Mangalore and Udupi news
Blog

ಕಂಬಳದ ಹಿರಿಯ ಓಟಗಾರ ಭಾಸ್ಕರ್ ಶೆಟ್ಟಿ ನಿಧನ…!!

ಮಂಗಳೂರು : ಕಂಬಳದ ಹಿರಿಯ ಅನುಭವಿ ಓಟಗಾರರಾದ ಪೇಜಾವರ ಭಾಸ್ಕರ ಶೆಟ್ಟಿಯವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಭಾಸ್ಕರ ಶೆಟ್ಟಿ ಅವರಿಗೆ 74ವರ್ಷ ವಯಸ್ಸಾಗಿತ್ತು. ಬಜ್ಪೆಯ ಪೆರ್ಕೋಡಿಯ ಪೇಜಾವರ ಭಾಸ್ಕರ ಶೆಟ್ಟಿ 1970ರಲ್ಲಿ ಕಂಬಳದಲ್ಲಿ ಓಟಗಾರರಾಗಿ ಪ್ರಸಿದ್ಧಿಯನ್ನು ಪಡೆದಿದ್ದರು.

ಬಾಲ್ಯದಿಂದಲೂ ಇವರು ಕಂಬಳ ಕ್ಶೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದರು. ಕೃಷಿ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಗೊಂಡಿದ್ದು, ಕಂಬಳ ಓಟಗಾರರಾಗಿ ಹಲವಾರು ಪ್ರಶಸ್ತಿಯನ್ನು ಪಡೆದಿದ್ದಾರೆ. ಇತ್ತೀಚೆಗೆ ನಡೆದ ಕಂಬಳದಲ್ಲಿ ಹಿರಿಯ ಕಂಬಳ ಓಟಗಾರ ಎಂಬ ಗೌರವಕ್ಕೂ ಪಾತ್ರದಾಗಿದ್ದರು.

ಭಾಸ್ಕರ ಶೆಟ್ಟಿಯವರು ಇದೀಗ ನಿಧನರಾಗಿದ್ದು, ಅನೇಕ ಬಂಧು ಮಿತ್ರರನ್ನು ಅಗಲಿದ್ಡಾರೆ.

Related posts

Leave a Comment