Mangalore and Udupi news
ದೇಶ- ವಿದೇಶಪ್ರಸ್ತುತರಾಜಕೀಯ

ಕೇರಳದಕ್ಕೂ ಒಕ್ಕರಿಸಿದ ವಕ್ಫ್ ಒತ್ತುವರಿ ವಿವಾದ; ಜಾಗದ ಮಾಲೀಕರ ಪರ ಹೈಕೋರ್ಟ್ ಒಲವು; UDF & LDF ವಕ್ಫ್ ಅತಿಕ್ರಮಣಕ್ಕೆ ಕುಮ್ಮಕ್ಕು ನೀಡುತ್ತಿವೆ – ತೇಜಸ್ವಿ ಸೂರ್ಯ

ಕರ್ನಾಟಕದ ವಿವಿಧ ಜಿಲ್ಲೆಗಳ ಜಾಗದ ಆರ್‌ಟಿಸಿ ಗಳಲ್ಲಿ ವಕ್ಫ್ ಬೋರ್ಡ್ ಹೆಸರು ತೋರಿಸಿದ್ದು ವಿವಾದ ಸೃಷ್ಟಿಸಿತ್ತು. ಈ ವಿವಾದ ಆರುವ ಮುನ್ನವೇ ನೆರೆ ರಾಜ್ಯ ಕೇರಳದಲ್ಲಿ ವಕ್ಫ್ ಭೂ ವಿವಾದ ಆರಂಭವಾಗುತ್ತಿದೆ.

ಕೇರಳದ ಕೊಚ್ಚಿ ಹಾಗೂ ಪಾಲಕ್ಕಾಡ್ ನಲ್ಲಿ ಭೂ ವಿವಾದ ಜಾಸ್ತಿಯಾಗುತ್ತಿದೆ. ಈ ನಡುವೆ ಮಹತ್ತರ ಬೆಳವಣಿಗೆ ನಡೆದಿದೆ. ಇದು ನಮ್ಮ ಜಾಗ ಇಲ್ಲಿಂದ ಎದ್ದು ಹೋಗಿ ಎಂದು ತಕಾರರು ತೆಗೆದ ವಕ್ಫ್ ಬೋರ್ಡ್ಗೆ ಮುಖಭಂಗ ಆಗಿದೆ. ಕೋಝಿಕ್ಕೋಡ್ ಪೋಸ್ಟಲ್ ವಿಭಾಗದ ಹಿರಿಯ ಅಧೀಕ್ಷಕರು ಮತ್ತು ಮಾರಿಕುನ್‌ನ ಸಬ್ ಪೋಸ್ಟ್ ಮಾಸ್ಟರ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ವಕ್ಫ್ ಭೂಮಿಯನ್ನು ಹೊಂದಿರುವ ಆರೋಪದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಕೋಝಿಕ್ಕೋಡ್ ಪೋಸ್ಟಲ್ ವಿಭಾಗದ ಹಿರಿಯ ಅಧೀಕ್ಷಕರು ಮತ್ತು ಮಾರಿಕುನ್‌ನ ಸಬ್ ಪೋಸ್ಟ್ ಮಾಸ್ಟರ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ. ವಕ್ಫ್ ಒತ್ತುವರಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರಿಗೆ ಹೈಕೋರ್ಟ್ ನಿಂದ ಆಶಾದಾಯಕ ತೀರ್ಪು ಬರಲಿದೆ ಎಂದು ಅಂದಾಜಿಸಲಾಗಿದೆ.

ಕೇರಳ ಕ್ಯಾಥೋಲಿಕ್ ಚರ್ಚ್ ಗುಂಪುಗಳು ಮುನಂಬಮ್‌ನಲ್ಲಿ ಕ್ರಿಶ್ಚಿಯನ್ ರೈತರ ಭೂಮಿಯನ್ನು ಹಕ್ಕು ಒತ್ತುವರಿ ಮಾಡುವ ವಕ್ಫ್ ಮಂಡಳಿಯ ವಿರುದ್ಧ ಪ್ರತಿಭಟಿಸಿದರು.

