Mangalore and Udupi news
Blog

ವ್ಯಕ್ತಿಯೋರ್ವರಿಗೆ ತಲವಾರಿನಿಂದ ಹಲ್ಲೆ : ಇಬ್ಬರು ಅರೆಸ್ಟ್…!!

ಹಿರಿಯಡ್ಕ : ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪ ವ್ಯಕ್ತಿಯೋರ್ವರು ಕೆಲಸ ಮುಗಿಸಿ ಬೈಕಿನಲ್ಲಿ ಮನೆಗೆ ಬರುತ್ತಿರುವಾಗ ಅಡ್ಡಗಟ್ಟಿ ಇಬ್ಬರು ತಲವಾರಿನಿಂದ ಹಲ್ಲೆ ನಡೆಸಿದ ಘಟನೆ ಸಂಭವಿಸಿದ. ಹಲ್ಲೆಗೊಳಾಗದ ವ್ಯಕ್ತಿ ಶಿವರಾಜ್ ಎಂದು ತಿಳಿದು ಬಂದಿದೆ.ಹಲ್ಲೆ ನಡೆಸಿದ ಇಬ್ಬರು ಆರೋಪಿಗಳಾದ ಮಂಜುನಂದ ಹೆಗ್ಡೆ ಹಾಗೂ ಜಗದೀಶ್ ಹೆಗ್ಡೆ ಎಂದು ‌ತಿಳಿಯಲಾಗಿದೆ.ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಘಟನೆ ಸಾರಾಂಶ : ದಿನಾಂಕ 15/11/2025 ರಂದು ಪಿರ್ಯಾದಿದಾರರಾದ ಶಿವರಾಜ್‌ರವರು ಕೆಲಸ ಮುಗಿಸಿ ವಾಪಾಸ್ಸು ಮನೆಗೆ ಬರುವಾಗ 22:50 ಗಂಟೆ ಸಮಯಕ್ಕೆ ಕೊಪ್ಪಲ ಎಂಬಲ್ಲಿ ಪಿರ್ಯಾದಿದಾರರ ಬೈಕನ್ನು ಮಂಜುನಂದ ಹೆಗ್ಡೆ ರವರು ಅಡ್ಡಗಟ್ಟಿ ತಲವಾರನ್ನು ಪಿರ್ಯಾದಿದಾರರ ತಲೆಗೆ ಮಾರಣಾಂತಿಕವಾಗಿ ಹೊಡೆದು ಕೊಲೆಗೆ ಪ್ರಯತ್ನಿಸಿದ್ದು , ಪಿರ್ಯಾದಿದಾರರು ಕೂಡಲೇ ಬೈಕ್‌ ನಿಂದ ಕೆಳಗೆ ಬಿದ್ದಿದ್ದು , ನಂತರ ಮಂಜುನಂದ ಹೆಗ್ಡೆ, ರವರು ಪಿರ್ಯಾದಿದಾರರ ಹೊಟ್ಟೆಯ ಎಡ ಭಾಗಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ , ಭುಜದ ಕೆಳಗೆ ತಲವಾರಿನಿಂದ ಹೊಡೆದಿರುವುದಾಗಿದೆ. ಸದ್ರಿ ಸಮಯ ಮಂಜುನಂದ ಹೆಗ್ಡೆ ರವರ ಜೊತೆಗೆ ಜಯಾನಂದ ಹೆಗ್ಡೆ , ಚಂದ್ರಹಾಸ ಹೆಗ್ಡೆ ಹಾಗೂ ಇತರ 7-8 ಜನ ಇತರರು ಜಾಗದಲ್ಲಿ ಇದ್ದು ಹಲ್ಲೆಗೆ ಪ್ರಯತ್ನಿಸಿರುತ್ತಾರೆ.ಎಂಬಿತ್ಯಾದಿಯಾಗಿ ನೀಡಿದ ಪಿರ್ಯಾದಿನಂತೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ : 83/2025 ಕಲಂ: 109 (1),126 (2),191(2),191(3),190 BNS ರಂತೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿರುತ್ತದೆ. ಪುನೀತ್‌ ಕುಮಾರ್‌ ಬಿ.ಇ ಪಿ.ಎಸ್‌.ಐ (ಕಾ&ಸು) ಹಿರಿಯಡಕ ಪೊಲೀಸ್‌ ಠಾಣೆ ಹಾಗೂ ಅವರ ತಂಡ ಆರೋಪಿಗಳಾದ ಜಗದೀಶ್ ಹೆಗ್ಡೆ @ ಜಗದೀಶ್ಚಂದ್ರ ಹೆಗ್ಡೆ, ಪ್ರಾಯ: 48 ವರ್ಷ, ತಂದೆ: ದಿ.ಕೃಷ್ಣಯ್ಯ ಹೆಗ್ಡೆ, ವಿಳಾಸ: ಸುಪ್ರಬ,ಕೊಪ್ಪಲ, ಕಣಜಾರು ಗ್ರಾಮ, ಕಾರ್ಕಳ ತಾಲೂಕು,ಉಡುಪಿ ಜಿಲ್ಲೆರವರನ್ನು ದಿನಾಂಕ 17/11/2025 ರಂದು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ. ಪ್ರಕರಣದ ಪ್ರಮುಖ ಆರೋಪಿ ಮಂಜುನಂದ ಹೆಗ್ಡೆ, ಪ್ರಾಯ: 49 ವ̧ರ್ಷ ತಂದೆ:ದಯಾನಂದ ಹೆಗ್ಡೆ ವಿಳಾಸ: ಪರಾರಿ ಮನೆ, ಕಣಜಾರು ಪೋಸ್ಟ್‌, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆಈತನು ಕೃತ್ಯ ಎಸಗಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ದಿನಾಂಕ 18/11/2025 ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ ಆತನನ್ನು ದಸ್ತಗಿರಿ ಮಾಡಿ ಆತನು ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ರಾಡನ್ನು ಸ್ವಾಧೀನಪಡಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

Related posts

Leave a Comment