ಅಕ್ರಮವಾಗಿ ಗೋಕಳ್ಳತನ ಮಾಡಿಕೊಂಡು ಹೋಗುತ್ತಿದ್ದ BREEEZA ಕಾರ್ ಲೈಟ್ ಕಂಬಕ್ಕೆ ಡಿಕ್ಕಿ…
ಸಕಲೇಶಪುರ : ನಗರದಲ್ಲಿ ಮತ್ತೆ ಐಷಾರಾಮಿ ಕಾರ್’ನಲ್ಲಿ ತಲ್ವಾರ್ ತೋರಿಸಿ ಹಟ್ಟಿಯಲ್ಲಿರುವ ಕಟ್ಟಿರುವ ಹಾಗೂ ರಸ್ತೆ ಬದಿಯಲ್ಲಿ ಮಲಗಿರುವ ಗೋವುಗಳನ್ನು ಕಳ್ಳತನ ಮಾಡುವ ತಂಡ ಸಕ್ರಿಯವಾಗಿದೆ.
ಶನಿವಾರ ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಅನಾಮಧೇಯ ವ್ಯಕ್ತಿಯೊಬ್ಬರು ನೀಡಿದ ಮಾಹಿತಿ ಮೇರೆಗೆ ಸಕಲೇಶಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75 ಹೆಗ್ಗದ್ದೆ ಬಳಿ BREEZA ಕಾರಿನಲ್ಲಿ ಗೋವು ಸಾಗಿಸುತ್ತಿರುವುದನ್ನು ಖಚಿತ ಪಡಿಸಿಕೊಂಡು ರಾಷ್ಟ್ರೀಯ ಹೆದ್ದಾರಿ 75’ರಲ್ಲಿ ಮಂಗಳೂರು ಕಡೆ ಚಲಿಸುತ್ತಿದ್ದ ಬಳಿ ಬಣ್ಣದ BREEEZA ಕಾರನ್ನು ಬೆನ್ನಟ್ಟಿದ್ದು ಕೇವಲ 2 ನಿಮಿಷಗಳ ಅಂತರದಲ್ಲಿ ಮಾರನಹಳ್ಳಿ ಗ್ರಾಮದಲ್ಲಿರುವ ಗ್ರಾಮಾಂತರ ಠಾಣೆಯ ಚೆಕ್ ಪೋಸ್ಟ್ ದಾಟಿದೆ.



ಅತಿವೇಗವಾಗಿ ಚಾಲನೆ ಮಾಡುತ್ತಿದ್ದ ಮಾಡುತ್ತಿದ್ದ ಕಾರನ್ನು ಗ್ರಾಮಾಂತರ ಠಾಣೆಯ 1 ಕಿ.ಮೀ ದಾಟಿ ಶಿರಾಡಿ ಘಾಟ್ ಕಡೆ ಹೋದರು ಬಿಡದೆ ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರ ಬೆನ್ನಟ್ಟಿದ್ದು ಹಿಂದೆ ಹಿಂಬಾಲಿಸುತ್ತಿರುವುದನ್ನು ಗಮನಿಸಿದ ಗೋಕಳ್ಳರು ತಪ್ಪಿಸಿಕೊಳ್ಳಲು ಅತಿ ವೇಗವಾಗಿ ಕಾರ್ ಚಲಾಯಿಸಿದ್ದು ಗ್ರಾಮಾಂತರ ಠಾಣೆಯ ಚೆಕ್ ಪೋಸ್ಟ್ ಇಂದ 2 ಕಿಲೋ ಮೀಟರ್ ಅಂತರದಲ್ಲಿ ಕಾರ್ ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಕಾರನ್ನು ಬಿಟ್ಟು ಗೋಕಳ್ಳರು ಓಡಿ ಹೋಗಿದ್ದಾರೆ.



ಕಾರಿನ ಹಿಂಬದಿಯ ಸೀಟ್ ತೆಗೆದು 4 ಗೋವುಗಳನ್ನು ಹಿಂಸಾತ್ಮಕವಾಗಿ ತುಂಬಿದ್ದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಪೋಲಿಸರಿಗೆ ಮಾಹಿತಿ ನೀಡಿ ತಕ್ಷಣ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಗೋವುಗಳನ್ನು ಕಾರಿನಿಂದ ಇಳಿಸಿ ಮತ್ತೊಂದು ಗೂಡ್ಸ್ ವಾಹನಕ್ಕೆ ತುಂಬಿ ಪೋಲಿಸರ ಕ್ರೇನ್ ಮುಖಾಂತರ ಕಾರನ್ನು ಠಾಣೆಗೆ ನೀಡಲಾಗಿದೆ.
ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಗೋವುಗಳನ್ನು ಗೋಶಾಲೆ ಬಿಡಲಾಗಿದ್ದು ಪ್ರಕರಣ ದಾಖಲಿಸಿಕೊಂಡು ಕಾರಿನ ಒಳ ಭಾಗದಲ್ಲಿ ಅನೇಕ ರಾಜ್ಯಗಳ ನಕಲಿ ನಂಬರ್ ಪ್ಲೇಟ್ ದೊರೆತಿದ್ದು ಪೋಲಿಸರು ತನಿಖೆ ನಡೆಸುತ್ತಿದ್ದಾರೆ.


