Mangalore and Udupi news
ಅಪರಾಧದೇಶ- ವಿದೇಶ

ನಮಾಝ್ ಮಾಡಲು, ಬೀಫ್ ತಿನ್ನಲು ಒತ್ತಾಯಿಸುತ್ತಿದ್ದರು..! ಆಯೇಷಾ ಹುಸೇನ್ ಆಗೋದು ತಪ್ಪಿತು – ಲವ್ ಜಿಹಾದ್‌ನ ಕೂಪದಿಂದ ಪಾರಾದ ಬ್ಯೂಟಿ ಪೇಜೆಂಟ್ ವಿನ್ನರ್

ದೇಶದ ನಾನಾ ಭಾಗಗಳಲ್ಲಿ ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಕೆಲವೊಂದು ತಡವಾಗಿ ಪ್ರಕರಣಗಳು ಮನ್ನಲೆಗೆ ಬರುತ್ತಿದೆ. ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆ ವಿಜೇತೆಯೊಬ್ಬರು ತಾನು ಸಿಲಿಕಾನ್ ಸಿಟಿಯಲ್ಲಿ ಅನುಭವಿಸಿದ ಲವ್ ಜಿಹಾದ್‌ನ ಕರಾಳ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ.

ಲವ್ ಜಿಹಾದ್‌ಗೆ ಒಳಗಾದವರು ಯಾರು?
ಮಿಸ್ ಇಂಡಿಯಾ ಗೆಲಾಕ್ಸಿ 2024 ಸ್ಪರ್ಧೆಯ ವಿಜೇತೆ, ಅಸ್ಸಾಂ ಮೂಲದ ರಿನಿಮಾ ಬೋರಾ ಅಗರವಾಲ್ ಅವರು ಅಸ್ಸಾಂನ ಜನಪ್ರಿಯ ಯುಟ್ಯೂಬರ್ ಅಬಯೋಬ್ ಭುಯಾನ್ ಜತೆಗಿನ ಸಂದರ್ಶನದಲ್ಲಿ ತಮಗಾದ ಅನ್ಯಾಯವನ್ನು ತೆರೆದಿಟ್ಟಿದ್ದಾರೆ. ತಾವು ಬೆಂಗಳೂರಿನಲ್ಲಿದ್ದಾಗ ಲವ್ ಜಿಹಾದ್‌ಗೆ ಸಿಲುಕಿ, ಅಲ್ಲಿ ಆಕೆ ಅನುಭವಿಸಿದ ಕಷ್ಟ, ಕಿರುಕುಳ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಲವ್ ಜಿಹಾದ್ ಸುಳಿಯಲ್ಲಿ ಬಿದ್ದು ಅದರಿಂದ ಪಾರಾದ ವಿಷಯವನ್ನು ಬಯಲು ಮಾಡಿದ್ದಾರೆ.

‘‘ನಾನು 16 ನೇ ವಯಸ್ಸಿನಲ್ಲಿ ಸಾಕಷ್ಟು ಕನಸುಗಳನ್ನು ಹೊತ್ತು ಶಿಕ್ಷಣಕ್ಕಾಗಿ ಬೆಂಗಳೂರಿಗೆ ಹೋದೆ. ಅಲ್ಲಿ ಕೆಲ ವರ್ಷಗಳ ನಂತರ ಮುಸ್ಲಿಂ ಯುವಕನನ್ನು ಪ್ರೀತಿಸುತ್ತಿದ್ದೆ. ಇದಕ್ಕೆ ನನ್ನ ಪೋಷಕರ ವಿರೋಧ ಇತ್ತು. ಕ್ರಮೇಣ ಆ ಯುವಕ ನನ್ನನ್ನು ಲವ್ ಜಿಹಾದ್‌ಗೆ ದೂಡುತ್ತಾ ಹೋದ. ನನಗೆ ದನದ ಮಾಂಸ ತಿನ್ನಲು ಒತ್ತಾಯಿಸುತ್ತಿದ್ದ, ನಮಾಜ್ ಮಾಡಲು ಹೇಳುತ್ತಿದ್ದ, ನನ್ನ ಸಂಪ್ರಾದಾಯಗಳನ್ನು ಗೌರವಿಸುತ್ತಿರಲಿಲ್ಲ. ಆತನ ಕುಟುಂಬಸ್ಥರು ಸಹ ಹಲವು ಭಾರೀ ಕಿರುಕುಳ ನೀಡಿದ್ದಾರೆ’’ ಎಂದು ಹೇಳಿದ್ದಾರೆ.

“ಅವನ ವರ್ತನೆಗೆ ಬೇಸತ್ತು ‘ನೀನು ತಾಲಿಬಾನ್ ಥರಾ ಆಡಬೇಡ’ ಎಂದು ಗದರುತ್ತಿದ್ದೆ. ಕಡೆಗೆ ಒಂದು ದಿನ ನನ್ನ ಹೆಸರನ್ನು ಆಯೇಷಾ ಹುಸೇನ್ ಎಂದು ಬದಲಾಯಿಸಲು ಮುಂದಾಗಿದ್ದ. ನಿಜ ನಮ್ಮ ದೇಶದಲ್ಲಿ ಲವ್ ಜಿಹಾದ್ ತೊಲಗಿಲ್ಲ. ದೇವರ ದಯೆಯಿಂದ ಹೊಸ ಬದುಕು ಕಟ್ಟಿಕೊಂಡೆ,’’ ಎಂದು ರಿನಿಮಾ ಹೇಳಿದ್ದಾರೆ.

‘‘ಜನರು ತಮ್ಮ ಮೂಲಭೂತ ಸಂಪ್ರದಾಯಗಳನ್ನು ಗೌರವಿಸಬೇಕು. ನನ್ನ ಸಂದರ್ಶನವನ್ನು ಸಂಪೂರ್ಣ ನೋಡಿ. ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದೇನೆ. ಬೇರೆನೂ ವಿವಾದವಾಗುವುದು ಬೇಡ,’’ ಎಂದು ರಿನಿಮಾ ಬೋರಾ ತಮ್ಮ instagram ಪೋಸ್ಟ್ನಲ್ಲಿ ಮನವಿ ಮಾಡಿದ್ದಾರೆ.

Related posts

Leave a Comment