
ಮಂಗಳೂರು : 31 ವರ್ಷದ ಶರಣಪ್ಪ ಎಂಬಾತನನ್ನು ಹತ್ಯೆಗೈದ ಆರೋಪಿಗಳಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಅಪರಾಧಿಗಳನ್ನು ಬಿಹಾರ ಮೂಲದ ಸುನ್ನಿಬಾಬು ಮತ್ತು ಗಲ್ಲು ರಾಮ್ (ಸಚಿನ್ ಅಥವಾ ನವೀನ್ ಎಂದೂ ಕರೆಯುತ್ತಾರೆ) ಎಂದು ಗುರುತಿಸಲಾಗಿದೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 302 ರ ಅಡಿಯಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ.
೨020 ರ ಜನವರಿ 30 ರಂದು ರಾತ್ರಿ 10 ಗಂಟೆ ಸುಮಾರಿಗೆ ಮೂಲ್ಕಿ ತಾಲೂಕಿನ ಕಾರ್ನಾಡ್ ಗ್ರಾಮದ ವನಭೋಜನ ಎಂಬಲ್ಲಿ ಕೊಲೆ ನಡೆದಿದೆ. ಆರೋಪಿಗಳು ಶರಣಪ್ಪ ಅವರ ಮೇಲೆ ಹಾಗೂ ಅವರ ಕುಟುಂಬದವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಆಕ್ರೋಶದ ಭರದಲ್ಲಿ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.
ಎಎಸ್‌ಐ ಉಮೇಶ್ ಅವರ ಬೆಂಬಲದೊಂದಿಗೆ ಮೂಲ್ಕಿ ಠಾಣೆ ಇನ್ಸ್‌ಪೆಕ್ಟರ್ ಜಯರಾಮ ಗೌಡ ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸಿದ್ದರು.ಪಬ್ಲಿಕ್ ಪ್ರಾಸಿಕ್ಯೂಟರ್ ಮೋತಿಲಾಲ್ ಚೌದರಿ ಅವರು ರಾಜ್ಯದ ವಾದವನ್ನು ಮಂಡಿಸಿ, ಶಿಕ್ಷೆಯನ್ನು ಖಚಿತಪಡಿಸಿದರು. ನ್ಯಾಯಾಧೀಶ ಕಾಂತರಾಜ್ ಎಸ್ ವಿ ಅವರು ಡಿಸೆಂಬರ್ 20 ರಂದು ತೀರ್ಪು ನೀಡಿದ್ದಾರೆ.