Mangalore and Udupi news
Blog

ಬೈಂದೂರು: ಬಲಿಗಾಗಿ ಕಾಯುತ್ತಿದೆ ರಸ್ತೆಯ ಬದಿಯಲ್ಲಿರುವ ಆಳೆತೆರದ ರಸ್ತೆಗೆ ಬಾಗಿದ ಹಸಿರು ಹುಲ್ಲು…!!

ಬೈಂದೂರು: ಉಡುಪಿ ಜಿಲ್ಲೆ ಯ ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರದ ಗಂಗೊಳ್ಳಿ, ಮುಳ್ಳಿಕಟ್ಟೆ, ತ್ರಾಸಿ ಸಂಪರ್ಕಿಸುವ PWD ಮುಖ್ಯರಸ್ತೆಯ ಎರಡು ಬದಿಯಲ್ಲಿ ಎತ್ತರದ ಹಸಿರು ಹುಲ್ಲು ಬೆಳೆದು ನಿಂತಿದೆ,

ಹೌದು ಗುಜ್ಜಾಡಿ ಗ್ರಾಮದ ಮುಳ್ಳಿಕಟ್ಟೆ ನಾಯಕವಾಡಿ ಸಂಪರ್ಕಿಸುವ PWD ಮುಖ್ಯ ರಸ್ತೆಯ ಗೇರು ಪ್ಲಾಂಟೇಶನ್ ಹತ್ತಿರ ಜನರು ಓಡಾಡಲು ಕಷ್ಟ ಸಾಧ್ಯವಾಗಿದೆ, ದಿನನಿತ್ಯ ಗುಂಗೊಳ್ಳಿ ಬಂದವರಿಗೆ ಹಾಗೂ ಕುಂದಾಪುರ ಕಡೆಗೆ ದಿನನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿದ್ದು ಮಳೆಗಾಲದ ಸಮಯದಲ್ಲಿ ಹಸಿರು ಹುಲ್ಲುಗಳು ಸರಿಸುಮಾರು 20 ಪೀಟಿಕಿಂತಲೂ ಹೆಚ್ಚು ಉದ್ದದ ಹಸಿರು ಹುಲ್ಲು ಬೆಳೆದು ಆಳೆಎತ್ತರಕ್ಕೆ ನಿಂತುಬಿಟ್ಟಿದೆ ನಿನ್ನೆ ರಾತ್ರಿ ಸುರಿದ ಬಾರಿ ಮಳೆಗೆ ಹಸಿರು ಹುಲ್ಲುಗಳು ರೋಡಿಗೆ ಬಾಗಿ ವಾಹನ ಸವಾಲಿಗೆ ಕಂಟಕವಾಗಿ ಪರಿಣಮಿಸಿದೆ,

ಸಮಾಜ ಸೇವಕ ಮಾಲಿಂಗ ಪೂಜಾರಿ ಮಾವಿನಕಟ್ಟೆ ಯವರು ಇಂತಹ ಪರಿಸ್ಥಿತಿ ನೋಡಿ ಪ್ರತಿ ದಿನ ವಿದ್ಯಾರ್ಥಿಗಳು, ಹಾಗೂ ಮಹಿಳೆಯರು ಕೆಲಸಕ್ಕೆ ಹೋಗಿ ಬರುವ ರಸ್ತೆ ಇದಾಗಿದ್ದು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ರಸ್ತೆ ಅಪಘಾತ ಮತ್ತು ಚಿನ್ನಾಭರಣ ಕಳ್ಳತನ ಸಾಕಷ್ಟು ಭಾಗದಲ್ಲಿ ನಡೆಯುತ್ತಿದೆ, ದುರ್ಘಟನೆ ಸಂಭವಿಸುವ ಮೊದಲೇ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕು ಎಂದು ಮಾಧ್ಯಮದ ಮುಂದೆ ತಮ್ಮ ಆಕ್ರೋಶ ಹೊರಹಾಕಿ ಸಂಬಂಧಪಟ್ಟವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

Related posts

Leave a Comment