Mangalore and Udupi news
Blog

ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ಬ್ರಹ್ಮಕಲಶೋತ್ಸವ ನಿಮಿತ್ತ ಅ.12 ರಂದು ಮುಂಬಯಿಯಲ್ಲಿ ಪೂರ್ವಭಾವಿ ಸಭೆ

ಮುಂಬಯಿ : ಇತಿಹಾಸ ಪ್ರಸಿದ್ಧ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭವು ಮಾರ್ಚ್ 4 ರಿಂದ 8, 2026 ರವರೆಗೆ ನಡೆಯಲಿದೆ.

ಆ ಪ್ರಯುಕ್ತ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ವಾಮನ್ ಇಡ್ಯಾ, ಬ್ರಹ್ಮಕಲಶ ಸಮಿತಿಯ ಅಧ್ಯಕ್ಷರು, ಮಾಜಿ ಸಂಸದರಾದ ಶ್ರೀ ನಳಿನ್‌ಕುಮಾರ್ ಕಟೀಲ್ ಇವರ ಉಪಸ್ಥಿತಿಯಲ್ಲಿ ಅ. 12, ರಂದು ಬೆಳಿಗ್ಗೆ 10.30 ಕ್ಕೆ ಅಂಧೇರಿ ಪಶ್ಚಿಮದ ಮೊಗವೀರ ವ್ಯವಸ್ಥಾಪಕ ಮಂಡಳಿ ಇದರ ಕ್ಯಾಂಪಸ್, 2 ನೇ ಮಹಡಿ, ಎಂ.ವಿ.ಎಂ. ರಸ್ತೆ, ಅಂಧೇರಿ (ಪಶ್ಚಿಮ), ಮುಂಬಯಿ ಇಲ್ಲಿ ಶ್ರೀ ಕ್ಷೇತ್ರದ ಎಲ್ಲಾ ಭಕ್ತರ ಪೂರ್ವಭಾವಿ ಸಭೆ ನಡೆಯಲಿದ್ದು ಭಕ್ತಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಹಕರಿಸಬೇಕಾಗಿ ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಯ ಪರವಾಗಿ ಕ್ಷೇತ್ರದ ಆಡಳಿತ ಮೊಕ್ತೇಸರ ಚಂದ್ರಶೇಖರ ಆರ್. ಬೆಳ್ಚಡ ಮತ್ತು ಮುಂಬಯಿ ಉದ್ಯಮಿ, ಸಮಾಜ ಸೇವಕ ವೇದಪ್ರಕಾಶ್ ಎಂ ಶ್ರೀಯಾನ್ ವಿನಂತಿಸಿದ್ದಾರೆ.

Related posts

Leave a Comment