ಮಂಗಳೂರಿನ ಮಾರಿಪಳ್ಳದಲ್ಲಿ ತಡರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ವರದಿಯಾಗಿದೆ. ಸುಳ್ಯದ ಆಲೆಟ್ಟಿ ಗ್ರಾಮದ ನೆಡ್ಡಿಲು ವಾಸುದೇವ ಗೌಡ ರವರ ಪುತ್ರ ಇಂಜಿನಿಯರಿಂಗ್ ವಿದ್ಯಾರ್ಥಿ ಸೇವಂತ್ ನೆಡ್ಡಿಲು ಮೃತಪಟ್ಟ ಯುವಕ.
ಪುತ್ತೂರಿನಿಂದ ಮಂಗಳೂರು ಕಡೆಗೆ ಗೆಳೆಯರೊಂದಿಗೆ ಬೈಕಿನಲ್ಲಿ ಹೋಗುತ್ತಿರುವಾಗ ಮಾರಿಪಳ್ಳ ಎಂಬಲ್ಲಿ ಟಿಪ್ಪರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸೇವಂತ್ ರವರು ರಸ್ತೆ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಗಾಯಾಳುವನ್ನು ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.
ತಲೆಗೆ ವಿಪರೀತ ಏಟಾಗಿದ್ದರಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ. ಮೃತರು ತಂದೆ ವಾಸುದೇವ ಗೌಡ ನೆಡ್ಡಿಲು, ತಾಯಿ ಶೋಭಾ ನೆಡ್ಡಿಲು ಹಾಗೂ ಸಹೋದರ ಲೋಚನ್ ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.