Mangalore and Udupi news
Blog

ಕಪಿಲ ಗೋ ಶಾಲೆಯಲ್ಲಿ ಸೋಮವಾರ ನಡೆಯಲಿದೆ ಪತ್ರಿಕಾ ಗೋಷ್ಠಿ

ಪ್ರಕೃತಿ ಮತ್ತು ಪಶು ಸಂರಕ್ಷಣೆಯ ಮಹತ್ವ ಸಾರುವ ಮತ್ತು ಗೋವಿನ ಪಾವಿತ್ರ್ಯವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಕಪಿಲಾ ಪಾರ್ಕ್ ಗೋ ಶಾಲೆ, ಕೆಂಜಾರು, ಮರವೂರ್ ನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಕಾರ್ಯಕ್ರಮದ ಪೂರ್ವಭಾವಿ ಮಾಹಿತಿ ನೀಡಲು ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದೆ.


ಪತ್ರಿಕಾಗೋಷ್ಠಿ ದಿನಾಂಕ ಅಕ್ಟೋಬರ್ 20, 2025 (ಸೋಮವಾರ)
ಸಮಯ ಮಧ್ಯಾಹ್ನ 3:30 ಗಂಟೆಗೆ
ಸ್ಥಳ:ಕಪಿಲಾ ಪಾರ್ಕ್ ಗೋ ಶಾಲೆ, ಕೆಂಜಾರು, ಮರವೂರ್, ಮಂಗಳೂರಿನಲ್ಲಿ ನಡೆಯಲಿದೆ.


ಈ ಪತ್ರಿಕಾಗೋಷ್ಠಿಯಲ್ಲಿ, ಕಪಿಲಾ ಪಾರ್ಕ್ ಗೋ ಶಾಲೆಯಲ್ಲಿ ನಡೆಯಲಿರುವ ‘108 ಕಪಿಲಾ ಗೋವುಗಳ ಸಾರ್ವಜನಿಕ ಗೋ ಪೂಜೆ’ ಕಾರ್ಯಕ್ರಮದ ಕುರಿತು ಸಮಗ್ರ ಮಾಹಿತಿ ನೀಡಲಾಗುವುದು. ಗೋ ಪೂಜೆಯ ದಿನಾಂಕ, ಸಮಯ, ಕಾರ್ಯಕ್ರಮದಲ್ಲಿ ಭಾಗವಹಿಸುವ ಸಮಾಜದ ಗಣ್ಯ ವ್ಯಕ್ತಿಗಳು ಹಾಗೂ ಗೋ ಸಂರಕ್ಷಣೆಗಾಗಿ ರೂಪಿಸಲಾಗಿರುವ ಯೋಜನೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಲಾಗುವುದು.

ಸಂಸ್ಥೆಯು ಆಯೋಜಿಸುತ್ತಿರುವ ಈ ವಿಶೇಷ ಮತ್ತು ಧಾರ್ಮಿಕ ಮಹತ್ವದ ಕಾರ್ಯಕ್ರಮದ ಕುರಿತು ವಿವರಗಳನ್ನು ಪಡೆಯಲು ಮತ್ತು ಸಾರ್ವಜನಿಕರಿಗೆ ತಲುಪಿಸಲು ಮಾಧ್ಯಮ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕೆಂದು ಕೋರಲಾಗಿದೆ.

ಗೋ ಶಾಲೆಯ ಪದಾಧಿಕಾರಿಗಳು ಮತ್ತು ಆಡಳಿತ ಮಂಡಳಿಯ ಸದಸ್ಯರು.
ಕಾರ್ಯಕ್ರಮದ ಮುಖ್ಯ ಆಯೋಜಕರು ಮತ್ತು ಸ್ಥಳೀಯ ಪ್ರಮುಖರು.
ಸಹಕಾರ ಕೋರುವವರು,
ಕಪಿಲಾ ಪಾರ್ಕ್ ಗೋ ಶಾಲೆ (ಆಡಳಿತ ಮಂಡಳಿ)
ಕೆಂಜಾರು, ಮರವೂರು, ಮಂಗಳೂರು.

Related posts

Leave a Comment