ಮಾನವನ ಅತೀವ ಪರಿಣತಿಗೆ ಸಾಕ್ಷಿಯಾಗಿ ನಿಂತ ಅಪೂರ್ವ ಶಿಲ್ಪ ಕಲೆಗಳ ಸಂಗಮ ಎಲ್ಲಿದೆ ಗೊತ್ತಾ? ಕನ್ನಡಿಗರ ಅಸ್ಮಿತೆಯ ಪ್ರತೀಕ ಈ ದೇಗುಲ ಸಮುಚ್ಛಯ. ಶಿಲೆಯಲ್ಲಿ ಅರಳಿದ ಶಿಲ್ಪ ಕಲೆಗಳು. ಆಧುನಿಕ ತಂತ್ರಜ್ಞಾನಕ್ಕೂ ಬಿಡಿಸಲಾಗದ ವಾಸ್ತುಶಿಲ್ಪದ ಅನಾವರಣ. ಇದು ದೊಡ್ಡ ಬಂಡೆಕಲ್ಲನ್ನು ಕೊರೆದು ನಿರ್ಮಿಸಿದ ಅತ್ಯದ್ಭುತ ಶಿಲಾ ಕೈಲಾಸ. ಅದೇ ಭವ್ಯ ಭಾರತದ ಹೆಮ್ಮೆಯ ಎಲ್ಲೋರಾ ಕೈಲಾಸನಾಥ ದೇವಾಲಯ.
ವಾಸ್ತು ವೈಭವಕ್ಕೆ ಕೈಗನ್ನಡಿಯಂತಿರುವ ಎಲ್ಲೋರಾ ಕೈಲಾಸನಾಥ ದೇಗುಲವನ್ನು ನಿರ್ಮಿಸಿದ್ದು ಕನ್ನಡಿಗರೇ..? ಇಂದಿನ ಮಹಾರಾಷ್ಟçದ ನೆಲದಲ್ಲಿ ಅರಳಿದ ಅದ್ಭುತ ಸೃಷ್ಟಿಯ ಹಿಂದೆ ಸಹಸ್ರ ಮಂದಿಯ ಶ್ರಮವಿದೆ. ಇದನ್ನು ಅನ್ಯಗ್ರಹ ಜೀವಿಗಳು ನಿರ್ಮಿಸಿರಬಹುದೆಂದು ಹೇಳಿಕೊಳ್ಳುವ ವಿದೇಶಿ ಇತಿಹಾಸಕಾರರ ಮುಖಕ್ಕೆ ಹೊಡದ ರೀತಿಯ ಸಾಕ್ಷö್ಯ ಸಿಕ್ಕಿದ್ದು ಮಾತ್ರವಲ್ಲದೆ ಕನ್ನಡ ನಾಡನ್ನಾಳಿದ ವೀರ ಅರಸರ, ಶಿಲ್ಪಕಲಾ ಪರಿಣಿತರ, ಅಂದಿನ ಕಾಲದಲ್ಲಿ ಬಳಕೆಯಾದ ಯೋಜನೆ, ಯೋಚನೆಯ ಬಗ್ಗೆ ಬೆಳಕು ಚೆಲ್ಲುತ್ತೆ. ನಾವಿಂದು ಎಲ್ಲೋರಾ ಕೈಲಾಸನಾಥ ದೇಗುಲದ ವಿಶೇಷತೆಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.
