Mangalore and Udupi news
Blog

ಕಾವಳಕಟ್ಟೆಯಲ್ಲಿ ಕಾರು-ದ್ವಿಚಕ್ರ ವಾಹನದ ನಡುವೆ ಅಪಘಾತ : ಸ್ಕೂಟರ್ ಸವಾರೆ, ಕಡಬ ಮೂಲದ ಯುವತಿ ಮೃತ್ಯು

ಪುತ್ತೂರು: ಕಾರು ಹಾಗೂ ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಸ್ಕೂಟ‌ರ್ ಸವಾರ ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಕಾವಳಕಟ್ಟೆ ಎಂಬಲ್ಲಿ ನ.19ರ ಬುಧವಾರ ಮಧ್ಯಾಹ್ನ ಸಂಭವಿಸಿದೆ. ಸ್ಕೂಟರ್ ಸವಾರೆ, ಕಡಬ ನಿವಾಸಿ ಸುನಿಲ್ ಎಂಬವರ ಪುತ್ರಿ ಅನನ್ಯಾ (21) ಮೃತರು. ಇನ್ನೋರ್ವ ಸವಾರೆ, ಗುರುವಾಯನಕೆರೆ ನಿವಾಸಿ ಪೃಥ್ವಿ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಮಂಗಳೂರು ಕಾಲೇಜಿನ ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿನಿಯರೆಂದು ತಿಳಿದು ಬಂದಿದೆ. ಇಬ್ಬರೂ ಬೆಳ್ತಂಗಡಿಯಿಂದ ಕಾಲೇಜಿಗೆ ಹೋಗುವ ವೇಳೆ ಬಂಟ್ವಾಳ- ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾವಳಕಟ್ಟೆಯಿಂದ ಎನ್.ಸಿ.ರೋಡ್ ಗೆ ಸಾಗುವ ರಸ್ತೆಯ ತಿರುವಿನಲ್ಲಿ ವ್ಯಾಗನಾರ್ ಕಾರು ಮತ್ತು ಹೊಂಡಾ ಆಕ್ಟಿವ್ ಮಧ್ಯೆ ಅಪಘಾತ ಸಂಭವಿಸಿದೆ.ಸ್ಥಳಕ್ಕೆ ಪುಂಜಾಲಕಟ್ಟೆ ಎಸ್.ಐ.ರಾಜೇಶ್ ಕೆ.ವಿ. ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

Leave a Comment