Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಕಣಿಯೂರು ಮೂಲದ ನವವಿವಾಹಿತೆ ಆತ್ಮಹತ್ಯೆಗೆ ಶರಣು

ಬೆಂಗಳೂರು : ಕಣಿಯೂರು ಮೂಲದ ನವವಿವಾಹಿತ ಮಹಿಳೆಯೊಬ್ಬರು ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಜಾಲಹಳ್ಳಿಯಲ್ಲಿ ನಡೆದಿದೆ.

ಮೃತರನ್ನು ಪೂಜಾಶ್ರೀ (23) ಎಂದು ಗುರುತಿಸಲಾಗಿದೆ.

ಪೂಜಾಶ್ರೀ ಪುತ್ತೂರಿನ ಕಣಿಯೂರು ಗ್ರಾಮದ ಬಾಕಿಮಾರು ನಿವಾಸಿಯಾಗಿದ್ದು, ಬೆಳ್ತಂಗಡಿಯ ಪಡಂಗಡಿ ಬರಾಯ ನಿವಾಸಿ ಪ್ರಕಾಶ್ ಎಂಬವರನ್ನು 10 ತಿಂಗಳ ಹಿಂದೆ ವಿವಾಹವಾಗಿದ್ದರು. ಕೆಲಸ ಹುಡುಕಲು ಕಳೆದ ಎರಡು ತಿಂಗಳ ಹಿಂದೆ ಪೂಜಾಶ್ರೀಯನ್ನು ಪತಿ ಪ್ರಕಾಶ್ ಬೆಂಗಳೂರಿನಲ್ಲಿರೋ ತನ್ನ ಸಂಬಂಧಿಕರ ಮನೆಗೆ ಕಳುಹಿಸಿಕೊಟ್ಟಿದ್ದರು.

ಸಂಬಂಧಿಕರ ಮನೆಯಲ್ಲೇ ಇದ್ದ ಪೂಜಾಶ್ರೀ ಅಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೂಜಾಶ್ರೀ ಆತ್ಮಹತ್ಯೆ ಬಗ್ಗೆ ಆಕೆಯ ಹೆತ್ತವರು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಬೆಂಗಳೂರಿನ ಜಾಲಹಳ್ಳಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Related posts

Leave a Comment