ಅನೇಕ ವೈಶಿಷ್ಟ್ಯ, ವಿಸ್ಮಯಗಳನ್ನು ಹೊದ್ದು ನಿಂತಿರುವ ಮಹಾರಾಷ್ಟ್ರದ ಎಲ್ಲೊರ ಗುಹೆ, ದೇವಾಲಯಗಳು ಪ್ರವಾಸಿಗರನ್ನು ಚಕಿತರನ್ನಾಗಿ ಮಾಡುತ್ತದೆ. ಇದು ಜೈನ, ಬೌದ್ಧ, ಹಿಂದೂ ಧರ್ಮದ ಸಂಗಮವಾಗಿದೆ. ನೋಡುಗರ ಮನದಲ್ಲಿ ಚಿರಕಾಲ ಉಳಿಯುವಂತಹ ಶಿಲ್ಪಕಲೆಯನ್ನು ಕೈಲಾಸನಾಥ ದೇವಾಲಯ ಒಳಗೊಂಡಿದೆ. ಪ್ರತಿಯೊಬ್ಬರೂ ಒಮ್ಮೆಯಾದರೂ ಭೇಟಿ ನೀಡಲೇ ಬೇಕಾದ ಭವ್ಯ ವಾಸ್ತು ಶಿಲ್ಪ ಎಲ್ಲೋರದಲ್ಲಿದೆ.
ಎಂಟನೇ ಶತಮಾನದಲ್ಲಿದ್ದ ತಂತ್ರಜ್ಞಾನ ಬಳಸಿಕೊಂಡು ಒಂದು ದೊಡ್ಡ ಬಂಡೆಯನ್ನು ಕೊರೆದು ಈ ದೇಗುಲ ನಿರ್ಮಿಸಲಾಗಿದೆ. ನಭೂತೋ ನಭವಿಷ್ಯತಿ ಎನ್ನಬಹುದಾದ ದೇವಾಲಯ ಇದು. ಕ್ರಿ.ಶ ೭೬೦ ರಲ್ಲಿ ಕೈಲಾಸದ ಪ್ರತಿರೂಪವಾಗಿ ರಾಷ್ಟ್ರಕೂಟ ರಾಜನಿಂದ ಕೆತ್ತಿಸಲ್ಪಟ್ಟ ಸಂಪೂರ್ಣ ಶಿಲಾ ದೇಗುಲವಿದು. ಮಹಾರಾಷ್ಟ್ರದ ಔರಂಗಾಬಾದ್ ವೆರುಲ್ ಬಳಿ ಎಲ್ಲೋರ ಗುಹೆಗಳಿವೆ. ಎಲ್ಲೋರಾ ಗುಹೆಗಳನ್ನು ೧೯೮೩ ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಹೆಸರಿಸಲಾಯಿತು.
ರಾಷ್ಟ್ರಕೂಟ ದೊರೆ ೧ನೇ ಕೃಷ್ಣ ಅಕಾಲವರ್ಷ ಶುಭತುಂಗ ಕೃಷ್ಣನಿಂದ ಈ ದೇವಾಲಯ ನಿರ್ಮಾಣವಾಗಿದೆ. ಈ ಗುಹೆಗಳನ್ನ ಚರಣಾದ್ರಿ ಪರ್ವತ ಶ್ರೇಣಿಯಲ್ಲಿ ಕೆತ್ತಲಾಗಿದೆ. ಇಲ್ಲಿ ನೂರಕ್ಕೂ ಹೆಚ್ಚು ಗುಹೆಗಳಿವೆಯಾದರೂ ಕೇವಲ ೩೪ ಗುಹೆಗಳು ಮಾತ್ರ ಸಾರ್ವಜನಿಕರ ವೀಕ್ಷಣೆಗೆ ಲಭ್ಯ. ಇಲ್ಲಿ ಮೊದಲ ಹನ್ನೆರಡು ಗುಹೆಗಳು ಬೌದ್ಧ ಮತಕ್ಕೆ ಸಂಬAಧಿಸಿದವುಗಳು. ನಂತರದ ಹದಿನೇಳು