ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪ ಟಿಪ್ಪರ್ ಲಾರಿ ಹಾಗೂ ಪಿಕಪ್ ವಾಹನ ನಡುವೆ ನಡೆದ ಅಪಘಾತದಲ್ಲಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಮೃತಪಟ್ಟ ಯುವಕ ರಾಜ್ ಕುಮಾರ್ ಶರ್ಮಾ ಎಂದು ಗುರುತಿಸಲಾಗಿದೆ.
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣ ಸಾರಾಂಶ : ದಿನಾಂಕ: 25.09.2025 ರಂದು ಮದ್ಯಾಹ್ನ 3:30 ಗಂಟೆಗೆ KA20D8567 ನಂಬ್ರದ ಟಿಪ್ಪರ್ ಲಾರಿಯನ್ನು ಅದರ ಚಾಲಕ ಸಂತೋಷ್ ಕುಲಾಲ್ ಎಂಬವರು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಮಾನವ ಪ್ರಾಣಕ್ಕೆ ಹಾನಿಯಾಗುವ ರೀತಿಯಲ್ಲಿ ತೀವೃ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರೆ ಸೋನುದಾಭಾ ಎದುರು ರಾ.ಹೆ 66 ರಸ್ತೆಯಲ್ಲಿ ಟಿಪ್ಪರ್ ಲಾರಿಯ ಎದುರಿನಿಂದ ಹೋಗುತ್ತಿದ್ದ KA20AB9204 ನಂಬ್ರದ ಪಿಕಪ್ ವಾಹನದ ಹಿಂಬದಿಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಪಿಕಪ್ ವಾಹನ ಮುಂದಕ್ಕೆ ಹೋಗಿ ರಸ್ತೆಯಲ್ಲಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರಾಜಾ ಕುಮಾರ್ ಶರ್ಮಾ ಪ್ರಾಯ 23 ವರ್ಷ ಎಂಬವರಿಗೆ ಢಿಕ್ಕಿ ಹೊಡೆದು, ಮುಂದಕ್ಕೆ ಹೋಗಿ ರಸ್ತೆಯ ಬದಿಯಲ್ಲಿ ಇರುವ ಪಡುಬಿದ್ರೆ ಸಿಎ ಬ್ಯಾಂಕ್ ಗೋಡೌನ್ ಕಟ್ಟಡದ ಗೋಡೆಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಗೋಡೌನ್ ಕಟ್ಟಡ ಜಖಂಗೊಂಡಿದ್ದು, ಪಿಕಪ್ ವಾಹನದಲ್ಲಿ ಇದ್ದ ಚಾಲಕ ಆಸಿಫ್ ಇಕ್ಬಾಲ್ ಇವರಿಗೆ ಮೈಕೈ ಹಾಗೂ ಕುತ್ತಿಗೆಗೆ ಗುದ್ದಿದ ಗಾಯ ಹಾಗೂ ರಾಜಾ ಕುಮಾರ್ ಶರ್ಮಾ ಈತನ ತಲೆಗೆ ಗಂಭೀರ ಗಾಯಗೊಂಡು ಮಾತನಾಡದೆ ಇರುವ ಸ್ಥಿತಿಯಲ್ಲಿ ಇದ್ದು, ನಂತರ ಗಾಯಗೊಂಡವರನ್ನು ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ರಾಜಾ ಕುಮಾರ್ ಶರ್ಮಾ ಪ್ರಾಯ 23 ವರ್ಷ ಇವರನ್ನು ಮೈದ್ಯಾಧಿಕಾರಿಯವರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಅಪಘಾತಕ್ಕೆ KA20D8567 ನಂಬ್ರದ ಟಿಪ್ಪರ್ ಲಾರಿಯ ಚಾಲಕರು ಟಿಪ್ಪರ್ ಲಾರಿಯನ್ನು ಮಾನವ ಪ್ರಾಣಕ್ಕೆ ಹಾನಿಯಾಗುವ ರೀತಿಯಲ್ಲಿ ತೀವೃ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿಕಪ್ ವಾಹನದ ಹಿಂಬದಿಗೆ ಡಿಕ್ಕಿ ಹೊಡೆದಾಗ ಪಿಕಪ್ ವಾಹನವು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರಾಜಾ ಕುಮಾರ್ ಶರ್ಮಾ ಇವರಿಗೆ ಢಿಕ್ಕಿ ಹೊಡೆದುದೇ ಕಾರಣವಾಗಿರುತ್ತದೆ. ಈ ಬಗ್ಗೆ ಮೊಹಮ್ಮದ್ ಶಫಿ(31) ನಡ್ಸಾಲು ಗ್ರಾಮ, ಕಾಪು ತಾಲೂಕು ಇವರ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 114/2025 ಕಲಂ: 281,125 (A),106 (1) BNS ರಂತೆ ಪ್ರಕರಣ ದಾಖಲಾಗಿರುತ್ತದೆ.