ದೈವಸ್ಥಾನದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಇಂದು ಬೆಳಿಗ್ಗೆ, ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಸುರೇಶ್ ಕೊಟ್ಟಾರಿಯವರು ದ್ವಜಾರೋಹಣ ಗೈಯುವ ಮೂಲಕ ಆಚರಿಸಲಾಯಿತು.
ಧ್ವಜಗೀತೆಯನ್ನು ಕುಮಾರಿ ಶ್ರೀವಲ್ಲಿ, ಹಾಗೂ ಕುಮಾರಿ ಪ್ರತೀಕ್ಷಾ ಹಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರುಗಳಾದ ಶ್ರೀಯುತ ಜಗನ್ನಾಥ ಶೆಟ್ಟಿ, ಶಿವಾಜಿ ಕರ್ಕೇರ, 9ನೇ ವಾರ್ಡ್ ಕಾರ್ಪೋರೇಟರ್ ಶ್ರೀಮತಿ ವೇದಾವತಿ, ಕೋಶಾಧಿಕಾರಿ ಗಿರೀಶ್ ಕರ್ಕೇರ, ಮಾಜಿ ಅಧ್ಯಕ್ಷರಾದ ಯೋಗೀಶ್ ಕುಳಾಯಿ, ಜೊತೆ ಕಾರ್ಯದರ್ಶಿ ಸದಾಶಿವ ಅಡ್ಕ ಹಾಗೂ ಸಮಿತಿಯ ಸದಸ್ಯರು, ಮತ್ತು ಗ್ರಾಮದ ದೇಶ ಭಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಭಾಕರ್ ಕುಳಾಯಿ ಹಾಗೂ ಪ್ರಮೋದ್ ಅಂಚನ್ ನೇರವೇರಿಸಿ ಕೊಟ್ಟರು.



ಕಾರ್ಯದರ್ಶಿ ರತನ್ ಕುಮಾರ್ ಇವರು ಧನ್ಯವಾದ ಸಮರ್ಪಿಸಿದರು.
ವೈದ್ಯನಾಥ ಫ್ರೆಂಡ್ ಕುಳಾಯಿ ಇವರ ವತಿಯಿಂದ ಸಿಹಿತಿಂಡಿಯ ವ್ಯವಸ್ಥೆ ಮಾಡಲಾಗಿತ್ತು.

