ಸುರತ್ಕಲ್ : ಶ್ರೀ ಕೃಷ್ಣ ಯುವಕ ವೃಂದ (ರಿ) 8’ಎ’ ಬ್ಲಾಕ್ ಕೃಷ್ಣಾಪುರ ಇದರ ಪ್ರಾಯೋಜಕತ್ವದಲ್ಲಿ ಪಣಂಬೂರು ಶ್ರೀ ಕೋಡಬ್ಬು ದೈವಸ್ಥಾನ 5ನೇ ಬ್ಲಾಕ್ ಕೃಷ್ಣಾಪುರ ಶ್ರೀ ನಾಗದೇವರ ವರ್ಧಂತ್ಯುತ್ಸವದ ಪ್ರಯುಕ್ತ ದಿನಾಂಕ 27-12-2024ನೇ ಶುಕ್ರವಾರ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ರಾತ್ರಿ ಗಂಟೆ 9-00ಕ್ಕೆ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರು ಮಂಜೇಶ್ವರ ಅಭಿನಯಿಸುವ ತುಳು ನಾಟಕ “ಕಲ್ಜಿಗದ ಮಾಯ್ಕಾರೆ ಪಂಜುರ್ಲಿ” ಪ್ರದರ್ಶನ ನಡೆದಿದೆ.
ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷಕ್ಷತೆಯನ್ನು ಮಂಗಳೂರು ನಗರ ಉತ್ತರ ಶಾಸಕ ಡಾ. ವೈ.ಭರತ್ ಶೆಟ್ಟಿ ವಹಿಸಿದ್ದರು. ದೀಪ ಪ್ರಜ್ವಲನೆಯನ್ನು ಬಿಜೆಪಿ ದಕ್ಷಿಣಕನ್ನಡ ಜಿಲ್ಲೆ ಉಪಾಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸುರತ್ಕಲ್ ಅನುವಂಶಿಕ ಆಡಳಿತ ಮೊತ್ತೇಸರರಾದ ವೇ.ಮೂ ಐ. ರಮಾನಂದ ಭಟ್ ಆಶೀರ್ವಚನ ನೀಡಿದರು, ಶುಭಾಂಶoಸನೆ ಸುರತ್ಕಲ್ ಇಡ್ಯಾ ಪಣಂಬೂರು ಶ್ರೀ ಕಾಂತೇರಿ ಧೂಮಾವತಿ ದೈವಸ್ಥಾನದ ಆಡಳಿತ ಮೊತ್ತೇಸರರಾದ ಮಂಜುಕಾವ (ಪಿ.ಟಿ.ರೈ) ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಮಹಾನಗರಪಾಲಿಕೆ ಸದಸ್ಯರಾದ ಲಕ್ಷ್ಮೀ ಶೇಖರ್, ಬಿಜೆಪಿ ದ.ಕನ್ನಡ ಜಿಲ್ಲೆ ಯುವಮೋರ್ಛಾ ಪ್ರಧಾನ ಕಾರ್ಯದರ್ಶಿ ಭರತ್‌ರಾಜ್, ಗೆಳೆಯರ ಬಳಗ ಸುರತ್ಕಲ್ ಇದರ ಅಧ್ಯಕ್ಷ ನಾಗೇಶ್ ಪೂಜಾರಿ ಕೋಡಿಕೆರೆ, ಕೇಶವ ಸನಿಲ್ ಭಂಡಾರಮನೆ ನಟ್ಟಿಲ್ ಬರ್ಕೆ, ಯುವ ಉದ್ಯಮಿ ಪ್ರಶಾಂತ್ ಮೂಡಾಯಿಕೋಡಿ, ಬಿಜೆಪಿ ಮಂಗಳೂರು ನಗರ ಉತ್ತರ ಉಪಾಧ್ಯಕ್ಷ ಮಹೇಶ್ ಮೂರ್ತಿ, 5ನೇ ಬ್ಲಾಕ್ ಕೃಷ್ಣಾಪುರ ಶ್ರೀ ಕೋಡ್ಗಬ್ಬು ದೈವಸ್ಥಾನದ ಅಧ್ಯಕ್ಷ ಸದಾನಂದ ಸನಿಲ್, ಲೋಕೇಶ್ ಗುರಿಕಾರ್ ಗುರಿಕಾರರು, ಅಣ್ಣಪ್ಪ ದೇವಾಡಿಗ ಕೋಶಾಧಿಕಾರಿ ಪಣಂಬೂರು ಶ್ರೀ ಕೋಡ್ಲಬ್ಬು ದೈವಸ್ಥಾನ 5ನೇ ಬ್ಲಾಕ್ ಕೃಷ್ಣಾಪುರ, ಚಂದ್ರಶೇಖರ ರೈ ಕಾರ್ಯದರ್ಶಿ ಪಣಂಬೂರು ಶ್ರೀ ಕೋಡಬ್ಬು ದೈವಸ್ಥಾನ 5ನೇ ವಿಭಾಗ ಕೃಷ್ಣಾಪುರ, ದಯಾನಂದ ಪ್ರಧಾನ ಅರ್ಚಕರು ಪಣಂಬೂರು ಶ್ರೀ ಕೋಡ್ಲಬ್ಬು ದೈವಸ್ಥಾನ 5ನೇ ವಿಭಾಗ ಕೃಷ್ಣಾಪುರ, ಎ.ಪಿ. ಮೋಹನ್ ಗಣೇಶಪುರ ಅಧ್ಯಕ್ಷರು ಸೇವಾ ಚಾರಿಟೇಬಲ್ ಟ್ರಸ್ಟ್ (ರಿ) ಕೃಷ್ಣಾಪುರ, ಸುಂದರ್ ಬಂಗೇರ ಸಲಹೆಗಾರರು ಶ್ರೀ ಕೃಷ್ಣ ಯುವಕ ವೃಂದ (ರಿ) ಕೃಷ್ಣಾಪುರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸರಕಾರಿ ಶಾಲಾ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಗಣ್ಯರ ಸಮ್ಮುಖದಲ್ಲಿ ನಡೆಯಿತು. ಈ ವೇಳೆ ಶ್ರೀ ಕೃಷ್ಣ ಯುವಕ ವೃಂದ (ರಿ) ಇದರ ಅಧ್ಯಕ್ಷ ಮನೋಜ್ ಅಮೀನ್, ಗೌರವಾಧ್ಯಕ್ಷ ವಸಂತ ಕೋಟ್ಯಾನ್, ಉಪಾಧ್ಯಕ್ಷ ರತನ್‌ರಾಜ್ ಸೇರಿದಂತೆ ನವೀನ್ ಕುಮಾರ್ ಉಪಸ್ಥಿತರಿದ್ದರು.
