Mangalore and Udupi news
Blog

ಉಡುಪಿ: ಮನೆಗೆ ನುಗ್ಗಿ ಸ್ನೇಹಿತರಿಂದಲೇ ವ್ಯಕ್ತಿಯ ಬರ್ಬರ ಹತ್ಯೆ…!

ಉಡುಪಿ: ಸ್ನೇಹಿತರೇ ನಡುರಾತ್ರಿ ಮನೆಗೆ ನುಗ್ಗಿ ಗೆಳೆಯನನ್ನು, ಆತನ ಪತ್ನಿ, ತಾಯಿ ಹಾಗೂ ಮಗುವಿನ ಎದುರೇ ಬರ್ಬರವಾಗಿ ಹತ್ಯೆಗೈದ ಘಟನೆ ಪುತ್ತೂರಿನ ಸುಬ್ರಹ್ಮಣ್ಯ ನಗರದ ಲಿಂಗೋಟ್ಟುಗುಡ್ಡೆಯಲ್ಲಿ ನಡೆದಿದೆ.


ಹತ್ಯೆಯಾದ ವ್ಯಕ್ತಿಯನ್ನು ಪೈಂಟಿಂಗ್ ವೃತ್ತಿಯ ವಿನಯ್ ದೇವಾಡಿಗ (40) ಎಂದು ಗುರುತಿಸಲಾಗಿದೆ.

ವಿನಯ್ ದೇವಾಡಿಗ ಎಂದಿನಂತೆ ಮನೆಯಲ್ಲಿ ಊಟ ಮಾಡಿ ಮಲಗಿದ್ದ ಸಂದರ್ಭದಲ್ಲಿ ಮಂಗಳವಾರ ರಾತ್ರಿ 11.45 ಸುಮಾರಿಗೆ ಜೋರಾಗಿ ಮನೆಯ ಬಾಗಿಲು ಬಡಿದಿದ್ದಾರೆ. ಭಯಗೊಂಡ ಪತ್ನಿ ಮನೆಯ ತೆರೆದಾಗ ವಿನಯ್ ಇದ್ದಾನ ಎಂದು ಕೇಳಿದ್ದಾರೆ. ತಕ್ಷಣ ಮೂವರು ಮಾರಕಾಸ್ತ್ರದಿಂದ ಬೆಡ್ ರೂಮ್‌ಗೆ ನುಗ್ಗಿ ವಿನಯ್ ಗೆ ದಾಳಿ ಮಾಡಿದ್ದಾರೆ.

ಇದನ್ನು ತಡೆಯಲು ಬಂದ ಪತ್ನಿಗೂ ಗಾಯವಾಗಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Related posts

Leave a Comment