Mangalore and Udupi news
ಅಪರಾಧಉಡುಪಿಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಉಡುಪಿ: ವೈದ್ಯ ವಿದ್ಯಾರ್ಥಿಗೆ ಯುಕೆಯಲ್ಲಿ ಸೀಟು ಕೊಡಿಸುವುದಾಗಿ ಲಕ್ಷಾಂತರ ವಂಚನೆ – ಮೂವರ ಬಂಧನ.!

Advertisement

ಉಡುಪಿ: ವೈದ್ಯ ವಿದ್ಯಾರ್ಥಿಗೆ ಯುಕೆಯಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಸುಮನ್ ಎಸ್ (24), ಸುಹಾನ್ ಖಾನ್(22) ಮತ್ತು ಮೊಹಮ್ಮದ್ ಮಹಾಝ್ ಬಂಧಿತರು.

ವೈದ್ಯ ವಿದ್ಯಾರ್ಥಿ ಹೆಚ್ಚಿನ M.PH ವಿಧ್ಯಾಭ್ಯಾಸನ್ನು ಯುಕೆ ಯಲ್ಲಿ ಮಾಡಲು ಬಯಸಿದ್ದರು. ಇವರು ದುಬೈಗೆ ತೆರಳಿ ಅಫ್ತಾಬ್ ನನ್ನು ಭೇಟಿ ಮಾಡಿದ್ದು, ನಂತರ UK ಯಲ್ಲಿ M.PH ವಿಧ್ಯಾಭ್ಯಾಸಕ್ಕಾಗಿ ಸೀಟಿಗೆ 18 ಲಕ್ಷಕ್ಕೆ ಇಬ್ಬರ ನಡುವೆ ಒಪ್ಪಂದವಾಗಿತ್ತು.ಅಫ್ತಾಬ್ ವಿದ್ಯಾರ್ಥಿಗೆ ಸೀಟನ್ನು ಖಾಯಂ ಮಾಡಲು ಮೊದಲಿಗೆ 8.5 ಲಕ್ಷವನ್ನು ನೀಡುವಂತೆ ಕೇಳಿದ್ದ. ಅದನ್ನು ವಿದ್ಯಾರ್ಥಿ ನೀಡಿದ್ದ. ನಂತರ ಆರೋಪಿಗಳು ವಿದ್ಯಾರ್ಥಿಯ ಕರೆಯನ್ನು ಸ್ವೀಕರಿಸದೇ ಯುಕೆಯಲ್ಲಿ M.PH ವಿಧ್ಯಾಭ್ಯಾಸಕ್ಕೆ ಸೀಟನ್ನೂ ಕೊಡಿಸದೇ ವಂಚಿಸಿದ್ದಾಗಿ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇದೀಗ ಮೂವರನ್ನು ಬಂಧಿಸಿರುವ ಪೊಲೀಸರು ಅವರಿಂದ 5 ಲಕ್ಷ ನಗದು, ಇನ್ನೋವಾ ಕಾರು ಮತ್ತು 2 ಮೊಬೈಲ್ ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 9,56,000 ರೂ. ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Related posts

Leave a Comment