ಅಭಿನವ ಭಾರತ ಸಂಘಟನೆ ಜಿಲ್ಲಾ ಘಟಕ ವತಿಯಿಂದ ಹಿಂದೂ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಶುಕ್ರವಾರ ಕಾರ್ಕಳ ಹವಲ್ದಾರ್‌ಬೆಟ್ಟುವಿನಲ್ಲಿ ಮಾತೃವಂದನಾ ಸಮಾವೇಶ ಮತ್ತು ಸಹ ಭೋಜನ ಕಾರ್ಯಕ್ರಮ ನಡೆಯಿತು.
ಸನಾತನ ಹಿಂದೂ ಧರ್ಮದ ಗಟ್ಟಿ ಅಡಿಪಾಯವಾಗಿರುವ ಆದಿ ದ್ರಾವಿಡ ಸಮಾಜದ ಮೇಲೆ ಪೂರ್ವಜರು ಹೇರಿರುವ ಅನಿಷ್ಠ ಪದ್ಧತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಅಭಿನವ ಭಾರತ ಸೊಸೈಟಿ ನೇತೃತ್ವದಲ್ಲಿ ಈ ಕಾರ್ಯಕ್ರಮ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೇರಿದೆ.
ಅದಮಾರು ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಭಾಗವಹಿಸಿ ಕಾಲನಿಯಲ್ಲಿ ಪಾದಯಾತ್ರೆ ನಡೆಸಿದರು. ಅನಂತರ ಮನೆಮನೆಗಳಿಗೆ ಭೇಟಿ ನೀಡಿ ಜನರೊಂದಿಗೆ ಮಾತುಕತೆ ನಡೆಸಿದರು.
ಸುರೇಶ್ ಹೆಗ್ಡೆ, ಲೋಕೇಶ್ ಬಿ ಸಾಲ್ಯಾನ್, ಬಾಲಕೃಷ್ಣ ಹೆಗ್ಡೆ, ಗುರುಸ್ವಾಮಿ ಬಾಲಾಜಿ, ಜಿಲ್ಲಾ ಸಂಘ ಚಾಲಕ ಸತೀಶ್ ಕಾಳವರ್ಕರ್, ಸಂಘಟನೆ ಕಾರ್ಯಕರ್ತ ರಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ, ಗುರುಪ್ರಸಾದ್ ನಾರಾವಿ, ರಮೇಶ್ ಶೆಟ್ಟಿ ತೆಳ್ಳಾರು, ಸಂತೋಷ್ ಕುಕ್ಕುದಕಟ್ಟೆ ಚಂದ್ರಶೇಖರ್ ಶೆಟ್ಟಿ, ಹವಾಲ್ದಾರ್‌ಬೆಟ್ಟು ಶಶಿಧರ್ ಸೇರಿದಂತೆ ಅಭಿನವ ಭಾರತ ಇದರ ಎಲ್ಲಾ ಕಾರ್ಯಕರ್ತರು ಭಾಗವಹಿಸಿದ್ದರು. ಕೊನೆಯಲ್ಲಿ ಸಹ ಭೋಜನ ನಡೆಯಿತು.