ಗುಹೆಗಳು ಹಿಂದೂ ಧರ್ಮದ್ದು ಮತ್ತು ಕೊನೆಯ ಐದು ಗುಹೆಗಳು ಜೈನ ಧರ್ಮದವು. ಇವುಗಳ ಪೈಕಿ ಹದಿನಾರನೇ ಗುಹೆಯೇ ಅದ್ಭುತವಾದ ಕೈಲಾಸನಾಥ ದೇವಾಲಯ. ಇಲ್ಲಿ ಪುರಾಣಗಳಲ್ಲಿ ಬರುವ ಸಾಹಸದ ದೃಶ್ಯಗಳನ್ನ ಕೆತ್ತಲಾಗಿದೆ. ರಾಮಾಯಣ ಮತ್ತು ಮಹಾಭಾರತದ ಘಟನೆಗಳನ್ನು ಚಿತ್ರಿಸುವ ಅನೇಕ ಶಿಲ್ಪಕಲೆಗಳಿವೆ. ೧೩೦೦ ವರ್ಷಗಳ ಹಿಂದೆ ನಿರ್ಮಿಸಲಾದ ಈ ಕಲಾಕೃತಿಯು ಪ್ರಪಂಚದ ಅತ್ಯಂತ ದೊಡ್ಡ ಏಕಶಿಲಾ ಕಲಾಕೃತಿಯಾಗಿದೆ. ಇದು ಮೇಲಿನಿಂದ ಕೆಳಗಿನತನಕ ಕೆತ್ತಲ್ಪಟ ಪ್ರಪಂಚದ ಏಕೈಕ ದೇವಾಲಯ.
ಈ ದೇಗುಲವನ್ನುಸೂಕ್ಷ್ಮವಾಗಿ ನೋಡಿದರೆ ಎಲ್ಲೂ ಸಹ ಕಲ್ಲುಗಳನ್ನು ಮರು ಜೋಡನೆ ಮಾಡಿದಂತೆ ಕಾಣಿಸಲ್ಲ. ಒಂದಿಡೀ ಕಲ್ಲನ್ನು ಕೆತ್ತಿ ಪೂರ್ತಿ ದೇಗುಲವನ್ನು ನಿರ್ಮಿಸಲಾಗಿದೆ. ಇದು ನಮ್ಮವರ ಅತ್ಯದ್ಭುತ ಕಲಾಕುಸುರಿ, ಜಾಣ್ಮೆ, ಅಂದಿನ ಕಾಲದಲ್ಲಿ ಬಳಕೆಯಾದ ಮಾಸ್ಟರ್ ಪ್ಲಾನಿಂಗ್‌ಗೆ ಸಾಕ್ಷಿಯಾಗಿದೆ. ಅಷ್ಟಲ್ಲದೆ ಮತ್ತೊಂದು ನಿಗೂಡತೆ ಏನಂದ್ರೆ, ದೊಡ್ಡ ಬಂಡೆಯನ್ನು ಕೊರೆದ ಬಳಿ ದೊಡ್ಡ ಮೊತ್ತದ ಕೆತ್ತಿದ ವೇಸ್ಟ್ ಕಲ್ಲು ಇರಬೇಕಲ್ವಾ? ಅದು ಎಲ್ಲಿಗೆ ಹೋಯ್ತು ಅನ್ನೋದು ಇಂದಿಗೂ ಬಗೆಹರಿಯದ ರಹಸ್ಯವಾಗಿದೆ. ಅಷ್ಟಲ್ಲದೆ -ಇದನ್ನು ವಿದೇಶಿರು ಏಲಿಯನ್‌ಗಳು ನಿರ್ಮಿಸಿದ್ದು ಎಂದು ವಾದಿಸಿದರೆ, ಎಲ್ಲೋರಾ ಹಾಗೂ ಗುಜರಾತ್‌ನಲ್ಲಿ ಸಿಕ್ಕಿರುವ ಶಾಸನಗಳು ಇದು ಕನ್ನಡಿಗ ರಾಜರು, ರಾಷ್ಟ್ರಕೂಟರು ನಿರ್ಮಿಸಿದ ದೇಗುಲ ಎಂದು ಒತ್ತಿ ಒತ್ತಿ ಹೇಳುತ್ತಿದೆ.