ಉಡುಪಿ: ನಗರದ ಸಮೀಪ ವ್ಯಕ್ತಿಯೊಬ್ಬರು ಟೆಲಿಗ್ರಾಂ ಆಪ್‌ನಲ್ಲಿ ಬಂದ 3011 ಎಂಬ ಗ್ರೂಪ್‌ನಲ್ಲಿ ಇನ್ವೆಸ್ಟ್‌ಮೆಂಟ್ ಲಾಭಾಂಶದ ಕುರಿತಾಗಿ ಮೆಸೇಜ್ ಬಂದಿದ್ದು, ಹೊಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡಿವುದಾಗಿ ಹೇಳಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಘಟನೆ ನಡೆದಿದೆ.
ವಂಚನೆಯಾದ ವ್ಯಕ್ತಿ ಉದಯ್ ಕುಮಾರ್ ಎಂದು ತಿಳಿದು ಬಂದಿದೆ. ವಂಚನೆಗೈದ ಆರೋಪಿ ಪ್ರವೀಣ್ ಕುಮಾರ್ ಎಂದು ತಿಳಿಯಲಾಗಿದೆ.
ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ: ಪಿರ್ಯಾದಿದಾರರಾದ ಉದಯ್ ಕುಮಾರ್ ಇವರು ತನ್ನ ಮೊಬೈಲ್‌ನಲ್ಲಿ ಅಧ್ಯಯನಕ್ಕಾಗಿ ಟೆಲಿಗ್ರಾಂ ಆ್ಯಪ್‌ನ್ನು ಉಪಯೋಗಿಸುತ್ತಿದ್ದು, ದಿನಾಂಕ 20/06/2025 ರಂದು ಟೆಲಿಗ್ರಾಂ ಆಪ್‌ನಲ್ಲಿ ಬಂದ 3011 ಎಂಬ ಗ್ರೂಪ್‌ನಲ್ಲಿ ಇನ್ವೆಸ್ಟ್‌ಮೆಂಟ್ ಲಾಭಾಂಶದ ಕುರಿತಾಗಿ ಮೆಸೇಜ್ ಬರುತ್ತಿದ್ದು, ಗ್ರೂಪಿನ ಅಡ್ಮಿನ್ ನೀಡಿದ https://t.me/KELLY_5509 ಎಂಬ ಯೂಸರ್ ನೇಮ್‌ಗೆ ಹೋಗಿದ್ದು, ಅದರಲ್ಲಿ ರೂಪಾಯಿ 5000/- ಮೊತ್ತವನ್ನು ಹೂಡಿಕೆ ಮಾಡಿದರೆ 30% ರಿಂದ 50% ಲಾಭಾಂಶ ನೀಡುತ್ತೇವೆಂದು ಸಂದೇಶ ಕಳುಹಿಸಿರುವುದನ್ನು ನಂಬಿ ಪಿರ್ಯಾದಿದಾರರು ದಿನಾಂಕ 20/06/2025 ರಿಂದ ದಿನಾಂಕ 08/10/2025 ರ ವರೆಗೆ ಒಟ್ಟು ರೂಪಾಯಿ 42,75,103/- ಹಣವನ್ನು ತನ್ನ ಎಸ್‌ಬಿಐ ಹಾಗೂ ಕೆನರಾ ಬ್ಯಾಂಕ್ ಖಾತೆಯಿಂದ ವರ್ಗಾಯಿಸಿರುತ್ತಾರೆ. ದಿನಾಂಕ 03/08/2025 ರಂದು ಪಿರ್ಯಾದಿದಾರರು Trusted Venture Capital Ltd. ಎಂಬ ಟೆಲಿಗ್ರಾಂ ಗ್ರೂಪನ್ನು ಓಪನ್ ಮಾಡಿದ್ದು, ಅದರಲ್ಲಿ ಪ್ರವೀಣ್ ಕುಮಾರ್ ಎಂಬ ವ್ಯಕ್ತಿಯು ಟ್ರೇಡಿಂಗ್ ಬಗ್ಗೆ ಚಾಟ್ ಮಾಡುತ್ತಿದ್ದು, ಆತ ನೀಡಿದ UPI ID ಗೆ ದಿನಾಂಕ 03/08/2025 ರಿಂದ 29/10/205 ರ ವರೆಗೆ ಒಟ್ಟು 6,92,000/- ಹಣವನ್ನು ವರ್ಗಾವಣೆ ಮಾಡಿರುತ್ತಾರೆ. ದಿನಾಂಕ 03/08/2025 ರಂದು Coinbase Trade Investment ಎಂಬ ಟೆಲಿಗ್ರಾಂ ಗ್ರೂಪನ್ನು ಓಪನ್ ಮಾಡಿದ್ದು, ಅದರಲ್ಲಿ AGENT BERNARD ಎಂಬ ವ್ಯಕ್ತಿಯು ದಿನಾಂಕ 03/09/2025 ರಿಂದ 05/10/2025 ರ ವರೆಗೆ ಒಟ್ಟು ರೂಪಾಯಿ 1,81,500/- ಹಣವನ್ನು ವರ್ಗಾವಣೆ ಮಾಡಿರುತ್ತಾರೆ.ಪಿರ್ಯಾದಿದಾರರು ಅಪರಿಚಿತರು ನೀಡಿದ ವಿವಿಧ ಖಾತೆಗಳಿಗೆ ಒಟ್ಟು ರೂಪಾಯಿ 51,48,603/- ಹಣ ವರ್ಗಾವಣೆ ಮಾಡಿದ್ದು, ಆರೋಪಿತರು ಪಿರ್ಯಾದಿದಾರರು ಹಾಕಿದ ಹಣವನ್ನಾಗಲಿ ಅಥವಾ ಲಾಭದ ಹಣವನ್ನಾಗಲಿ ನೀಡದೇ ಪಿರ್ಯಾದಿದಾರರಿಗೆ ವಂಚಿಸಿರುವುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೇ ಅಪರಾಧ ಕ್ರಮಾಂಕ 59/2025 ಕಲಂ: 66(ಸಿ), 66(ಡಿ) ಐ.ಟಿ. ಆಕ್ಟ್ & ಕಲಂ: 318(4) BNS ರಂತೆ ಪ್ರಕರಣ ದಾಖಲಾಗಿರುತ್ತದೆ

