Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಮಂಗಳೂರು: ಆರ್‌ಪಿಸಿ ಆನ್‌ಲೈನ್ ವಂಚನೆ – 24 ವರ್ಷದ ಯುವಕ ಆತ್ಮಹತ್ಯೆ.!!

ಮಂಗಳೂರು : ಸೈಬರ್ ಕ್ರೈಮ್ ಗಳ ವಂಚನೆ ಜಾಲ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ ಇದೆ, ಡಿಜಿಟಲ್ ಜಗತ್ತಿನಲ್ಲಿ ಆನ್‌ಲೈನ್ ವಂಚನೆಗಳು ಮತ್ತು ಮೋಸದ ಆಟಗಳು ಸಾಮಾನ್ಯವಾಗಿದೆ, ಹೆಚ್ಚು ಹೆಚ್ಚು ಜನರು ಇಂತಹ ಬಲೆಗೆ ಬಲಿಯಾಗುತ್ತಿದ್ದಾರೆ. ಮಾಧ್ಯಮ ವರದಿಗಳ ಹೊರತಾಗಿಯೂ, ಈ ಬಗ್ಗೆ ಎಚ್ಚರಿಕೆ ನೀಡಿದರು ಜನರು ಮರುಳಾಗೋದು ಕಮ್ಮಿಯಾಗುತ್ತಿಲ್ಲ. ಸದ್ಯ 24 ವರ್ಷದ ಯುವಕ ಆರ್‌ಪಿಸಿ ವಂಚನೆಯಿoದ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮೂಡುಶೆಡ್ಡೆ ನಿವಾಸಿ ಸೂರ್ಯ (24) ಜೀವಾಂತ್ಯಗೊಳಿಸಿದ ಯುವಕ.

ಡಿ.24ರಂದು ಆರ್‌ಪಿಸಿ ಸ್ಥಗಿತಗೊಂದು ವಂಚನೆ ಬಗ್ಗೆ ವ್ಯಾಪಕ ಸುದ್ದಿಯಾಗಿತ್ತು, ಅದೇ ದಿನ ಸೂರ್ಯ ನಾಪತ್ತೆಯಾಗಿದ್ದರು. ಗುರುವಾರ ಮರವೂರು ನದಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಮೂಲಗಳ ಪ್ರಕಾರ, ಸೂರ್ಯ ಅವರು ಆರ್‌ಪಿಸಿ ಆ್ಯಪ್‌ನಲ್ಲಿ ಸುಮಾರು 70,000 ರೂಪಾಯಿಗಳನ್ನು ಹೂಡಿಕೆ ಮಾಡಿದ್ದರು ಮತ್ತು ಕಂಪನಿಯು ಮುಚ್ಚಲ್ಪಟ್ಟಿದೆ ಎಂದು ತಿಳಿದ ನಂತರ, ಹೂಡಿಕೆಗಾಗಿ ಹಣವನ್ನು ಸಾಲವಾಗಿ ಪಡೆದಿದ್ದರಿಂದ ಅವರು ತಮ್ಮ ಜೀವನವನ್ನು ಕಳೆದುಕೊಂಡಿದ್ದಾರೆ. ಕಾವೂರು ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಆರ್‌ಪಿಸಿ ಆನ್‌ಲೈನ್ ಆಪ್, ಇದು ಬಳಕೆದಾರರಿಗೆ ವೀಡಿಯೊಗಳನ್ನು ನೋಡುವ ಮೂಲಕ ಹಣ ಗಳಿಸುವ ಅವಕಾಶವನ್ನು ನೀಡುತ್ತದೆ. ಆರಂಭದಲ್ಲಿ, ಹಲವಾರು ವ್ಯಕ್ತಿಗಳು ಸ್ವಲ್ಪ ಹಣವನ್ನು ಗಳಿಸಿದ್ದಾರೆ. ಇದರಿಂದ ಲಾಭದಾಯಕ ಆದಾಯದ ಭರವಸೆಯಿಂದ ವಿಷಪ ವೇಗವಾಗಿ ಹಬ್ಬಿ ದೊಡ್ಡ ಜಾಲವಾಗಿ ಬೆಳೆದುನಿಂತ್ತಿತ್ತು. ಇದರಿಂದ ಹಲವರು ಕೋಟ್ಯಂತರ ರೂ.ಗಳನ್ನು ಈ ಹಗರಣದಲ್ಲಿ ತೊಡಗಿಸಿದ್ದಾರೆ. ಸದ್ಯ ಇದರ ವಂಚನೆ ಬಯಲಾಗಿದೆ.

Advertisement

Related posts

1 comment

Punith December 28, 2024 at 3:50 pm

Fake news
Aye aik investment maldhjer
Pokde

Reply

Leave a Comment