ಮಂಗಳೂರು: ಕರಾವಳಿ ಮೂಲದ ಸುಹಾಸ್‌ ಕೆ. ಅವರು ಭಾರತೀಯ ಭೂಸೇನೆಯ ಆರ್ಟಿಲರಿ ವಿಭಾಗದಲ್ಲಿ ಲೆಫ್ಟಿನೆಂಟ್‌ ಆಗಿ ನೇಮಕಗೊಂಡಿದ್ದಾರೆ.

ಸುಹಾಸ್‌ ಕೆ. ಅವರು ಚೆನ್ನೈಯ ಆಫೀಸರ್ಸ್‌ ಟ್ರೈನಿಂಗ್‌ ಅಕಾಡೆಮಿಯಲ್ಲಿ ತರಬೇತಿ ಮುಗಿಸಿ ಲೆಫ್ಟಿನೆಂಟ್‌ ಆಗಿ ನೇಮಕಗೊಂಡರು.

ಉಡುಪಿಯ ಸೈಂಟ್‌ ಮೇರಿಸ್‌ನಲ್ಲಿ ಪ್ರಾಥಮಿಕ, ಶಾರದಾ ಪಿಯು ಕಾಲೇಜಿನಲ್ಲಿ ಪ.ಪೂ. ಶಿಕ್ಷಣ ಮುಗಿಸಿದ್ದ ಅವರು ಶ್ರೀ ಜಯಚಾಮರಾಜೇಂದ್ರ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ನಲ್ಲಿ ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಶಿಕ್ಷಣವನ್ನು ಪಡೆದಿದ್ದಾರೆ.