Mangalore and Udupi news
Blog

ಉಡುಪಿ: ಯುವ ಕಾಂಗ್ರೆಸ್ ಅಂತರಿಕ ಚುನಾವಣೆಗೆ ಬಿಜೆಪಿ ಶಾಸಕ ಯಶಪಾಲ್ ಸುವರ್ಣ ಬೆಂಬಲ ಕೋರಿದ ಅಭ್ಯರ್ಥಿ ಅರ್ಜುನ್ ನಾಯರಿ.!!

ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಂತರಿಕ ಚುನಾವಣೆಗೆ ಶಾಸಕ ಯಶಪಾಲ್ ಸುವರ್ಣ ಬೆಂಬಲ ಕೋರಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಭ್ಯರ್ಥಿ ಅರ್ಜುನ್ ನಾಯರಿ ಎಂಬ ವಿಷಯ ಸದ್ಯ ಸಂಚಲನ ಮೂಡಿಸಿರುವ ಘಟನೆ. ಪರ ವಿರೋಧ ಹಾಗೂ ಸಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಬಿಜೆಪಿ ಪಕ್ಷ ಸದಸ್ಯತ್ವ ಅಭಿಯಾನ ಕೈಗೊಂಡಿದ್ದು ಪಕ್ಷಕ್ಕಾಗಿ ಹೊಸ ಕಾರ್ಯಕರ್ತರನ್ನು ಜೋಡಿಸುವ ನಿಟ್ಟಿನಲ್ಲಿ ಎರಡು ಪಕ್ಷದ ಕಾರ್ಯಕರ್ತರುಗಳು ಹೊಸ ಸದಸ್ಯರನ್ನು ನೋಂದಾಯಿಸುವಲ್ಲಿ ಬೂತ್ ಮಟ್ಟದ ಅಭಿಯಾನ ನಡೆಸುತ್ತಿದ್ದು ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಅಭ್ಯರ್ಥಿ ಬಿಜೆಪಿ ಶಾಸಕರ ಹಾಗೂ ಬಿಜೆಪಿ ಕಾರ್ಯಕರ್ತರ ಬೆಂಬಲ ಬಯಸಿರುವ ವಿಚಾರ ಬೆಳಕಿಗೆ ಬಂದಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

2024 ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಆಂತರಿಕ ಚುನಾವಣೆ ಸಂದರ್ಭ ವೈರಲ್ ಆದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ವ್ಯಕ್ತವಾಗಿದ್ದು, ಕಾಂಗ್ರೆಸ್ ಗೆ ಭಾರೀ ಮುಖಭಂಗ ಉಂಟುಮಾಡಿದೆ.

ಪ್ರಸ್ತುತ ಕರ್ನಾಟಕದಲ್ಲಿ ನಡೆಯುತ್ತಿರುವ ಯುವ ಕಾಂಗ್ರೆಸ್ ಚುನಾವಣೆ ಆಗಸ್ಟ್ 20 ರಿಂದ ಸೆಪ್ಟೆಂಬರ್ 20ರವರೆಗೆ with IYC ಯಾಪ್ ಆಂಡ್ರಾಯ್ಡ್ ಐಒಎಸ್ ಮೊಬೈಲ್ ನಲ್ಲಿ ಒಂದು ತಿಂಗಳ ಸಮಯ ಏಕ ಕಾಲದಲ್ಲಿ ಸದಸ್ಯತ್ವ ಹಾಗೂ ಚುನಾವಣೆ ನಡೆಯುತ್ತಿದ್ದು ರಾಜ್ಯದಲ್ಲಿ ಈಗಾಗಲೇ ಹದಿನೆಂಟು ಲಕ್ಷಕ್ಕೂ ಮೀರಿ ಸದಸ್ಯತ್ವ ನಡೆದಿರುತ್ತದೆ. ಎನ್ನಲಾಗಿದೆ.

ಉಡುಪಿ ಜಿಲ್ಲೆಯ ಯುವ ಕಾಂಗ್ರೆಸ್ ಜಿಲ್ಲಾದ್ಯಕ್ಷ ಸ್ಥಾನಕ್ಕೆ ಐದು ಮಂದಿ ನಾಮಪತ್ರ ಸಲ್ಲುಸಿದ್ದು ಪೈಪೋಟಿ ಇದೇ ಎನ್ನಲಾಗಿದೆ. ಚುನಾವಣೆ ಅಂತ್ಯ ಗೊಳ್ಳಲು ಐದು ದಿನ ಬಾಕಿ ಇರುವಾಗ ಉಡುಪಿ ಬಿಜೆಪಿ ಶಾಸಕ ಯಶಪಾಲ್ ಸುವರ್ಣ ಅವರ ಕಚೇರಿಯಲ್ಲಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಭ್ಯರ್ಥಿ ಅರ್ಜುನ್ ನಾಯರಿ ಭೇಟಿಯಾಗಿರುವುದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೊಳಗಾಗಿ ಕಾಂಗ್ರೆಸ್ ಗೆ ಮುಖ ಭಂಗವಾಗಿ ಪರಿಣಮಿಸಿದೆ.

ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಬಿಜೆಪಿ ಶಾಸಕ ಯಶಪಾಲ್ ಸುವರ್ಣರನ್ನು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಹಾಗೂ ಏಬಿವಿಪಿ ಕಾರ್ಯಕರ್ತರನ್ನು ಜೊತೆಗೆ ಕರೆದುಕೊಂಡು ಹೋಗಿ ಯುವ ಕಾಂಗ್ರೆಸ್ ಚುನಾವಣೆಗೆ ಬೆಂಬಲ ಕೋರಿದ್ದರೆನ್ನಲಾದ ವಿಚಾರ ಕಾಂಗ್ರೆಸ್ ಪಾಳಯದಲ್ಲಿ ವಿಪರೀತ ಆಕ್ರೋಶ ಭುಗಿಲೆದ್ದಿದ್ದೆ.

ವಿಶೇಷವಾಗಿ ಕಾಂಗ್ರೇಸ್ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವರ ಪ್ರಕೃತಿಗೆ ಯಶಪಾಲ್ ಸುವರ್ಣ ನೇತೃತ್ವದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಚಪ್ಪಲಿ ಏಟು ನೀಡಿ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದ್ದು ಈ ಸಂದರ್ಭದಲ್ಲಿ ಒಬ್ಬ ಅಭ್ಯರ್ಥಿಯಾಗಿ ಬಿಜೆಪಿ ಶಾಸಕನ ಭೇಟಿಯಾಗುವ ತುರ್ತು ಏನಿತ್ತು ಹಾಗೂ ಇಂತವರು ಅಧ್ಯಕ್ಷರಾದರೆ ಯಾವರೀತಿಯ ಹೋರಾಟವನ್ನು ಅಪೇಕ್ಷಿಸಬಹುದು ಹಾಗೂ ಇವರ ಬದ್ಧತೆ ಏನು ಎಂದು ಸಾಬೀತಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿ ಜಿಲ್ಲೆಯು ಒಂದು ಕಾಲದಲ್ಲಿ ಕಾಂಗ್ರೆಸ್ ಬಿಜೆಪಿ ಪಕ್ಷಗಳು ಬದ್ಧ ವೈರಿಗಳಂತೆ ಪಕ್ಷ ಸಂಘಟನೆ ಮಾಡುವ ಕಾಲವಾಗಿತ್ತು. ಕಾಂಗ್ರೆಸ್ ಆಂತರಿಕ ಚುನಾವಣೆಗೂ ಬಿಜೆಪಿ ನಾಯಕರ ಬೆಂಬಲ ಬೇಕೆಂದರೇ ನಾಚಿಕೆಗೀಡು ಎನ್ನುವಂತಿದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಹಾಗೂ ಲೋಕಸಭಾ ಚುನಾವಣೆಯಲ್ಲೂ ಹೀನಾಯ ಸೋಲು ಕಂಡಿದ್ದು ಪಕ್ಷದ ಉಸ್ತುವಾರಿ ವಹಿಸಿಕೊಂಡವರು ಇಂತಹ ಸಂದರ್ಭದಲ್ಲೂ ಕಣ್ಣು ಮುಚ್ಚಿ ಕೂತಿದ್ದಾರೆಯೆ ಎಂದು ಕಾರ್ಯಕರ್ತರ ಪ್ರಶ್ನೆ ಇದೀಗ ಬಿಸಿ ಬಿಸಿ ಸುದ್ದಿಯಾಗಿದೆ.

ಉಡುಪಿ ವಿಧಾನಸಭಾ ಕ್ಷೇತ್ರದ ಬ್ರಹ್ಮಾವರ ಬ್ಲಾಕ್ ನ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ಸಂಘಟನಾ ಕಾರ್ಯಕರ್ತರು, ಎಬಿವಿಪಿ ಕಾರ್ಯಕರ್ತರ ಮೊಬೈಲ್ ನಲ್ಲಿ ಯುವ ಕಾಂಗ್ರೆಸ್ ಸದಸ್ಯತ್ವ ಆಪ್ ಇದ್ದು, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಯಾರಾಗಬೇಕೆಂದು ನಿರ್ಧರಿಸುವುದು ಬಿಜೆಪಿ ಎನ್ನುವ ನಿಟ್ಟಿನಲ್ಲಿ ಊಹಾಪೋಹಗಳು ಹರಿದಾಡುತ್ತಿವೆ. ಈ ಅಭ್ಯರ್ಥಿ ಮಾಜಿ ಸಚಿವರ ಆಪ್ತ ಕಾರ್ಯದರ್ಶಿಯವರ ಸಂಬ0ಧಿಯಾಗಿದ್ದು ಅವರ ಪ್ರಭಾವ ಬಳಸಿ ಬ್ರಹ್ಮಾವರ ಕೋಟ ಭಾಗದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಅಕ್ರಮ ಮರಳುಗಾರಿಕೆ ಮುಂತಾದ ಚಟುವಟಿಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೂಡ ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Related posts

Leave a Comment