Mangalore and Udupi news
ಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಮಂಗಳೂರು: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ.!!

ಮಂಗಳೂರು : ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ ಮೆನ್ನಬೆಟ್ಟು ಗ್ರಾಮದ ಮಾರಡ್ಕ ನಿವಾಸಿ ರವಿ (34) ಎಂಬವರು ನ.7 ಗುರುವಾರ ಸಂಜೆ ಮನೆಯ ಪಕ್ಕದ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ರವಿ ರವರು ಮೃತಪಟ್ಟು ಕೆಲವು ದಿನಗಳಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ನಾಪತ್ತೆಯಾಗಿದ್ದ ರವಿಯವರು ಕೂಲಿ ಕೆಲಸವನ್ನು ಮಾಡಿಕೊಂಡಿದ್ದರು. ನ.2ರ ಬೆಳಿಗ್ಗೆ 10 ಗಂಟೆಗೆ ಮನೆಯಿಂದ ಪೇಟೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುವ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮುಲ್ಕಿ: ಯುವಕ ನಾಪತ್ತೆ

ರವಿ ಅವರ ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬಂದಿದ್ದು, ನ. 6 ರಂದು ಮನೆಯವರು ಮನೆಯ ಮಾಲೀಕರಿಗೆ ತಿಳಿಸಿ ಬಳಿಕ ಅವರು ನೆರೆಹೊರೆಯವರಲ್ಲಿ, ಸಂಬಂಧಿಕರಲ್ಲಿ ವಿಚಾರಿಸಿದ್ದಾರೆ. ಬಳಿಕ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುವ ಬಗ್ಗೆ ರವಿಯವರ ಪತ್ನಿ ಶ್ವೇತಾರವರು ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸದ್ಯ ನಾಪತ್ತೆಯಾಗಿದ್ದ ರವಿ ಶವವಾಗಿ ಪತ್ತೆಯಾಗಿದ್ದಾರೆ.

Missing person found dead
Mangaluru : Ravi (34), a resident of Maradka in Mennabettu village and associated with the Kinnigoli Town Panchayat, who had been missing for the past few days, was found dead in a pond near his house on Thursday, November 7 evening.

Related posts

Leave a Comment