Mangalore and Udupi news
ಉಡುಪಿಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ನಾರಾವಿಯಲ್ಲಿ ಲೋಕಕಲ್ಯಾಣಾರ್ಥ ಮಹಾ ಚಂಡಿಕಾಯಾಗ – ಧರ್ಮ ಯಜ್ಞದಲ್ಲಿ 25 ಸಾವಿರಕ್ಕೂ ಹೆಚ್ಚಿನ ಭಕ್ತರು ಭಾಗಿ

ಕಾರ್ಕಳ : ಪರಸ್ಪರ ಯುವಕ ಮಂಡಲ ಈದು ನಾರಾವಿ ಇವರ ನೇತೃತ್ವದಲ್ಲಿ ಡಿ. 22ರಂದು ನಾರಾವಿಯ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ನಾರಾವಿ ಮಹಾ ಚಂಡಿಕಾಯಾಗ ಯಶಸ್ವಿಯಾಗಿ ನಡೆದಿದೆ.

ನಾರಾವಿಯಲ್ಲಿ ಮಹಾಚಂಡಿಕಾಯಾಗ ಸಾವಿರಾರು ಭಕ್ತರಿಂದ ವೃತಾಚರಣೆ ಚಂಡಿಕಾಯಾಗದಲ್ಲಿ ಸುಮಾರು ಒಂದು ಸಾವಿರ ಭಕ್ತರು ವೃತಾಚರಣೆ ಕೈಗೊಂಡು ಪೂಜೆಯಲ್ಲಿ ಪಾಲ್ಗೊಂಡರು. ನೂರಾರು ವಾಹನಗಳಲ್ಲಿ ಹಸಿರುವಾಣಿ ಹೊರೆಕಾಣಿಕೆ ಹರಿದು ಬಂದಿದೆ. ಒಂದು ಸಾವಿರ ಭಜಕರಿಂದ ಕುಣಿತಾ ಭಜನೆ ಮೇಲೈಸಿದೆ. ಸುಮಾರು ಏಳು ಸಾವಿರ ಮನೆಗಳಿಗೆ ಮಂತ್ರಾಕ್ಷತೆಯೊoದಿಗೆ ಆಮಂತ್ರಣ ಪತ್ರಿಕೆ ಹಂಚಲಾಗಿದೆ. ದೂರದ ಮುಂಬಯಿ ಹಾಗೂ ಅವಿಭಜಿತ ದ.ಕ ಜಿಲ್ಲೆ, ಕುಂದಾಪುರ ಮುಂತಾದ ಕಡೆಗಳಿಂದ ಭಕ್ತರು ಆಗಮಿಸಿದ್ದಾರೆ. ಶಾಲಾ ಮಕ್ಕಳಿದ ಸಾಂಸ್ಕೃತಿಕ ವೈಭವ ನಡೆದಿದೆ, ಭಕ್ತಿಪ್ರಧಾನ ಕಾರ್ಯಕ್ರಮಗಳು, ವಿಠಲ ನಾಯಕ್ ಕಲ್ಲಡ್ಕ ಅವರಿಂದ ಗೀತಾಸಾಹಿತ್ಯ ಸಂಭ್ರಮ ನಡೆದಿದೆ.

ಶಿವದೂತೆ ಗುಳಿಗ ನಾಟಕ ಪ್ರೇಕ್ಷಕರ ಮನ ರಂಜಿಸಿದೆ. ಕೇಸರಿಮಯವಾದ ನಾರಾವಿ ಪರಿಸರ, ಎಲ್ಲಿ ನೋಡಿದರಲ್ಲಿ ಕಾರ್ಯಕ್ರಮದ ಬ್ಯಾನರ್, ರಸ್ತೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರ ಕಾರ್ಯಕ್ರಮಕ್ಕೆ ಮೆರಗು ನೀಡಿದೆ.

ಚಂಡಿಕಾಯಾಗದ ರೂವಾರಿ ಗುರುಪ್ರಸಾದ್ ಶೆಟ್ಟಿ ಅವರು ಮಾತಾನಾಡಿ ಹಿಂದೂ ಧರ್ಮದ ರಕ್ಷಣೆಗಾಗಿ ನಾವೆಲ್ಲರೂ ಜಾತಿ, ರಾಜಕೀಯ, ಮೇಲು-ಕೀಳು ಎಂಬ ಬೇಧ-ಭಾವ ಬಿಟ್ಟು ಕೆಲಸ ಮಾಡಿದಾಗ ಹಿಂದೂ ಸಮಾಜ ಗಟ್ಟಿಯಾಗಿ ನಿಲ್ಲುತ್ತವೆ. ಚಂಡಿಕಾಯಾಗ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊoಡಿದೆ. ಅದರ ಹಿಂದೆ ದುಡಿದ ಎಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಚಂಡಿಕಾಯಾಗದಲ್ಲಿ ಸರಿ ಸುಮಾರು 25 ಸಾವಿರಕ್ಕೂ ಹೆಚ್ಚು ಭಕ್ತರು ಸೇರಿ ದೇವರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಬಯಿ ಮೂಕಾಂಬಿಕಾ ದೇವಸ್ಥಾನದ ಮುಖ್ಯಸ್ಥರಾದ ಅಣ್ಣಿ ಶೆಟ್ಟಿ ವಹಿಸಿ, ಚಂಡಿಕಾಯಾಗದ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉಡುಪಿ ಆನೆಗುಂದಿ ಮಹಾಸಂಸ್ಥಾನದ ಅನಂತ ಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಆಗಮಿಸಿದ್ದರು. ಶಾಸಕ ಹರೀಶ್ ಪೂಂಜ, ಆಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್, ಬರೋಡ ಪ್ರಸಿದ್ದ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ, ಬಾಲ ವಾಗ್ಮಿ ಕು. ಹಾರಿಕಾ ಮಂಜುನಾಥ್, ಕರ್ನಾಟಕ ರಾಜ್ಯ ಕ್ವಾರಿ ಮತ್ತು ಕ್ರಶರ್ ಅಸೋಸಿಯೇಶನ್‌ನ ರಾಜ್ಯಾಧ್ಯಕ್ಷ ಡಾ. ರವೀಂದ್ರ ಶೆಟ್ಟಿ, ಉದಯ ಕುಮಾರ್ ಶೆಟ್ಟಿ ಮುನಿಯಾಲು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗಿಯಾಗಿದ್ದರು.

