Mangalore and Udupi news
Blog

ಕೆಟ್ಟುನಿಂತ ಲಾರಿ, ಬದಿಯಲ್ಲಿ ಸಂಚರಿಸಿದ ಮತ್ತೊಂದು ಲಾರಿ ಚರಂಡಿಗೆ!; ಬೆಳ್ಮಣ್-ಮೂಡುಬಿದಿರೆ ಸಂಚಾರ ಬಂದ್!‌

ಮೂಡುಬಿದಿರೆ: ಮೂಡುಬಿದಿರೆಯಿಂದ ಪುತ್ತಿಗೆ ಮಾರ್ಗವಾಗಿ ಬೆಳ್ಮಣ್‌ ರಸ್ತೆ ಸಂಚಾರ ಕಳೆದ ಕೆಲ ಗಂಟೆಗಳಿಂದ ಸಂಪೂರ್ಣ ಬಂದ್‌ ಆಗಿದೆ. ಕಾರಣ ಪುತ್ತಿಗೆ ಬಳಿ ಹೆದ್ದಾರಿಯಲ್ಲಿ ಭಾರೀ ಗಾತ್ರದ ಲಾರಿ ಕೆಟ್ಟು ನಿಂತಿದ್ದು, ಬದಿಯಲ್ಲಿ ಸಂಚರಿಸಲು ಯತ್ನಿಸಿದ ಮತ್ತೊಂದು ಲಾರಿ ಚರಂಡಿಗೆ ಬಿದ್ದು ಈ ಟ್ರಾಪಿಕ್‌ ಜಾಮ್‌ ಉಂಟಾಗಿದೆ.

ನಿನ್ನೆ ಆ. ೧೭ರಂದು ಬೆಳ್ಮಣ್‌ ಕಡೆಯಿಂದ ಮೂಡುಬಿದಿರೆಗೆ ಬರುತ್ತಿದ್ದ ಲಾರಿ ಪುತ್ತಿಗೆ ಸಮೀಪ ಇಕ್ಕಟ್ಟಾದ ರಸ್ತೆಯಲ್ಲಿ ಕೆಟ್ಟು ನಿಂತಿತ್ತು. ರಸ್ತೆ ಬಹಳಷ್ಟು ಕಿರಿದಾಗಿದ್ದ ಕಾರಣ ವಾಹನಗಳು ಸಂಚರಿಸಲು ಹರಸಾಹಸ ಪಡುತ್ತಿತ್ತು. ಇಂದೂ ಕೂಡಾ ಲಾರಿಯನ್ನು ದುರಸ್ತಿಗೊಳಿಸಿ ತೆರವುಗೊಳಿಸಿರಲಿಲ್ಲ. ಕಂಡಂದಲೆ ಕಡೆಯಿಂದ ಬರುತ್ತಿದ್ದ ಲಾರಿಯನ್ನು ಚಾಲಕ ಇಲ್ಲಿ ಮುನ್ನುಗ್ಗಿಸಲು ಯತ್ನಿಸಿ ಚರಂಡಿಗೆ ಬಿದ್ದಿದೆ. ಇದರಿಂದ ರಸ್ತೆ ಸಂಪೂರ್ಣ ಬಂದ್‌ ಆಗಿದ್ದು, ಕಿ.ಮೀ. ದೂರ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿದೆ.

Related posts

Leave a Comment