Mangalore and Udupi news
ಅಪಘಾತಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತರಾಜ್ಯ

ಸಿಗಂದೂರು ನದಿಯಲ್ಲಿ ನೀರುಪಾಲಾದ ಯುವಕರು: 40 ಅಡಿ ಆಳದಿಂದ ಶವಗಳನ್ನ ಮೇಲಕ್ಕೆತ್ತಿದ ಈಶ್ವರ್ ಮಲ್ಪೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಳಸವಳ್ಳಿ ಬಳಿ ಹಿನ್ನೀರಿನ ನಡುಗಡ್ಡೆಗೆ ಊಟಕ್ಕೆ ತೆರಳಿದ್ದವರು ನೀರುಪಾಲಾದ ಘಟನೆ ನ.13 ಸಂಜೆ ನಡೆದಿತ್ತು.

ಐದು ಜನ ಯುವಕರು ಕ್ಯಾಂಪ್‌ನವರು ಬಿಟ್ಟಿದ್ದ ಉಕ್ಕುಡ ತೆಗೆದುಕೊಂಡು ಹೋಗಿದ್ದು, ಹೊಳೆ ಊಟ ಮುಗಿಸಿ ಬರುವಾಗ ತೆಪ್ಪ ಸಮತೋಲನ ಕಳೆದುಕೊಂಡಿದೆ. ಪರಿಣಾಮ ತೆಪ್ಪ ಮುಳುಗಡೆಯಾಗಿದೆ. ಘಟನೆಯಿಂದ ಮೂವರು ನೀರುಪಾಲಾಗಿದ್ದು, ಇಬ್ಬರು ಈಜಿ ದಡ ಸೇರಿದ್ದಾರೆ.

ಸಿಗಂದೂರಿನ ಚೇತನ್ ಜೈನ (28), ಹುಲಿದೇವರಬನ ನಿವಾಸಿ ಸಂದೀಪ (30) ಹಾಗೂ ರಾಜು ಗಿನಿವಾರ (28) ನೀರುಪಾಲಾದವರು. ವಿನಯ ಮತ್ತು ಯಶವಂತ ಈಜಿ ದಡ ಸೇರಿದವರು.

ಸದ್ಯ ಶರಾವತಿ ಹಿನ್ನೀರಿನಲ್ಲಿ ಮುಳುಗಿದ್ದ ಮೂವರ ಶವ ಪತ್ತೆಯಾಗಿದೆ. ಸ್ಥಳೀಯರು ಮುಳುಗು ತಜ್ಞ ಈಶ್ವರ್ ಮಲ್ಪೆಯವರನ್ನ ಸಂಪರ್ಕಿಸಿದ್ದರು. ವಿಷಯ ತಿಳಿದು ಸಿಗಂದೂರಿಗೆ ಬಂದ ಈಶ್ವರ್ ಮಲ್ಪೆ ಸಾಕಷ್ಟು ಮಾಹಿತಿ ಕಲೆಹಾಕಿದರು. ನಂತರ ಯುವಕರು ಮುಳುಗಿದ ಸ್ಥಳದ ಅಂದಾಜು, ನೀರಿನ ಆಳ ಸೇರಿದಂತೆ ಇತ್ಯಾದಿ ಮಾಹಿತಿಗಳನ್ನ ಪಡೆದುಕೊಂಡ ಅವರು ಕಾರ್ಯಾಚರಣೆಗೆ ಇಳಿದರು.

ಶರಾವತಿಗೆ ಕೈ ಮುಗಿದು ಹಿನ್ನೀರಿಗೆ ಇಳಿದ ಅವರು ಸುಮಾರು ಒಂದು ಗಂಟೆಗಳ ಕಾರ್ಯಾಚರಣೆ ನಡೆಸಿ ಅಂದಾಜು ನಲವತ್ತು ಅಡಿ ಆಳದಲ್ಲಿದ್ದ ಮೂವರು ಯುವಕರ ಶವವನ್ನ ಮೇಲಕ್ಕೆ ತಂದಿದ್ದಾರೆ ಎಂದು ತಿಳಿದುಬಂದಿದೆ.

Related posts

Leave a Comment