2013ರಲ್ಲಿ ವಕ್ಫ್ ತಿದ್ದುಪಡಿಗೂ ಮುನ್ನ ಈ ಜಮೀನು ಮಾಲೀಕರ ಬಳಿ ಇತ್ತು ಎಂದು ನ್ಯಾಯಾಲಯದ ಗಮನಕ್ಕೆ ತಂದರು. ವಕ್ಫ್ ತಿದ್ದುಪಡಿ ಕಾಯಿದೆಯು ಹಿಂದಿನ ಪರಿಣಾಮವನ್ನು ಹೊಂದಿಲ್ಲ ಎಂದು ನ್ಯಾಯಾಲಯವು ಗಮನಿಸಿ ಪ್ರಕರಣವನ್ನು ರದ್ದಗೊಳಿಸಿದೆ.

ವಕ್ಫ್ ಮಂಡಳಿಯ ದೂರಿನ ಮೇರೆಗೆ ಕೋಝಿಕ್ಕೋಡ್ ಮ್ಯಾಜಿಸ್ಟ್ರೇಟ್ ಕೋರ್ಟ್ 2017ರಲ್ಲಿ ಅಂಚೆ ಇಲಾಖೆಯ ಇಬ್ಬರು ಉದ್ಯೋಗಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು. 2013ರ ವಕ್ಫ್ ತಿದ್ದುಪಡಿ ಕಾಯ್ದೆಯ ನೆಪದಲ್ಲಿ ಮಂಡಳಿಯ ನಡೆಯನ್ನು ಪ್ರಶ್ನಿಸಿ ನೌಕರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಕೋಝಿಕ್ಕೋಡ್ ಜುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಇನ್ನು ವಕ್ಫ್ ವಿವಾದ ಕುರಿತು ಮಲಯಾಳಂ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿರುವ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಮಾತನಾಡಿ ಕೇರಳದಲ್ಲಿ ವಕ್ಫ್ ಮಂಡಳಿಯ ಭೂ ಜಿಹಾದ್ ನಡೆಯುತ್ತಿದೆ. ವಕ್ಫ್ ಮಂಡಳಿಯು ಪಾಲಕ್ಕಾಡ್ ಮತ್ತು ನೂರಾನಿಯಲ್ಲಿ 28 ನಿವೇಶನಗಳನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ನೂರಾರು ಎಕರೆ, ದೇವಸ್ಥಾನಗಳ ನಿವೇಶನ ಸೇರಿದಂತೆ ಕೇರಳದಲ್ಲಿ ಅತಿಕ್ರಮಣ ನಡೆಯುತ್ತಿದೆ. ಯುಡಿಎಫ್ ಮತ್ತು ಎಲ್ ಡಿಎಫ್ ವಕ್ಫ್ ಅತಿಕ್ರಮಣಕ್ಕೆ ಕುಮ್ಮಕ್ಕು ನೀಡುತ್ತಿವೆ ಎಂದು ಆರೋಪಿಸಿದರು.

ಕರ್ನಾಟಕದಲ್ಲಿ ವಕ್ಫ್ ಈಗಾಗಲೇ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಸರ್ಕಾರದ ನೆರವಿನಿಂದ ಸ್ವಾಧೀನಪಡಿಸಿಕೊಂಡಿದೆ. ರೈತರಿಗೆ ನೋಟಿಸ್ ಸಹ ನೀಡದೆ ಅತಿಕ್ರಮಣ ಮಾಡಲಾಗಿದೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಪಾಲಕ್ಕಾಡ್ ಜನರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು.

ಮೋದಿ ಸರ್ಕಾರ ಮುಂದಿನ ಸಂಸತ್ ಅಧಿವೇಶನದಲ್ಲಿ ವಕ್ಫ್ ಬೋರ್ಡ್ ಕಾಯ್ದೆಗೆ ತಿದ್ದುಪಡಿ ತರಲಿದೆ. ಕೇರಳದ ಕ್ರಿಶ್ಚಿಯನ್ ಮತ್ತು ಹಿಂದೂ ಸಮುದಾಯಗಳು ಆತಂಕಪಡುವ ಅಗತ್ಯವಿಲ್ಲ ಮತ್ತು ವಕ್ಫ್ ನಿಮ್ಮ ಭೂಮಿಯನ್ನು ಕಸಿದುಕೊಳ್ಳುವುದಿಲ್ಲ ಎಂದು ಹೇಳಿದರು.

Related posts

Leave a Comment