ಮಂಗಳೂರು: ಮಾದಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕನೋರ್ವನನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ನಗರದ ಕುಂಟಿಕಾನ ನಿವಾಸಿ ಶಬರೀಶ್ ಯಾನೆ ಶಬರಿ (24) ಎಂದು ತಿಳಿದು ಬಂದಿದೆ.
ನಗರದ ಬೋಳೂರಿನಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟಕ್ಕೆ ಬರುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಮಂಗಳವಾರ ಮಧ್ಯಾಹ್ನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ತಾನು ಎಂಡಿಎಂಎಯನ್ನು ನಗರದ ಕದ್ರಿ ಕಂಬಳದ ನಿವಾಸಿ ಅಮಾನ್ ಎಂಬಾತನಿಂದ ಪಡೆದುಕೊಂಡಿರುವ ಬಗ್ಗೆ ತಿಳಿಸಿದ್ದಾನೆ.

