Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ಪ್ರಸ್ತುತಮಂಗಳೂರು

ಪ್ರವೀಣ್ ನೆಟ್ಟಾರು ಮರ್ಡರ್ ಕೇಸ್; ಸಿದ್ದಿಕ್ ಮನೆ ಮೇಲೆ NIA ದಾಳಿ.!!


ಪುತ್ತೂರು : ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗಳಿಗೆ ಸಹಕರಿಸಿದ್ದಾರೆ ಎನ್ನಲಾದ ಅಬೂಬಕ್ಕರ್ ಸಿದ್ದಿಕ್ ಅವರ ಪತ್ನಿ ವಾಸವಾಗಿರುವ ಮನೆ ಮೇಲೆ ಇಂದು ಬೆಳಗ್ಗೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿ ತನೆಖೆ ನಡೆಸಿದ್ದಾರೆ.

ಕೆಯ್ಯೂರು ಶಾಲಾ ಬಳಿಯ ಬಾಡಿಗೆ ಮನೆಯೊಂದರಲ್ಲಿ ಅಬೂಬಕ್ಕರ್ ಸಿದ್ದಿಕ್ ಅವರ ಪತ್ನಿ ವಾಸವಾಗಿದ್ದಾರೆ. ಅವರ ಮನೆಗೆ ಎನ್‌ಐಎ ಅಧಿಕಾರಿಗಳು ಆಗಮಿಸಿ ತನಿಖೆ ನಡೆಸಿದ್ದಾರೆ. ಜೊತೆಗೆ ಸಿದ್ದಿಕ್ ಅವರ ಸಹೋದರರೋರ್ವರು ಕೆಯ್ಯೂರಿನ ಅರಿಕ್ಕಿಲದಲ್ಲಿ ವಾಸವಾಗಿದ್ದು, ಅಲ್ಲಿಗೂ ತೆರಳಿದ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಸರ್ಚ್ ವಾರೆಂಟ್ ಪಡೆದ ಎನ್‌ಐಎ ಪೊಲೀಸರು ಕೆಯ್ಯೂರಿಗೆ ಆಗಮಿಸಿ ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

NIA raids 16 places in Karnataka in Praveen Nettaru murder case - Public TV  English

ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಪದಾಧಿಕಾರಿಯಾಗಿದ್ದ ಪ್ರವೀಣ್ ನೆಟ್ಟಾರ್ ಅವರನ್ನು 2022ರ ಜು.26 ರಂದು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಪ್ರವೀಣ್ ಅವರ ಹತ್ಯೆ ನಡೆದ ವೇಳೆ ಅಬೂಬಕ್ಕರ್ ಸಿದ್ದಿಕ್ ಅವರು ಸ್ಥಳದಲ್ಲೇ ಇದ್ದು ಆರೋಪಿಗಳಿಗೆ ಸಹಕಾರ ನೀಡಿದ ಆರೋಪ ಎದುರಿಸುತ್ತಿದ್ದು ಸದ್ಯ ತಲೆ ಮರೆಸಿಕೊಂಡಿರುತ್ತಾರೆ.

Related posts

Leave a Comment