Mangalore and Udupi news
ಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಮಂಗಳೂರು: ಮನೋಜ್ ಕೋಡಿಕೆರೆ ವಿರುದ್ಧ ಮಾನಹಾನಿಕರ ಪೋಸ್ಟ್.!!

ಮಂಗಳೂರು: ಬಂಟ್ವಾಳದ ಟೋಲ್ ಗೇಟ್ ಬಳಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಮನೋಜ್ ಕೋಡಿಕೆರೆ ಇವರ ಹೆಸರನ್ನು ಬಳಸಿಕೊಂಡು ಮಾನಹಾನಿಕರ ಬರಹ ಹಾಕಿರುವ ಘಟನೆ ನಡೆದಿದೆ.

ಲೋಕೇಶ್ ಕೋಡಿಕೆರೆ ಹಾಗೂ ಕಾರ್ತಿಕ್ ಸುರತ್ಕಲ್ ಇಬ್ಬರು ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಗೂ ಕೆಲವು ಇನ್ಸ್ಟ ಗ್ರಾಮ್ ಖಾತೆಗಳಲ್ಲಿ ಮಾನಹಾನಿಕರ ಬರಹಗಳನ್ನು ಬರೆದು ಹಾಕಿದ್ದಾರೆ. ಇದರ ವಿರುದ್ಧ ಕಾನೂನಾತ್ಮಕ ಕ್ರಮಕ್ಕೆ ಮನೋಜ್ ಕೋಡಿಕೆರೆ ಇವರು ಆಗ್ರಹಿಸಿದ್ದಾರೆ.

ಘಟನೆ ಬಗ್ಗೆ ಮನೋಜ್ ಕೋಡಿಕೆರೆ ಇವರು ಹೇಳಿದ್ದೇನು.!?

“ಇದು ಅವರವರ ಸ್ವಂತ ವಿಚಾರಕ್ಕೆ ನಡೆದ ಗಲಾಟೆ. ಆದರೆ ಕೆಲವು ಕಿಡಿಗೇಡಿಗಳು ನನ್ನ ಹೆಸರನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿ ನನ್ನ ಹೆಸರನ್ನು ಬಳಸಿ ಸುಖಾಸುಮ್ಮನೆ ಮಾನಹಾನಿಕರ ಬರಹಗಳನ್ನು ಬರೆದು ಹಾಕಿದ್ದಾರೆ. ಈ ಪ್ರಕರಣಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ಟೋಲ್ ಗೇಟ್ ಬಳಿ ವಾಹನದ ವಿಚಾರಕ್ಕೆ ನಡೆದ ಗಲಾಟೆ ಇದಾಗಿದೆ. ಈ ಪ್ರಕರಣದಲ್ಲಿ ಇದ್ದವರು ನನ್ನ ಸ್ನೇಹಿತರು ಹೊರತು ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಘಟನೆಯನ್ನು ಬಳಸಿಕೊಂಡು ನನ್ನ ಹೆಸರು ಹಾಳು ಮಾಡುವ ಕೃತ್ಯಕ್ಕೆ ಕಿಡಿಗೇಡಿಗಳು ಕೈ ಜೋಡಿಸಿದ್ದಾರೆ. ಇದರ ವಿರುದ್ಧ ನಾನು ಕಾನೂನಾತ್ಮಕ ಹೋರಾಟ ನಡೆಸುತ್ತೇನೆ. ನಾನು ನನ್ನ ವೈಯಕ್ತಿಕ ಜೀವನದಲ್ಲಿ ಇರುವುದನ್ನು ಸಹಿಸಲಾಗದೆ ಇಂತಹ ಘಟನೆಯಲ್ಲಿ ನನ್ನ ಹೆಸರನ್ನು ಬಳಸಿ ಕೊಂಡು ನೀಚ ಕೃತ್ಯ ಎಸಗಿದ್ದಾರೆ.  ಲೋಕೇಶ್ ಕೋಡಿಕೆರೆ ಹಾಗೂ ಕಾರ್ತಿಕ್ ಸುರತ್ಕಲ್ ಎಂಬವರು ವಾಟ್ಸಾಪ್ ಸ್ಟೇಟಸ್ ನಲ್ಲಿ ಟೋಲ್ ಗೇಟ್ ನ ಸಿಸಿಟಿವಿ ಫೂಟೇಜ್ ಗಳು ಇವೆ. ಇದು ಪೊಲೀಸರಿಗೆ ಹೊರತು ಯಾರಿಗೂ ಸಿಗಬಾರದು ಆದರೆ ಇವರು ಅಕ್ರಮವಾಗಿ ಅದನ್ನು ಬಳಸಿಕೊಂಡಿದ್ದಾರೆ. ನಾನು ನನ್ನ ಸಮಾಜಮುಖಿ ಹಾಗೂ ವೈಯಕ್ತಿಕ ಜೀವನದಲ್ಲಿ ಬದುಕುತ್ತಿರುವುದನ್ನು ಸಹಿಸಲಾಗದೆ ಇಂತಹ ನೀಚ ಕೃತ್ಯ ಎಸಗಿದ್ದಾರೆ” ಎಂದು ಮನೋಜ್ ಕೋಡಿಕೆರೆ ಇವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಟೋಲ್ ಗೇಟ್ ಸಂಸ್ಥೆಯ ಸಿಸಿಟಿವಿ ವಿಡಿಯೋಗಳು ಸಾಮಾನ್ಯ ವ್ಯಕ್ತಿಗಳಿಗೆ ಸಿಗುವುದು ನಿಜಕ್ಕೂ ಕ್ರೈಮ್. ಈ ರೀತಿಯಾಗಿ ಅಪಪ್ರಚಾರ ಎಸಗುವವರ ಕೈಗೆ ಸಿಸಿಟಿವಿ ಫೂಟೇಜ್ ನೀಡಿದವರ ವಿರುದ್ಧವೂ ಕ್ರಮ ಜರಗಬೇಕು. ಅದೇ ರೀತಿ ಕಂಬಳದಲ್ಲಿ ಇಸ್ಪೀಟ್ ಆಟ ಆಡಿಸುವುದಾಗಿ ನನ್ನ ಹೆಸರು ಬಳಸಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಇಸ್ಪೀಟ್ ಆಟವಾಡಲು ಗೊತ್ತಿಲ್ಲ .. ನನಗೂ ಇದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಸಿಸಿಟಿವಿ ವಿಡಿಯೋ ಗಳನ್ನು ಬಳಸಿಕೊಂಡು ಸಮಾಜಕ್ಕೆ  ಕೆಟ್ಟ ಸಂದೇಶ ನೀಡುತ್ತಿದ್ದಾರೆ.

ಕಾರ್ತಿಕ್ ಎಂಬಾತ ಈ ರೀತಿಯಾಗಿ ನನ್ನ ಹೆಸರನ್ನು ಅಪಪ್ರಚಾರ ಮಾಡುತ್ತಿದ್ದಾನೆ. ಕಂಬಳದಲ್ಲಿ ನಡೆಯುತ್ತಿರುವ ಇಸ್ಪೀಟ್ ದಂಧೆಗೂ  ನನಗೂ ಸಂಬಂಧವೇ ಇಲ್ಲ.  ಹಾಗಾಗಿ ಇಂತಹ ಅಪಪ್ರಚಾರ ನಡೆಸುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹ ಮಾಡಿದ್ದಾರೆ.

Related posts

Leave a Comment