ಮಾರ್ಪಳ್ಳಿಯಲ್ಲಿ ಗೆಳೆಯರ ಬಳಗ (ರಿ) ವತಿಯಿಂದ ನಡೆದ ಧ್ವಜಾರೋಹಣ ಕಾರ್ಯಕ್ರಮವನ್ನು ಉದ್ದೇಶಿಸಿ ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಸಮಿತಿ ಶ್ರೀವತ್ಸ ಡಿ ಗಾಂವ್ಸ್‌ಕರ್ ಮಾತನಾಡಿ 1857ಕ್ಕೆ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದರು ನಂತರ ಬ್ರಿಟಿಷರಿಂದ ಅಧಿಕಾರ ಮರಳಿ ಪಡೆಯಲು 90 ವರ್ಷಗಳ ಕಾಯಬೇಕಾಯಿತು ಇದನ್ನು ಅವಲೋಕಿಸಿದರೆ ನಮ್ಮ ಸಮಾಜದಲ್ಲಿ ಅಂದು ಇದ್ದ ಒಗ್ಗಟ್ಟಿನ ಕೊರತೆ ಎದ್ದು ಕಾಣಿಸುತ್ತದೆ ಮತ್ತು 1947ಕ್ಕೆ ನಮಗೆ ಕೇವಲ ಆಡಳಿತಾತ್ಮಕವಾಗಿ ಸ್ವಾತಂತ್ರ್ಯ ದೊರಕಿದೆ ಮಾನಸಿಕವಾಗಿ ಇಂದಿಗೂ ಅನೇಕ ವಿಚಾರಗಳಲ್ಲಿ ಪಾಶ್ಚಿಮಾತ್ಯರ ಚಿಂತನೆಯನ್ನು ನಮ್ಮ ಸಮಾಜ ಹೊಂದಿದೆ ಹಾಗಾಗಿ ಭಾರತವು ಸ್ವಾತಂತ್ರ್ಯದ ನೂರರ ಸಂಭ್ರಮ ಆಚರಿಸುವ ಸಂದರ್ಭ ನಾವು ನಮ್ಮ ಸಂಸ್ಕೃತಿಯನ್ನು ಸ್ವಯಂಪ್ರೇರಿತರಾಗಿ ಗೌರವಿಸಿ ಆಚರಿಸಿ ಬೆಳೆಸಬೇಕು ಎಂದು ಹೇಳಿದರು.


ವಿವಿಧೆಡೆ ನಡೆದ ಕಾರ್ಯಕ್ರಮಗಳಲ್ಲಿ ಉಡುಪಿ ನಗರದ ಸಂಘಟನಾ ಕಾರ್ಯದರ್ಶಿ ರೋಹಿತ್, ಕಾರ್ತಿಕ್, ಕಿಶೋರ್, ಅಂಕಿತಾ, ವಾಗ್ದೇವಿ, ಸಂಜನಾ, ರಂಜಿತ್ ಉಪಸ್ಥಿತರಿದ್ದರು.

