Mangalore and Udupi news
ಉಡುಪಿಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಪುಣ್ಯ ನದಿಯಾಗಿ ಹರಿಯುತ್ತಿರುವ “ನಂದಿನಿ”: ಕಟೀಲು ಕ್ಷೇತ್ರದ ಭಕ್ತರು ಓದಲೇ ಬೇಕಾದ ಸ್ಟೋರಿ

ಪಾವನ ನದಿಗಳು ಓಡುತ ಹರಿದು ಕಡಲ ಸೇರುವಂತೆ, ಪಾಮರ ಮನುಜರು ಕಟೀಲಿಗೆ ಬಂದರೆ ಪಾಪ ಕರಗಿದಂತೆ..! ಕಟೀಲು ದೇವಿಗೂ, ನಂದಿನಿ ನದಿಯ ಹುಟ್ಟಿಗೆ ಎನ್ ಸಂಬ0ಧ.? ಭೂಮಿಯಲ್ಲಿ ಬರಗಾಲ ಬಂದಾಗ ಜಾಬಲಿ ಮುನಿ ಇಂದ್ರಲೋಕಕ್ಕೆ ಹೋಗಿದ್ದೇಕೆ.? ಕಾಮಧೇನುವಿನ ಮಗಳು ನಂದಿನಿ, ಸ್ವಾರ್ಥ ತುಂಬಿದ ಭೂಲೋಕಕ್ಕೆ ಬರೋದಿಲ್ಲ ಎಂದಾಗ ಏನೆಲ್ಲಾ ಬೆಳವಣಿಗೆಯಾಯಿತು.? ಕಾಂಚನಗಿರಿಯಲ್ಲಿ ನದಿಯಾಗಿ ಹುಟ್ಟಿ ಹರಿದು ಪಡುಗಡಲನ್ನು ಸೇರಿದ್ದೇ ಕೂತುಹಲಕಾರಿ ಕಥನ…!

Shree Durgaparameshwari Temple, Kateel Mangalore (Timings, History, Entry  Fee, Images, Pooja, Location & Phone) - Mangalore Tourism 2023

ಲಕ್ಷಾಂತರ ಭಕ್ತರನ್ನು ತನ್ನತ್ತ ಸೆಳೆವ ದಕ್ಷಿಣ ಕನ್ನಡದ ಸುಪ್ರಸಿದ್ಧ ಧಾರ್ಮಿಕ ಕೇಂದ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ. ಕಟೀಲು ಅಮ್ಮನವರು ಶಕ್ತಿ ಸ್ವರೂಪಿಣಿಯಾಗಿ ಆವಿರ್ಭವಿಸಿದ ಕಥೆ ಕೇಳಲೇಬೇಕು. ದೇವಿ ಕಥನದ ಬಗ್ಗೆ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಇದೆ. ಈ ಕ್ಷೇತ್ರವನ್ನು ಒಮ್ಮೆ ಅವಲೋಕಿಸಿದ್ರೆ ದೇವಸ್ಥಾನದ ಸುತ್ತ ನಂದಿನಿ ನದಿ ಹರಿಯುತ್ತದೆ. ಹೀಗೆ ಆಗೋದಕ್ಕೂ ಸ್ವತಃ ದೇವಿಯೇ ನಂದಿನಿಗೆ ಮಾತು ಕೊಟ್ಟಿದ್ದಳು ಎಂಬ ಕಥೆಯಿದೆ.

Nandini River @ kateel temple - Picture of Kateel Shri Durgaparameshwari  Temple, Mangalore - Tripadvisor

ಹಿಂದೊಮ್ಮೆ ಭೂಮಿಯಲ್ಲಿ ಹನ್ನೆರಡು ವರುಷಗಳ ಭೀಕರ ಬರಗಾಲ ಬಂದಿತ್ತು. ಇದನ್ನರಿತ ಮುನಿ ಜಾಬಾಲಿಗೆ ಅಯ್ಯೋ ಪಾಪ.. ಖಗ ಮೃಗಗಳು, ಜನರು ಎಷ್ಟೆಲ್ಲಾ ಕಷ್ಟ ಪಡುತ್ತಿದ್ದಾರೆ. ಹೀಗೆ ಆದ್ರೆ ಸೃಷ್ಟಿಗೆ ಆಪತ್ತು ಕಟ್ಟಿಟ್ಟ ಬುತ್ತಿ ಅಂತ ಅನಿಸಿಬಿಡುತ್ತೆ. ಎನ್ ಮಾಡೋದು? ಇದಕ್ಕೆಲ್ಲಾ ಪರಿಹಾರ ಇಲ್ವೇ ಎಂದು ಯೋಜಿಸಿದಾಗ ಜಾಬಾಲಿ ಮುನಿ ಇದಕ್ಕೊಂದು ಯಜ್ಞ ಮಾಡ್ಬೇಕು. ವರುಣ ದೇವರನ್ನ ಸಂತೃಪ್ತಗೊಳಿಸಬೇಕೆ0ದು ಯೋಚಿಸುತ್ತಾರೆ. ಕಾಮಧೇನುವನ್ನು ಕರೆತರಲೆಂದು ಮುನಿಗಳು ದೇವಲೋಕಕ್ಕೆ ಹೋಗ್ತಾರೆ. ಮುನಿ ಜಾಬಾಲಿಯ ವಿನಂತಿಗೆ ಸ್ಪಂದಿಸಿದ ಸುರಪಾಲ, ಕಾಮಧೇನುವು ವರುಣಲೋಕಕ್ಕೆ ಯಜ್ಞಕ್ಕಾಗಿ ಹೋಗಿದ್ದಾಳೆ. ಆಕೆಯ ಮಗಳು ನಂದಿನಿಯನ್ನು ಕಳುಹಿಕೊಡುತ್ತೇನೆ. ಭೂಲೋಕಕ್ಕೆ ಹೋಗಿ ಕಷ್ಟವನ್ನು ಹೋಗಲಾಡಿಸು ಎಂದು ಹೇಳ್ತಾನೆ.

