯ ಮತ್ತು ರಾಧೆ ಕೃಷ್ಣ ಎಲಿಫೆಂಟ್ ವೆಲ್ ಫೇರ್ ಟ್ರಸ್ಟ್ ಸೌಲಭ್ಯವಾದ ವಂಟಾರಾಗೆ ತೆರಳುವಾಗ ಭಕ್ತರು ಮತ್ತು ಗ್ರಾಮಸ್ಥರಿಂದ ಭಾವನಾತ್ಮಕ ವಿದಾಯ ಪಡೆಯಲಾಯಿತು.
ಜೀವನದ ಸರ್ವ ಸುಖ, ಸಮೃದ್ಧಿ ಸಂಬಂಧಗಳನ್ನು ತ್ಯಜಿಸಿ ಲೋಕ ಕಲ್ಯಾಣದ ದಾರಿಯಲ್ಲಿ ನಡೆಯುವ ಜೈನ ಮಠಾದೀಶರೊಬ್ಬರು ಬೇರೆ ದಾರಿಯಿಲ್ಲದೆ ತಮ್ಮ ಮತದ ಮಾಧುರಿ ಆನೆಯನ್ನು ಸರಕಾರಕ್ಕೆ ಒಪ್ಪಿಸಬೇಕಾದ ಸ್ಥಿತಿ ಬಂದಾಗ ಕಣ್ಣೀರು ಹಾಕಿರುವುದು ಮನಕಲಕುವ ದೃಶ್ಯವಾಗಿದೆ. ಇನ್ನಾದರೂ ನಮ್ಮ ಧರ್ಮದ ಉಳಿವಿಗಾಗಿ ಸಮಸ್ಥ ಜೈನ ಮತ್ತು ಹಿಂದೂ ಸಮಾಜ ಇಂದು ಚಿಂತಿಸಬೇಕಾದ ವಿಚಾರ.
ಅಹಿಂಸಾ ಪರಮೋ ಧರ್ಮ ಎನ್ನುವ ಮತದಲ್ಲಿ ಹಿಂಸೆಗೆ ಜಾಗವೆಲ್ಲಿಂದ..?
ಅನೇಕರನ್ನು ಕಣ್ಣೀರು ಹಾಕಿದೆ. ಗ್ರಾಮಸ್ಥರು ಅವಳು ಕೇವಲ ಆನೆಯಲ್ಲಿ ಅವಳು ನಮ್ಮವಳು ಎಂದು ಹೇಳುತ್ತಾರೆ. ಹಲವಾರು ಹೋರಾಟಗಳು ನಡೆದರು, ಮಾಧುರಿಯನ್ನು ಉಳಿಸಿಕೊಳ್ಳಲು ಗ್ರಾಮಸ್ಥರು ವಿಫಲರಾದರು. ಮಾಧುರಿಯನ್ನು ಬೀಳ್ಕೊಡುವಾಗ
ಜನರ ಕಣ್ಣಿರನ್ನು ನೋಡಿ ಮಾಧುರಿಯು ಕೂಡ ಕಣ್ಣಿರು ಹಾಕಿರುವುದು ಇಂದು ದೇಶದಾದ್ಯಂತ ದುಃಖಕರ ವಿಷಯವಾಗಿದೆ. ಮೂಕ ದೇವತೆಯಾಗಿದ್ದ ಮಾಧುರಿ ಈಗ ಪ್ರಾಣಿ ಸಂಗ್ರಹಾಲಯದ ಪ್ರಾಣಿಯಾಗಿ ಉಳಿಯುವ ಪರಿಸ್ಥಿತಿ ಬಂದಿದೆ.