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಕಾರ್ಕಳ ಗಾಯತ್ರಿ ಎಕ್ಸ್ ಪೋರ್ಟು ಪ್ರಶಾಂತ್ ಕಸಮತ್ ಬೋಳ, ಮೂಡಬಿದ್ರೆ, ಉದ್ಯಮಿ ಸುರೇಶ್ ಶೆಟ್ಟಿ, ಖ್ಯಾತ ಲೇಖಕ ಶ್ರೀಕಾಂತ್ ಶೆಟ್ಟಿ ಕಾರ್ಕಳ, ಪರಸ್ಪರ ಯುವಕ ಮಂಡಲದ ಪ್ರಮುಖರಾದ ಗುರುಪ್ರಸಾದ್ ಶೆಟ್ಟಿ, ಬೆಂಗಳೂರು ಉದ್ಯಮಿ ಕಿರಣ್ ಚಂದ್ರ ಧರ್ಮಸ್ಥಳ, ಉದ್ಯಮಿ ವಸಂತ ಭಟ್ ಶ್ರೀ ಸರಸ್ವತಿ, ಬಳ್ಳುಂಜೆಗುತ್ತು ಮಲ್ಲಿಕಾ ಯಶವಂತ ಶೆಟ್ಟಿ, . ಚಂದ್ರಶೇಖರ ಜಾರೋಡಿ ನಾರಾವಿ, ಡಾ. ಪ್ರಸಾದ್ ಶೆಟ್ಟಿ ಹೊಸ್ಮಾರು, ಜಯಂತ್ ಕೋಟ್ಯಾನ್ ಮರೋಡಿ, ನಾರಾವಿ ಸಿ.ಎ. ಬ್ಯಾಂಕ್ ಅಧ್ಯಕ್ಷ ಸುಧಾಕರ ಭಂಡಾರಿ, ನಾರಾವಿ ಗ್ರಾ.ಪಂ ಅಧ್ಯಕ್ಷ ರಾಜವರ್ಮ ಜೈನ್, ಹೊಸ್ಮಾರು ರತೀಶ್ ಕುಮಾರ್, ರಂಜಿತ್ ಕುಮಾರ್ , ಮಂಜಣ್ಣ ಸೇವಾ ಬ್ರಿಗೇಡ್ ಇದರ ಸ್ಥಾಪಕಾಧ್ಯಕ್ಷ ಮನೋಜ್ ಕೋಡಿಕೆರೆ, ಸುನೀಲ್ ಜೈನ್ ಪದ್ಮಾಂಭ ಅಳದಂಗಡಿ, ಕೃಷ್ಣ ಶೆಟ್ಟಿ ಹೆಮ್ಮೆಂದೊಟ್ಟು, ಮರೋಡಿ ಗ್ರಾ.ಪಂ ಅಧ್ಯಕ್ಷ ರತ್ನಾಕರ ಬುಣ್ಣನ್, ಇದು ಗ್ರಾ.ಪಂ ಅಧ್ಯಕ್ಷ ಸದಾನಂದ ಪೂಜಾರಿ, ಪರಸ್ಪರ ಯುವಕ ಮಂಡಲದ ಗೌರವಾಧ್ಯಕ್ಷ ಜಗದೀಶ್ ಅಂಚನ್, ಗ್ರಾ.ಪಂ ಸದಸ್ಯ ವಸಂತ ಸಾಲಿಯಾನ್, ಪರಸ್ಪರ ಯುವಕ ಮಂಡಳದ ಅಧ್ಯಕ್ಷ ಪ್ರಸಾದ್ ಪೂಜಾರಿ, ಗುಲಾಬಿ ಶಂಕರ ಶೆಟ್ಟಿ ಕಲ್ಲಾರು, ಆನಂದ ಶೇರಿಗಾರ್, ಬಾಲಕೃಷ್ಣ ಹೆಗ್ಡೆ ಮುಂಬಯಿ, ನಾಗ ಕುಮಾರ್ ಪದ್ಮಾಂಬ ಆಳದಂಗಡಿ ಉಪಸ್ಥಿತರಿದ್ದರು.

ನವನೀತ್ ಪ್ರಾರ್ಥನೆ ಹಾಡಿದರು. ಪರಸ್ಪರ ಯುವಕ ಮಂಡಲದ ಪ್ರ ಕಾರ್ಯದರ್ಶಿ ಅಶೋಕ್ ಎಂ.ಕೆ ಸ್ವಾಗತಿಸಿದರು. ಸತೀಶ್ ಹೊಸ್ಕಾರು ನಿರೂಪಿಸಿದರು.

Advertisement

Related posts

Leave a Comment