ಆದ್ರೆ ಇದಕ್ಕೆ ನಂದಿನಿ ಒಪ್ಪಿಕೊಳ್‌ಬೇಕೆ? ಅಜ್ಞಾನಕ್ಕೊಳಗಾಗಿ ಸ್ವಾರ್ಥ ಪ್ರಪಂಚಕ್ಕೆ ಬರಲಾರೆನೆಂದು ಹೇಳಿ ಮಾನವಲೋಕವನ್ನು ನಿಂದಿಸಿ ಬಿಡ್ತಾಳೆ. ಒಡನೆ ಕೋಪಗೊಂಡ ಮುನಿ, ಭೂಮಿಯಲ್ಲಿ ನದಿಯಾಗಿ ಜನ್ಮ ತಾಳು ಎಂದು ಶಪಿಸ್ತಾನೆ. ತಪ್ಪನ್ನರಿತ ನಂದಿನಿ ಮುನಿಯ ಬಳಿ ತಪ್ಪಾಯ್ತು ಇದಕ್ಕೆ ಪರಿಹಾರ ಹೇಳಿ ಎಂದು ವಿನಮ್ರವಾಗಿ ಬೇಡಿಕೊಳ್ತಾಳೆ. ಇದಕ್ಕೆ ಪ್ರತಿಯಾಗಿ ಜಾಬಾಲಿ ಇದಕ್ಕೆಲ್ಲಾ ಪರಿಹಾರ ಎಂದರೆ ನೀನು ಆದಿಮಾಯೆಯನ್ನು ಸ್ತುತಿಸಬೇಕು ಅನ್ನುತ್ತಾನೆ. 

Kateel Shree Durgaparameshwari Temple - Kateel, Karnātaka

ನಂದಿನೀ ಅನನ್ಯ ಭಕ್ತಿಯಿಂದ ಆದಿಮಾಯೆಯನ್ನು ಸ್ತುತಿಸಲಾಗಿ ಜಗಜ್ಜನನೀ ಪ್ರತ್ಯಕ್ಷಳಾಗುತ್ತಾಳೆ. ಮಗಳೇ ದುಃಖಿಸದಿರು, ನಿನ್ನ ಮಾತೆಯಾದ ನಾನು ನಿನ್ನ ಮಗಳಾಗಿ ಜನಿಸುವೆನು ಎಂದು ಅಭಯವನ್ನು ಕರುಣಿಸುತ್ತಾಳೆ. ಕೂಡಲೇ ನಂದಿನಿಯು ಮಾಘ ಶುದ್ಧ ಪೂರ್ಣಿಮಾ ದಿನದಂದು ಕಾಂಚನಗಿರಿಯಲ್ಲಿ ಅಂದರೆ ಕನಕಗಿರಿಯಲ್ಲಿ ನದಿಯಾಗಿ ಹುಟ್ಟಿ ಹರಿದು ಪಡುಗಡಲನ್ನು ಸೇರುತ್ತಾಳೆ ಅನ್ನುವ ಕಥೆಯಿದೆ.

ಪ್ರತ್ಯಕ್ಷಳಾದ ದೇವಿ ನಿನ್ನ ಮಗಳಾಗಿ ಜನಿಸುತ್ತೇನೆಂದು ಅನುಗ್ರಹ ನೀಡ್ತಾಳೆ. ಅದರಂತೆ ನಂದಿನಿ ನದಿಯ ಪಕ್ಕದಲ್ಲಿಯೇ ದುಂಬಿ ರೂಪದಲ್ಲಿ ತಾಳಿ ಅರುಣಾಸುರನನ್ನು ವಧಿಸುತ್ತಾಳೆ. ಭ್ರಮರ ರೂಪ ತಾಳಿ ವಧಿಸಿದ ಜಗನ್ಮಾತೆಯನ್ನು ಸುರರು ಹೂಮಳೆಗೈದು ಸ್ತುತಿಸಿದರು. ದೇವೇಂದ್ರನು ಕಲ್ಪವೃಕ್ಷದ ಫಲವನ್ನು ತಂದು ಅಭಿಷೇಕಗೈದನು. ಆಗ ಪ್ರಸನ್ನಳಾದ ಜಗನ್ಮಾತೆ ದುಷ್ಟನ ಖಡ್ಗಾಘಾತದಿಂದಲೂ, ದುರ್ಜನರ ರಕ್ತಪಾತದಿಂದಲೂ ಈ ಸ್ಥಳವು ಅಪವಿತ್ರವಾಗಿದೆ. ಆದುದರಿಂದ ಇದೇ ನಂದಿನೀ ನದಿ ಮಧ್ಯದಲ್ಲೇ ಪ್ರಸನ್ನಳಾಗುವಳೆಂದು ಅಭಯ ನೀಡ್ತಾಳೆ.

