ಬಂಟ್ವಾಳ: ಇಲ್ಲಿನ ಪುಂಜಾಲಕಟ್ಟೆ ಎಂಬಲ್ಲಿ ದ್ವಿಚಕ್ರ ವಾಹನ ಸವಾರ ವಿದ್ಯಾರ್ಥಿಯು ನಿಯಂತ್ರಣ ತಪ್ಪಿ ಪೊಲೀಸ್ ಜೀಪ್ ಗೆ ಢಿಕ್ಕಿ ಹೊಡೆದ ಗಾಯಗೊಂಡ ಘಟನೆ ನಡೆದಿದೆ.
ಗಾಯಗೊಂಡ ವಿದ್ಯಾರ್ಥಿಯನ್ನು ಪಿಲಾತಬೆಟ್ಟು ನಿವಾಸಿ ಹರ್ಷಿತ್ (19) ಎನ್ನಲಾಗಿದೆ.
ಇಲಾಖೆಯ ಪೊಲೀಸ್ ಜೀಪ್ ನಲ್ಲಿ ಧರ್ಮಸ್ಥಳ ಪೋಲೀಸ್ ಠಾಣೆಯ ಪಿಎಸ್.ಐ. ಮಂಗಳೂರು ನ್ಯಾಯಾಲಯಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ, ಪುಂಜಾಲಕಟ್ಟೆ ಕಟ್ಟೆಮನೆ ರಾಷ್ಟ್ರೀಯ ಹೆದ್ದಾರಿ ತಿರುವಿನಲ್ಲಿ ದ್ವಿಚಕ್ರವಾಹನ ಸವಾರ ನಿಯಂತ್ರಣ ಕಳೆದುಕೊಂಡು ಪೊಲೀಸ್ ಜೀಪ್ ಗೆ ಢಿಕ್ಕಿ ಹೊಡೆದು ರಸ್ತೆಗೆ ಬಿದ್ದು ಗಾಯಗೊಂಡಿದ್ದಾನೆ ಎನ್ನಲಾಗಿದೆ.
ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.