ಹಳೆಯಂಗಡಿ : ಸಹೃದಯಿ ಗೆಳೆಯರು ಪಡುಪಣಂಬೂರು ಕಳೆದ 3 ವರ್ಷದಿಂದ ಹಳೆಯಂಗಡಿ ಸಾರ್ವಜನಿಕ ಗಣೇಶೋತ್ಸವಕ್ಕೆ ವಿಭಿನ್ನ ವೇಷ ಧರಿಸಿ ಹಣ ಸಂಗ್ರಹಿಸಿ ಅಶಕ್ತರ ಚಿಕಿತ್ಸಾ ವೆಚ್ಚಕ್ಕೆ ನೆರವಾಗುತ್ತಿದ್ದಾರೆ.
ಈ ಬಾರಿ ರೂಪಾಯಿ 4,68,058 ಮೊತ್ತವನ್ನು ಸಂಗ್ರಹ ಮಾಡಿ ಅಶಕ್ತರ ಚಿಕಿತ್ಸಾ ವೆಚ್ಚಕ್ಕಾಗಿ ಹಸ್ತಾಂತರಿಸಿದ್ದಾರೆ.
ಪಂಚಾಯತ್ ಸದಸ್ಯರಾಗಿರುವ ದಿನೇಶ್ ಪಡುಪಣಂಬೂರು ಇವರು ಕಳೆದ ಮೂರು ವರ್ಷಗಳಿಂದ ವಿಶೇಷ ವೇಷ ಧರಿಸುವ ಮೂಲಕ ತನ್ನ ತಂಡ ಕಟ್ಟಿಕೊಂಡು ಬಡವರ ಕಣ್ಣೀರು ವರೆಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇವರ ಈ ಸೇವೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಸಹೃದಯಿ ಗೆಳೆಯರು ಪಡುಪಣಂಬೂರು ಈ ವರ್ಷದ ಸೇವಾ ಕಾರ್ಯ ಶ್ರಧ್ಧಾ ಸುನಿಲ್ ಮಗುವಿನ ಚಿಕಿತ್ಸೆಗೆ ರೂ 1,59,021 ಹಾಗೂ ಸವಿತಾ ಲಿಂಗಪ್ಪಯ್ಯಕಾಡು ಅವರ ಚಿಕಿತ್ಸೆಗೆ ರೂ 2,5021 ಮೊತ್ತವನ್ನು ಹಸ್ತಾಂತರ ಮಾಡಿದ್ದಾರೆ.