Photos at Kateel Shree Durgaparameshwari Temple - Kateel, Karnātaka

ಇನ್ನು ಭೌಗೋಳಿಕವಾಗಿ ನೋಡೋದಾದ್ರೆ, ಈಗಿನ ಮಿಜಾರುವಿನ ಕನಕಬೆಟ್ಟುವಿನ ನಾಗಬನವೊಂದರ ಸಮೀಪ ಪುಟ್ಟ ಕಾಡಮಧ್ಯೆ ನೀರ ಒಸರು ಕಾಣುತ್ತದೆ. ಇಲ್ಲೇ ನಂದಿನಿ ಉಗಮವಾದದ್ದು ಎನ್ನುತ್ತಾರೆ ಸ್ಥಳೀಯರು. ಅಲ್ಲಿಂದ ದೊಡ್ಡದಾಗುತ್ತ ಮುಚ್ಚಾರು, ಮಚ್ಚಾರು, ಕಟೀಲು, ಎಕ್ಕಾರು, ಶಿಬರೂರು, ಚೇಳಾರು, ಪಾವಂಜೆಗಳ ಮೂಲಕ ಹಾದು ಸಸಿಹಿತ್ಲು, ಚಿತ್ರಾಪಿನಲ್ಲಿ ಶಾಂಭವಿ ನದಿಯೊಂದಿಗೆ ಕಡಲನ್ನ ಸೇರುತ್ತದೆ. ಒಂದು ಲೆಕ್ಕಾಚಾರದ ಪ್ರಕಾರ ಕಟೀಲಿನಿಂದ ಹದಿನಾರು ಮೈಲು ದೂರದಲ್ಲಿ ಹುಟ್ಟಿ ಹದಿನಾರು ಮೈಲುಗಳ ಬಳಿಕ ಸಮುದ್ರ ಸೇರುತ್ತದೆ. ಅಂದರೆ ನದಿಯ ಉದ್ದ ಮೂವತ್ತೆರಡು ಮೈಲುಗಳು.

ನದಿ ತಟದಲ್ಲಿರುವ ದೇಗುಲಗಳು ಹೀಗಿವೆ. ಹಾಡುಮಿಜಾರು ವಿಷ್ಣುಮೂರ್ತಿ, ಕಾಂಬೆಟ್ಟು ಸೋಮನಾಥೇಶ್ವರ, ಮುಚ್ಚೂರು ದುರ್ಗಾಪರಮೇಶ್ವರೀ, ಕಟೀಲು ದುರ್ಗಾಪರಮೇಶ್ವರೀ, ನಂದಬೆಟ್ಟು ಆಲಡೆ, ಸುರಗಿರಿ ಮಹಾಲಿಂಗೇಶ್ವರ, ಅತ್ತೂರು ಬೈಲು ಮಹಾಗಣಪತಿ ಮಂದಿರ, ಎಕ್ಕಾರು, ಶಿಬರೂರು ಕೊಡಮಣಿತ್ತಾಯ ದೈವಸ್ಥಾನಗಳು, ಪಾವಂಜೆ ಮಹಾಲಿಂಗೇಶ್ವರ, ಸಸಿಹಿತ್ಲು ಸಾರಂತಾಯ ಗರಡಿ, ಹೊಯಿಗೆಗುಡ್ಡೆ ಉಮಾಮಹೇಶ್ವರ ದೇವಸ್ಥಾನಗಳು ಸೇರಿದಂತೆ ಅನೇಕ ನಾಗಬನಗಳು, ದೈವ, ದೇವಸ್ಥಾನಗಳು ಈ ನದಿಯ ತಟದಲ್ಲಿವೆ.

ಒಟ್ಟಿನಲ್ಲಿ ನದೀ ನಂದಿನಿ ಹತ್ತಾರು ಭಕ್ತಿಯ ತಾಣಗಳಿಗೆ, ಕೃಷಿಕರಿಗೆ, ಸಹಸ್ರ ಜೀವಚರಗಳಿಗೆ ಬದುಕು ನೀಡಿದ ಪುಣ್ಯ ನದಿಯಾಗಿ ಹರಿಯುತ್ತಿದ್ದಾಳೆ.

ನಂದಿನಿ ನದಿ ಅವತರಣ ದಿನ

Related posts

Leave a Comment