ಬ್ಲೂ ಫ್ಲಾಗ್ ಬೀಚ್ ಹಾನಿ
ಪಡುಬಿದ್ರಿ: ಸುರಿಯುತ್ತಿರುವ ಮಳೆಗಾಳಿಯಿಂದಾಗಿ ಪಡುಬಿದ್ರಿ ಪ್ರದೇಶದಲ್ಲಿ ಕಡಲಿ ಅಬ್ಬರ ತೀವೃಗೊಂಡಿದ್ದು, ಬ್ಲೂ ಫ್ಲಾಗ್ ಬೀಚ್ ಗೆ ಹಾನಿಯಾಗಿದೆ.
ಈ ಬಗ್ಗೆ ಮಾತನಾಡಿದ ಬ್ಲೂ ಫ್ಲಾಗ್ ಬೀಚ್ ಮುಖ್ಯಸ್ಥ ವಿಜಯ ಶೆಟ್ಟಿ, ಕಡಲಿನ ತೆರೆಗಳ ಅಬ್ಬರ ಅಧಿಕಗೊಂಡ ಕಾರಣದಿಂದ ನಮ್ಮ ಬೀಚ್ ನಲ್ಲಿ ಕಡಲು ಕೊರೆತ ಆರಂಭಗೊಂಡಿದ್ದು, ಇದೀಗ ಪಾತ್ ವೇ ಗೆ ಹಾಕಲಾದ ಇಟರ್ಲಾಕ್ ಗೆ ಹಾನಿಯಾಗಿದ್ದು, ಅದು ಕಡಲು ಪಾಲಾಗುವ ಸಾಧ್ಯತೆ ಇದ್ದ ಕಾರಣ ಇಂಟರ್ಲಾಕ್ ಗಳನ್ನು
ಸುರಕ್ಷಿತವಾಗಿ ತೆರವು ಮಾಡಿ ಬೇರೆಡೆಗೆ ಸಾಗಿಸಿ ಭದ್ರ ಪಡಿಸಲಾಗಿದೆ ಎಂದರು.
ಪಡುಬಿದ್ರಿಯ ಬ್ಲೂ ಫ್ಲಾಗ್ ಮಾನ್ಯತೆ ಪಡೆದ ಪ್ರವಾಸಿಗರ ನೆಚ್ಚಿನ ತಾಣ ಬ್ಲೂ ಫ್ಲಾಗ್ ಬೀಚ್ ಗೆ ಈ ಹಿಂದೆಯೂ ಕಡಲು ದಾಳಿ ನಡೆಸಿ ಬಹಳಷ್ಟು ಹಾನಿ ಎಸಗಿದ್ದು, ಇದೀಗ ಮತ್ತೆ ಕಡಲು ತನ್ನ ಆಕ್ರೋಶವನ್ನು ಬ್ಲೂ ಫ್ಲಾಗ್ ಬೀಚ್ ನತ್ತ ಬೀರಿದ್ದು ಪೂರಕ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಹಾನಿಯ ಪ್ರಮಾಣ ಅಧಿಕವಾಗುವ ಸಾಧ್ಯತೆ ಅಲ್ಲಗಲೆಯುವಂತ್ತಿಲ್ಲ.

previous post