ಸುರತ್ಕಲ್: ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಕೆರೆಯಲ್ಲಿ ಶಿಲಾವಸ್ಥೆಯಲ್ಲಿದ್ದ ಅಯ್ಯಪ್ಪ ದೇವರ ಮೂರ್ತಿಯನ್ನು ವಿಜೃಂಭಣೆಯ ಮೆರವಣಿಗೆ ಮೂಲಕ ಶ್ರೀ ಅಯ್ಯಪ್ಪ ದೇವಸ್ಥಾನ ಕೂರಿಕಟ್ಟ, ಪಣಂಬೂರು ಇಲ್ಲಿಗೆ ಸಾಗಿಸಲಾಗಿದೆ.
ಶ್ರೀ ಅಯ್ಯಪ್ಪ ದೇವಸ್ಥಾನ ಕೂರಿಕಟ್ಟ ಇದರ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಡಿಸೆಂಬರ್ 20ರಿಂದ25-2024ರ ವರೆಗೆ ನಡೆಯಲಿದೆ. ಈ ಪ್ರಯುಕ್ತ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಶೋಭಾಯಾತ್ರೆ ನಡೆಯಿತು. ಮೂರ್ತಿ ಮೆರವಣಿಗೆ ಹಾಗೂ ಹೊರಕಾಣಿಕೆ, ದೇವರ ಬೆಳ್ಳಿ ಕವಚ, ಪಾಣಿಪೀಠ ಕವಚ ಹಾಗೂ ಶಿಖರ ಕಲಶ ಮೆರವಣಿಗೆಯು ಶ್ರೀ ಚಿತ್ರಾಪುರ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿದ್ಯೆಂದ್ರ ತೀರ್ಥ ಶ್ರೀಪಾದರ ಶುಭಾಶಿರ್ವದದೊಂದಿಗೆ ಚೆಂಡೆ ವಾದ್ಯ ಮೇಳಗಳ ಮೂಲಕ ವಿಜೃಂಭಣೆಯಯಿoದ ಸಾಗಿತು.
ನಂತರ ನೂತನ ದೇಗುಲದ ಶಿಲ್ಪ ಪೂಜೆ, ಭೂಶುದ್ಧಿ, ಸಪ್ತಶುದ್ಧಿ, ಪ್ರಾಸಾದ ಶುದ್ದಿ, ವಾಸ್ತು ಹೋಮ, ರಾಕ್ಷೆಘ್ನ ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ಪ್ರಾಕಾರ ಬಲಿ, ರಾತ್ರಿ ಪೂಜೆ ನೆರವೇರಿತು. ಬಳಿಕ ನೂತನ ಮಹಾದ್ವಾರ ಉದ್ಘಾಟನೆ ಹಾಗೂ ಶ್ರೀ ಧರ್ಮಶಾಸ್ತ್ರ ಸಭಾಭವನ ಉದ್ಘಾಟನೆ ಹಾಗೂ ನೂತನ ಮಹಾದ್ವಾರ ಉದ್ಘಾಟನೆ, ಶ್ರೀ ಧರ್ಮಶಾಸ್ತ್ರ ಸಭಾಭವನ ಉದ್ಘಾಟನೆ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಜರಗಿತು.