Mangalore and Udupi news
Blog

ಹಿಂದೂ ಸಂಘಟನೆಯ ಹೆಸರಿನಲ್ಲಿ ರಾಜ್ಯಕ್ಕೆ ಮಾದರಿಯಾದ ಸಂಸ್ಥೆಯಿಂದ ಎರಡು ಬಡಕುಟುಂಬಗಳಿಗೆ ಧನಸಹಾಯ

ಸೇವಾಹಿ ಪರಮೋ ಧರ್ಮ ಎಂಬ ಗುರಿಯನ್ನು ಇಟ್ಟುಕೊಂಡು ಸ್ಥಾಪನೆಯಾದ “ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ಮಂಗಳೂರು” ಸೇವಾ ಸಂಸ್ಥೆಯು ತನ್ನ ಮಾಸಿಕ ಹಾಗೂ ತುರ್ತು ಸೇವಾ ಕಾರ್ಯದಲ್ಲಿ ಏಳು ವರ್ಷಗಳಲ್ಲಿ ಪ್ರತಿ ತಿಂಗಳು ಹಲವಾರು ಕುಟುಂಬಕ್ಕೆ ನೇರವಾಗಿ ಪ್ರಚಾರದ ಹಂಗಿಲ್ಲದೆ ಸಮಾಜ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಬಂದಿದೆ. ಏಳು ವರ್ಷದಲ್ಲಿ
68,00,000 ಲಕ್ಷ ರೂಪಾಯಿಗಳ ಸಹಾಯಧನವನ್ನು ಸೇವಾ ರೂಪದಲ್ಲಿ ನೀಡಿದೆ


*ಮಂಗಳೂರು ಗಂಜಿಮಠ ಗ್ರಾಮದ ನಿವಾಸಿಯಾದ ಯೋಗಿಶ್ ಇವರಿಗೆ 50,000 ರೂಪಾಯಿ ಮತ್ತು
ಕುಪ್ಪೆಪದವುವಿನ ಪದ್ಮಾವತಿ ಅವರ ಗಂಡನಿಗೆ ಸ್ಟ್ರೋಕ್ ಆಗಿ ಮಾನಸಿಕ ರೋಗಕ್ಕೆ ತುತ್ತಾಗಿದ್ದು ಇವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು 25,000 ಧನಸಹಾಯ ಮಾಡಿದ್ದಾರೆ.
2 ಅಶಕ್ತ ಬಡ ಕುಟುಂಬಗಳಿಗೆ ಓಟ್ಟು ₹ 75,000 ಧನಸಹಾಯ ನೀಡಿದ್ದು ಹನಿ ಹನಿ ಸೇರಿದರೆ ಹಳ್ಳ ಎಂಬಂತೆ ನಿಮ್ಮ ಸಣ್ಣ ನೆರವು 2 ಅಶಕ್ತ ಕುಟುಂಬಕ್ಕೆ ಆಸರೆಯಾಗಿದೆ.

Related posts

Leave a Comment