Mangalore and Udupi news
ಅಪಘಾತಗ್ರೌಂಡ್ ರಿಪೋರ್ಟ್ದೇಶ- ವಿದೇಶಪ್ರಸ್ತುತ

ಸುಡಾನ್‌ನಲ್ಲಿ ಸೇನಾ ವಿಮಾನ ಪತನ – 46 ಜನರ ದುರ್ಮರಣ.!!

Advertisement

ಸುಡಾನ್ ರಾಜಧಾನಿ ಖಾರ್ಟೌಮ್ ಹೊರವಲಯದಲ್ಲಿ ಮಿಲಿಟರಿ ವಿಮಾನವೊಂದು ಪತನಗೊಂಡಿದೆ. ಈ ವಿಮಾನ ಅಪಘಾತದಲ್ಲಿ 46 ಜನರು ಸಾವನ್ನಪ್ಪಿದ್ದಾರೆ. ವಿಮಾನ ನಿಲ್ದಾಣದಿಂದ ಹಾರುವಾಗ ವಿಮಾನ ಪತನಗೊಂಡು, ಸೇನಾ ಸಿಬ್ಬಂದಿ ಮತ್ತು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Video: ಸುಡಾನ್​ನಲ್ಲಿ ಸೇನಾ ವಿಮಾನ ಪತನ, 46 ಮಂದಿ ಸಾವು

ಉತ್ತರ ಓಮ್ದುರ್ಮನ್‌ನ ವಾಡಿ ಸಯೀದ್ನಾ ಮಿಲಿಟರಿ ವಿಮಾನ ನಿಲ್ದಾಣದ ಬಳಿ ಮಂಗಳವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ. ತಾಂತ್ರಿಕ ಕಾರಣಗಳಿಂದ ವಿಮಾನ ಅಪಘಾತ ಸಂಭವಿಸಿರುವ ಸಾಧ್ಯತೆ ಹೆಚ್ಚಿದೆ ಎಂದು ಸೇನಾ ಮೂಲಗಳು ತಿಳಿಸಿವೆ. 10 ಜನರು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ಕಚೇರಿ ತಿಳಿಸಿದೆ.

Sudan Plane Crash

ನಿಧನರಾದವರಲ್ಲಿ ಖಾರ್ಟೌಮ್‌ನಲ್ಲಿ ಹಿರಿಯ ಕಮಾಂಡರ್ ಆಗಿದ್ದ ಮೇಜರ್ ಜನರಲ್ ಬಹರ್ ಅಹ್ಮದ್ ಕೂಡ ಸೇರಿದ್ದಾರೆ, ಅವರು ರಾಜಧಾನಿಯಲ್ಲಿ ಸೈನ್ಯದ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು ಎಂದು ಮಿಲಿಟರಿ ಮೂಲಗಳು ತಿಳಿಸಿವೆ.

46 killed in Sudan plane crash in residential area | Sudan Plane Crash:  ಸುಡಾನಲ್ಲಿ ಹೆಚ್ಚುತ್ತಿರುವ ಅಂತರ್ಯುದ್ಧ ; ಮಿಲಿಟರಿ ವಿಮಾನ ಪತನ, ಅಧಿಕಾರಿಗಳು,  ನಾಗರಿಕರು ಸೇರಿ 46 ಸಾವು | Headline Karanataka

ವಿಮಾನ ಅಪಘಾತದಿಂದಾಗಿ ಭಾರಿ ಸ್ಫೋಟ ಸಂಭವಿಸಿದ್ದು, ಹತ್ತಿರದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡಿದೆ ಎಂದು ಉತ್ತರ ಓಮ್‌ಡರ್ಮನ್ ನಿವಾಸಿಗಳು ವರದಿ ಮಾಡಿದ್ದಾರೆ. ಕಳೆದ ತಿಂಗಳು ದಕ್ಷಿಣ ಸುಡಾನ್‌ನಲ್ಲಿಯೂ ಸಹ ವಿಮಾನ ಅಪಘಾತಕ್ಕೀಡಾಗಿತ್ತು. ಈ ವಿಮಾನದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ 21 ಜನರಿದ್ದರು. ವಿಮಾನ ಅಪಘಾತದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದರು.

 

 

Related posts

Leave a Comment