Mangalore and Udupi news
Blogಅಪರಾಧಉಡುಪಿಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

(ನ.25) ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ವಿರುದ್ಧ ಬೃಹತ್ ಜನಾಗ್ರಹ ಸಭೆ.!!

ಹಿಂದೂ ಕಾರ್ಯಕರ್ತ ರಮೇಶ್ ಶೆಟ್ಟಿ ತೆಳ್ಳಾರ್ ಮೇಲೆ ಜಾಮೀನು ರಹಿತ ಸುಮೋಟೊ ಕೇಸ್ ದಾಖಲಿಸಲಾಗಿದ್ದು, ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಸುಮಾರು 45ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಮೇಲೆ ಸುಮೊಟೊ ಕೇಸ್ ದಾಖಲಿಸುವ ಮೂಲಕ ಕಾರ್ಯಕರ್ತರ ಆತ್ಮಸ್ಥೈರ್ಯ ಕೂಗ್ಗಿಸುವ ತಂತ್ರ ನಡೆಯುತ್ತಿದೆ. ಈ ವರಿಷ್ಠಾಧಿಕಾರಿ ಬಂದ ನಂತರ ಹಿಂದೂ ವಿರೋಧಿ ನೀತಿ ಅನುಸರಿಸಲಾಗುತ್ತಿದೆ. ಇತಂಹ ದೌರ್ಜನ್ಯವನ್ನು ಹಿಂದೂ ಜಾಗರಣ ವೇದಿಕೆ ಖಂಡಿಸಿದ್ದು, ಹೋರಾಟದ ಎಚ್ಚರಿಕೆಯನ್ನು ನೀಡಿದೆ.

ಸದ್ಯ ಹಿಂದೂ ಜಾಗರಣ ವೇದಿಕೆಯ ಮನವಿ, ಎಚ್ಚರಿಕೆಗೂ ಸ್ಪಂದಿಸದ ಪೊಲೀಸ್ ಇಲಾಖೆ ವಿರುದ್ಧ ಬೃಹತ್ ಜನಾಗ್ರಹ ಸಭೆ ನಡೆಯಲಿದೆ.

ಈ ಘಟನೆಯಿಂದ ಹಿಂದೂ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಹಿಂದೂ ಜಾಗರಣ ವೇದಿಕೆ ಈ ಘಟನೆಯನ್ನು ತೀವ್ರವಾಗಿ ಖಂಡಿಸಿ, ಎಚ್ಚರಿಕೆ ನೀಡಿದರು ಸುಮೊಟೊ ಕೇಸನ್ನು ಪೊಲೀಸರು ಹಿಂಪಡೆಯದೆ ಇರುವ ಕಾರಣ ದಿನಾಂಕ 25-11-2024ರಂದು ಬೃಹತ್ ಜನಾಗ್ರಹ ಸಭೆ ಆಯೋಜಿಸಿದ್ದಾರೆ.

ಹಿಂದೂ ಜಾಗರಣ ವೇದಿಕೆ ಆಕ್ರೋಶವೇನು.!?? ಪ್ರಕಟಣೆಯಲ್ಲಿ ಏನಿದೆ.!!

ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗೆ ಸಿದ್ದು ಸರ್ಕಾರ ಹಿಂದೂ ಸಂಘಟನೆಗಳ ನಿರ್ಮೂಲನೆಯ ಗುತ್ತಿಗೆ ಕೊಟ್ಟಂತೆ ಕಾಣುತ್ತಿದೆ. ಈ ಅಧಿಕಾರಿಯ ಅಧಿಕಾರಾವಧಿಯಲ್ಲಿ ಜಿಲ್ಲೆಯ ತುಂಬಾ ನಮ್ಮ ಸಂಘಟನೆಯ ಕಾರ್ಯಕರ್ತರು ಹತ್ತಾರು ಸುಳ್ಳು ಕೇಸುಗಳಿಗೆ ತಲೆಕೊಟ್ಟಿದ್ದಾರೆ. ಪ್ರಮುಖ ಕಾರ್ಯಕರ್ತರನ್ನು ಉದ್ದೇಶಪೂರ್ವಕವಾಗಿ ರೌಡಿಶೀಟರ್ ಎಂದು ಗುರುತಿಸಿ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ. ಒಂದೆರಡು ಹೋರಾಟದ ಕೇಸುಗಳಿದ್ದ ಕಾರ್ಯಕರ್ತರಿಗೆ ಕ್ರಿಮಿನಲ್ ಪಟ್ಟ ಕಟ್ಟಲಾಗುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಹಿಂದುತ್ವದ ಬಗ್ಗೆ ಎಲ್ಲಾದರೂ ಬರೆದರೆ ಮಾತನಾಡಿದರೆ ಅವರ ವಿರುದ್ಧ ಮರುದಿನವೇ ಪೊಲೀಸ್ ಇಲಾಖೆ ನೋಟಿಸ್ ಜಾರಿ ಮಾಡುತ್ತಿದೆ. ಹಿಂದೂ ಕಾರ್ಯಕರ್ತರನ್ನು ನಿಷೇಧಿತ ಉಗ್ರ ಸಂಘಟನೆಯ ಸದಸ್ಯರಂತೆ ನಡೆಸಿಕೊಳ್ಳುತ್ತಿರುವ ಈ ಹಿಂದೂ ವಿರೋಧಿ ಪೊಲೀಸ್ ವರಿಷ್ಠಾಧಿಕಾರಿಗೆ ಜಿಲ್ಲೆಯ ಹಿಂದೂ ಸಂಘಟನೆಗಳ ಬಲ ಏನು ಎಷ್ಟು ಎಂದು ತೋರಿಸುವ ಸಮಯ ಬಂದಿದೆ. ಕಾರ್ಕಳದಲ್ಲಿ ಕೇವಲ ಹಿಂದೂ ವ್ಯಾಪಾರಸ್ಥರಿಗೆ ಅಂಗಡಿಗಳನ್ನು ನೀಡಿ ಎಂದು ಮನವಿ ಮಾಡಿದ ಕಾರಣಕ್ಕೆ ಹಿಂದೂ ಕಾರ್ಯಕರ್ತನೊಬ್ಬನ ಮೇಲೆ ಜಾಮೀನು ರಹಿತ ಕೇಸು ದಾಖಲಿಸಲಾಗಿದೆ. ಇದನ್ನು ಹೀಗೆ ಬಿಟ್ಟರೆ, ಈ ಎಸ್ ಪಿ ಜಾತ್ಯಾತೀತತೆಯ ಹೆಸರಲ್ಲಿ ನಾಳೆ ಮುಸಲ್ಮಾನರನ್ನು ನಮ್ಮ ದೇವಸ್ಥಾನದ ಪೂಜೆಗೆ ಕೂರಿಸಿದರೂ ಅಚ್ಚರಿ ಇಲ್ಲ.!” ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಿಂದುಗಳ ದೇವಸ್ಥಾನದಲ್ಲಿ, ಜಾತ್ರೆಗಳಲ್ಲಿ ಹಿಂದುಗಳು ವ್ಯಾಪಾರ ಮಾಡಲು ಸ್ವತಂತ್ರರಲ್ಲ ಎಂದಾದರೆ ಹಿಂದೂ ಸಮಾಜದ ಅಸ್ಮಿತೆಯಾದರೂ ಎಲ್ಲಿ ಉಳಿಯಿತು.? ಈಗಲೂ ನಾವು ಎಚ್ಚೆತ್ತುಕೊಂಡು ಪೊಲೀಸ್ ದೌರ್ಜನ್ಯವನ್ನು ಖಂಡಿಸದೇ ಇದ್ದರೆ, ಜಿಲ್ಲೆಯಲ್ಲಿ ಹಿಂದೂ ಪರವಾಗಿ ಧ್ವನಿ ಎತ್ತಲು ಒಬ್ಬನೇ ಒಬ್ಬ ಕಾರ್ಯಕರ್ತ ಸಿಗಲಿಕ್ಕಿಲ್ಲ. 25 ನೇ ತಾರೀಕು ಸೋಮವಾರ ಬೆಳಿಗ್ಗೆ ಉಡುಪಿಯ ವರಿಷ್ಟಾಧಿಕಾರಿ ಕಚೇರಿಯ ಮುಂದೆ ನಾವೆಲ್ಲರೂ ದೊಡ್ಡ ಸಂಖ್ಯೆಯಲ್ಲಿ ಸೇರೋಣ. ಈಗ ಹಾಕಿರುವ ಸುಳ್ಳು ಕೇಸುಗಳಿಗೆ ಕಾರಣ ಕೇಳೋಣ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related posts

Leave a Comment