Mangalore and Udupi news
Blog

ಕಾರ್ಕಳ : ಪಾದಚಾರಿಯೊಬ್ಬರಿಗೆ ಆಟೋ ರಿಕ್ಷಾ ಢಿಕ್ಕಿ ಹೊಡೆದು ಸಾವು…!!

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಪಾದಚಾರಿಯೊಬ್ಬರಿಗೆ ಆಟೋ ರಿಕ್ಷಾ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಸಂಭವಿಸಿದೆ ಸಾವನ್ನಪ್ಪಿದ ವ್ಯಕ್ತಿ ರಾಜೇಶ್ ಎಂದು ತಿಳಿದು ಬಂದಿದೆ. ಢಿಕ್ಕಿ ಹೊಡೆದ ಆಟೋ ಚಾಲಕ ಪ್ರೇಮಾನಂದ ಎಂದು ಗುರುತಿಸಲಾಗಿದೆ.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ದಿನಾಂಕ 05/10/2025 ರಂದು ರಾತ್ರಿ 11:00 ಗಂಟೆಗೆ ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಬೆಳ್ಮಣ್ ಬೋರ್ಡ್ ಶಾಲೆಯ ಬಳಿ ಹಾದು ಹೋಗಿರುವ ಪಡುಬಿದ್ರೆ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಪಿರ್ಯಾದಿದಾರರಾದ ರೂಪಾನ್ ಮರಾಂಡಿ (21),ಜಾರ್ಖಂಡ್ ರಾಜ್ಯ,ಹಾಲಿ ವಾಸ: ಜೀಸಸ್ ವುಡ್ ಇಂಡಸ್ಟ್ರೀಸ್ ನಂದಳಿಕೆ ಅಂಚೆ, ಕಾರ್ಕಳ ಇವರು ಸ್ನೇಹಿತ ರಾಜೇಶ್ ಎಂಬುವವರೊಂದಿಗೆ ಬೆಳ್ಮಣ್ ಪೇಟೆ ಕಡೆಯಿಂದ ಗೋಳಿಕಟ್ಟೆ ಕಡೆಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅಟೋ ರಿಕ್ಷಾ ನಂಬ್ರ KA-20-D-6545 ನೇದರ ಚಾಲಕ ಪ್ರೇಮಾನಂದ ಅಟೋರಿಕ್ಷಾವನ್ನು ಅದೇ ದಿಕ್ಕಿನಲ್ಲಿ ಬೆಳ್ಮಣ್ ಕಡೆಯಿಂದ ಕಾರ್ಕಳ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷತನದಿಂದ ಆತನ ತೀರಾ ಎಡಬದಿಯಲ್ಲಿ ಚಲಾಯಿಸಿಕೊಂಡು ಬಂದು ಪಾದಚಾರಿ ರಾಜೇಶ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ರಾಜೇಶ್ ರವರು ಡಾಮಾರು ರಸ್ತೆಗೆ ಬಿದ್ದು, ಅವರ ತಲೆಗೆ ರಕ್ತ ಗಾಯವಾಗಿದ್ದು, ಗಾಯಾಳು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ 07/10/2025 ರಂದು ಬೆಳಿಗ್ಗೆ 07:35 ಗಂಟೆಗೆ ಮೃತಪಟ್ಟಿರುವುದಾಗಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 120/2025 ಕಲಂ: 281, 106 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Related posts

Leave a Comment