Mangalore and Udupi news
Blog

ಮಂಗಳೂರು : ಸಿಸಿಬಿ ಪೊಲೀಸರಿಂದ MDMA ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ…!!

ಮಂಗಳೂರು : ನಗರದ ಸಿಸಿಬಿ ಪೊಲೀಸರ ತಂಡ ಮಾಹಿತಿ ಮೇರೆಗೆ ಅಕ್ರಮವಾಗಿ ಎಮ್ ಡಿ ಎಮ್ ಎ ಮಾದಕ ವಸ್ತುವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ರಿಯಾಜ್ ಅಹಮ್ಮದ್ ಹಾಗೂ ಮೊಹರಮ ಪಹಾದ್ ಎಂದು ಗುರುತಿಸಲಾಗಿದೆ.

ಪ್ರಕರಣದ ವಿವರ : ಮಂಗಳೂರು ನಗರದ ಸಿಸಿಬಿ ಘಟಕದ ಪೊಲೀಸ್ ಉಪ-ನಿರೀಕ್ಷಕರಾದ ಸುದೀಪ್ ಎಮ್ ವಿ ರವರಿಗೆ ಬಾತ್ಮೀಧಾರರಿಂದ ದಿನಾಂಕ 11-08-2025 ರಂದು ಸಂಜೆ 03-15 ಗಂಟೆಗೆ KA20EU3711 ಬಜಾಜ್ ಪಲ್ಸರ್ ಬೈಕ್ ನಲ್ಲಿ MDMA ಮಾದಕ ವಸ್ತುವನ್ನು ಅಕ್ರಮವಾಗಿ ಇಟ್ಟುಕೊಂಡು ಮಾರಾಟ ಮಾಡಲು ಬರುತ್ತಿರುವುದಾಗಿ ಖಚಿತ ವರ್ತಮಾನ ಬಂದಿದ್ದು, ಅದರಂತೆ ಅಜೀಜುದ್ದೀನ್ ರೋಡ್, ಕಾರಸ್ಟ್ರೀಟ್, ಕುದ್ರೋಳಿ, ಲೇಡಿಹಿಲ್ ನಿಂದಾಗಿ ಚಿಲಿಂಬಿ ಗುಡ್ಡೆ ಕಡೆಗೆ ಹೋದಾಗ ಅಲ್ಲಿ ಚಿಲಿಂಬಿಗುಡ್ಡೆಯ ರಸ್ತೆಯ ಬಳಿ ಸಂಜೆ 04-35 ಗಂಟೆಗೆ ಇಬ್ಬರು ವ್ಯಕ್ತಿಗಳು ಪಲ್ಸರ್ ಬೈಕ್ ನಲ್ಲಿ ಕುಳಿತುಕೊಂಡಿದ್ದವರನ್ನು ಖಚಿತಪಡಿಸಿ ಸಂಜೆ 04-40 ಗಂಟೆಗೆ ದಾಳಿ ನಡೆಸಿ, ಅಪಾದಿತರಾದ 1) ರಿಯಾಜ್ ಅಹಮ್ಮದ್ 2) ಮೊಹಮ್ಮದ್ ಫಹಾದ್ ಎಂ ಇವರನ್ನು ವಶಕ್ಕೆ ಪಡೆದು, ವಿಚಾರಿಸಿದ್ದಲ್ಲಿ ತಾವು ಮಾದಕ ವಸ್ತು MDMA ನು ಮಾರಾಟ ಮಾಡುವ ಉದ್ದೇಶದಿಂದ ತಮ್ಮ ವಶದಲ್ಲಿ ಇಟ್ಟುಕೊಂಡಿರುವುದಾಗಿ ಇವರ ಪೈಕಿ ರಿಯಾಜ್ ಅಹಮ್ಮದ್ ನು ಬೈಕ್ ನ ಟ್ಯಾಂಕ್ ಕವರ್ ನಲ್ಲಿ ಇಟ್ಟಿದ್ದ 12.63 ಗ್ರಾಂ ತೂಕದ(ಅದಾಂಜು ಮೌಲ್ಯ ರೂ.2,60,000/-) MDMA ಮತ್ತು ಅರೋಪಿ ಮೊಹಮ್ಮದ್ ಫಹಾದ್ ನ ಬ್ಯಾಗ್ ನಲ್ಲಿ ಇಟ್ಟಿದ್ದ 11.65 ಗ್ರಾಂ ತೂಕದ MDMA (ಅಂದಾಜು ಮೌಲ್ಯ ರೂ.2,40,000/-) ಅನ್ನು ಮತ್ತು ಇವರು ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಗಳು-2, ಡಿಜಿಟಲ್ ತೂಕ ಮಾಪಕ-1, ಸಣ್ಣ ಸಣ್ಣ ಜಿಪ್ ಲಾಕ್ ಇರುವ ಖಾಲಿ ಪ್ಲಾಸ್ಟಿಕ್ ಕವರ್ ಗಳು-30, ನಗದು ರೂ.1150/-, ಕೃತ್ಯಕ್ಕೆ ಬಳಸಿದ ಬೈಕ್-1 ಮತ್ತು ಬ್ಯಾಗ್-1 ಅನ್ನು ಪಂಚರ ಸಮಕ್ಷಮ ಮಹಜರು ಮೂಲಕ ಸ್ವಾಧೀನಪಡಿಸಿ, ಅಪಾದಿತರು ನಿಷೇಧಿತ ಮಾದಕವಸ್ತುವನ್ನು ಮಾರಾಟ ಮಾಡುವ ಉದ್ದೇಶದಿಂದ ತಮ್ಮ ವಶದಲ್ಲಿ ಇಟ್ಟುಕೊಂಡಿರುವುದರಿಂದ ಇವರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಪಿರ್ಯಾಧಿಯ ಸಂಕ್ಷೀಪ್ತ ಸಾರಾಂಶವಾಗಿರುತ್ತದೆ.

Related posts

Leave a Comment